Raj Bhavan

ಮಹಾರಾಷ್ಟ್ರ ಗೌರ್ನರ್ ರಾಜೀನಾಮೆ ನೀಡಲು ಸಿದ್ಧ ಎಂದ ರೌತ್; ಹೇಳಿಕೆ ನಿರಾಕರಿಸಿದ ರಾಜಭವನ
ಶಿವಸೇನೆಯ ಉದ್ಧವ್ ಠಾಕ್ರೆಯ ಬಣದೊಂದಿಗೆ ಗುರುತಿಸಿಕೊಂಡಿರುವ ಸಂಜಯ್ ರೌತ್, ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಯಿಂದ ನಿರ್ಗಮಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೇಡಿಕೆ ಈಡೇರಿಕೆಯ ಉಲ್ಲಂಘನೆ: ದೇಶದಾದ್ಯಂತ ನವೆಂಬರ್ 26ರಿಂದ ರಾಜಭವನಗಳಿಗೆ ರೈತರ ಮೆರವಣಿಗೆ
ಕೇಂದ್ರ ಸರ್ಕಾರವು ತನ್ನ ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ರದ್ದುಗೊಳಿಸಿದ ಒಂದು ವರ್ಷದ ನಂತರ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತಮ್ಮ ಬಾಕಿ ಇರುವ ಇತರ ಬೇಡಿಕೆಗಳನ್ನು ಈಡೇರಿಸುವ ಕೇಂದ್ರದ ಭರವಸೆ ಉಲ್ಲಂಘನೆಯನ್ನು ವಿರೋಧಿಸಿ ನವೆಂಬರ್ 26 ರಂದು ರಾಜಭವನಗಳಿಗೆ ರಾಷ್ಟ್ರವ್ಯಾಪಿ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.

ಕುಲಪತಿ ಹುದ್ದೆಯಿಂದ ರಾಜ್ಯಪಾಲರ ವಜಾ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೇ ಕಳುಹಿಸಿದ ಕೇರಳ ಸರ್ಕಾರ!
ಕೇರಳದಲ್ಲಿ ಸಿಪಿಐ ಮಾರ್ಕ್ಸಿಸ್ಟ್ ನೇತೃತ್ವದ ಸರ್ಕಾರ, ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ವಜಾಗೊಳಿಸುವುದಕ್ಕಾಗಿ ಪ್ರಕಟಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೇ ಕಳುಹಿಸಿದೆ.

ರಾಜ್ಯಪಾಲರ ಪ್ರಶಸ್ತಿ ಆಮಿಷ ಒಡ್ಡಿ 1 ಲಕ್ಷ ರೂ. ವಂಚನೆ: ಇಬ್ಬರ ಬಂಧನ
ರಾಜಭವನದ ಅಧಿಕಾರಿ ಸೋಗಿನಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುತ್ತೇನೆಂದು ಆಮಿಷ ಒಡ್ಡಿ 1 ಲಕ್ಷ ರೂ ವಂಚನೆ ಮಾಡಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ನಮ್ಮ ಆತಿಥ್ಯ ವಿಭಾಗ ನಿರ್ವಹಿಸಿ: ಕೆಎಸ್ ಟಿಡಿಸಿಗೆ ರಾಜಭವನ ಆಫರ್!
ಶೀಘ್ರವೇ ರಾಜಭವನ ನವೀಕರಣಗೊಳ್ಳಲಿದ್ದು, ಇದೇ ಮೊದಲ ಬಾರಿಗೆ ಅಲ್ಲಿನ ಆತಿಥ್ಯ ವಿಭಾಗವನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವಹಿಸಿಕೊಳ್ಳಲಿದೆ.

ನೂತನ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಪ್ರಮಾಣ ವಚನ ಸ್ವೀಕಾರ
ರಾಜ್ಯದ ನೂತನ ಲೋಕಾಯುಕ್ತರಾಗಿ ನೇಮಕಗೊಂಡಿರುವ ನ್ಯಾಯಾಮೂರ್ತಿ ಬಿ.ಎಸ್. ಪಾಟೀಲ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಸಿಎಂ ಯಡಿಯೂರಪ್ಪ- ರಾಜ್ಯಪಾಲ ವಜುಭಾಯಿ ವಾಲಾ ಹಠಾತ್ ಭೇಟಿ, ರಾಜಕೀಯ ವಲಯದಲ್ಲಿ ಕುತೂಹಲ!
ಹಠಾತ್ ಬೆಳವಣಿಗೆಯೊಂದರಲ್ಲಿ ನಿನ್ನೆ ಸಾಯಂಕಾಲ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ್ದಾರೆ. ರಾಜಕೀಯ ವಲಯದಲ್ಲಿ ಇದು ಸಹಜವಾಗಿ ಚರ್ಚೆಯ ವಿಷಯವಾಗಿದೆ.

ರಾಜ ಭವನದಲ್ಲಿ ಉದ್ಯಾನವನ ನಿರ್ವಹಣೆಗೆ 3 ವರ್ಷಗಳಲ್ಲಿ ಮಾಡಿರುವ ಖರ್ಚು ಬರೋಬ್ಬರಿ 3.2 ಕೋಟಿ ರೂ!
ಮೂರು ವರ್ಷಗಳಲ್ಲಿ (2014ರಿಂದ 2017ರವರೆಗೆ) ರಾಜ ಭವನದ ಉದ್ಯಾನವನವನ್ನು ನಿರ್ವಹಿಸಲು ಬರೋಬ್ಬರಿ 3.27 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ ಎಂದು ಆರ್ ಟಿಐ ನಿಂದ ಬಹಿರಂಗವಾಗಿದೆ.

ತಮಿಳುನಾಡು ರಾಜಭವನ ಸೀಲ್ ಡೌನ್, 84 ಸಿಬ್ಬಂದಿಗೆ ಕೊರೋನಾ ಪಾಸಿಟಿವ್
ಭದ್ರತಾ ಸಿಬ್ಬಂದಿ, ಅಗ್ನಿ ಶಾಮಕ ಸಿಬ್ಬಂದಿ ಸೇರಿದಂತೆ ತಮಿಳುನಾಡು ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ 84 ಸಿಬ್ಬಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ರಾಜಭವನದ ಕ್ಯಾಂಪಸ್ ಅನ್ನು ಸಾನಿಟೈಸ್ ಮಾಡಲಾಗಿದೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ರಾಜಭವನವನ್ನು ಸೀಲ್ ಡೌನ್ ಮಾಡಲಾಗಿದೆ.

