rain

ವರುಣಾರ್ಭಟಕ್ಕೆ ಉತ್ತರ ಕರ್ನಾಟಕ ತತ್ತರ: ಮೂವರು ಸಾವು; ಪ್ರವಾಹದಲ್ಲಿ ಸಿಲುಕಿಕೊಂಡ 55 ಲಾರಿ; ಗದಗದಲ್ಲಿ ನದಿಯಂತಾದ ರಸ್ತೆಗಳು
ವಿಜಯನಗರ ಜಿಲ್ಲೆಯಲ್ಲಿಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ನಾರಪ್ಪ ಬಣಕಾರ (55) ಮತ್ತು ಪ್ರಶಾಂತ್ ಬಣಕಾರ (45) ಮೃತರು. ಇಬ್ಬರೂ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ದಾಸನಪುರ ಗ್ರಾಮದವರು.

ಉಡುಪಿಯಲ್ಲಿ ವರುಣನ ಅಬ್ಬರ: ಪ್ರವಾಹದಿಂದಾಗಿ ತೋಟಗಳಿಗೆ ನುಗ್ಗಿದ ನೀರು; 10 ಮನೆ ಜಲಾವೃತ; ಬೈಕ್- ಕಾರು ಕೊಚ್ಚಿಹೋಗಿ ಹಾನಿ
ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಲಾಡಿ ವ್ಯಾಪ್ತಿಯ ಪಶ್ಚಿಮ ಘಟ್ಟದ ಕೆಳಗಿನ ಕಬ್ಬಿನಾಲೆಯ ಹಳ್ಳದಲ್ಲಿ ಭಾನುವಾರ ಸಂಜೆ ದಿಢೀರ್ ನೀರಿನ ಹರಿವು ಉಂಟಾಗಿದ್ದು, 10ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ವರುಣಾರ್ಭಟಕ್ಕೆ ಬೆಂಗಳೂರು ತತ್ತರ: ಮನೆಗಳಿಗೆ ನುಗ್ಗಿದ ನೀರು, ಗೋಡೆ ಕುಸಿತ; ಯಲಹಂಕದಲ್ಲಿ ಅಪಾರ್ಟ್ ಮೆಂಟ್ ಜಲಾವೃತ!
ಸುಮಾರು 15 ಮರಗಳು ನೆಲಕ್ಕುರುಳಿವೆ, 44 ಕೊಂಬೆಗಳು ಮುರಿದು ಬಿದ್ದಿವೆ, ಅನೇಕ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ, ಶನಿವಾರ ರಾತ್ರಿ ನಗರದಲ್ಲಿ ಭಾರೀ ಮಳೆ ಸುರಿದ ನಂತರ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಹೆಚ್ಚುವರಿ ಮಳೆಯ ನಂತರ ತೀವ್ರ ಚಳಿಗಾಲದ ಮುನ್ಸೂಚನೆ ನೀಡಿದ IMD
ಈ ಚಳಿಗಾಲದಲ್ಲಿ ದಿರ್ಘಾವಧಿಯ ಶೀತ ಅಲೆಯ ವಾತಾವರಣ ಇರಲಿದೆ ಎಂದು ಐಎಂಡಿ ಹೇಳಿದೆ. ನವೆಂಬರ್- ಡಿಸೆಂಬರ್ ಅವಧಿಯಲ್ಲಿ ಹಿಂದೆಂದಿಗಿಂತಲೂ ಕನಿಷ್ಠ ತಾಪಮಾನ ಉಂಟಾಗಲಿದ್ದು, ಇದಕ್ಕೆ La Nina (ಲಾ ನಿನಾ) ಎಫೆಕ್ಟ್ ಕಾರಣವಾಗಲಿದೆ ಎಂದು ವಿಶ್ಲೇಷಿಸಿದೆ.

ಇಂದಿನಿಂದ ರಾಜ್ಯದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸಾಧ್ಯತೆ: ಕರಾವಳಿ, ಮಲೆನಾಡಿಗೆ ಯೆಲ್ಲೋ ಅಲರ್ಟ್ ಘೋಷಣೆ
ಸೆಪ್ಟೆಂಬರ್ 8 ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಭಾರೀ ಮಳೆಯಾಗಲಿದೆ.

ಆಂಧ್ರ-ತೆಲಂಗಾಣದಲ್ಲಿ ವರುಣನ ಅಬ್ಬರ: ಜನಜೀವನ ಅಸ್ತವ್ಯಸ್ತ, 25 ಮಂದಿ ಸಾವು, ಕೇಂದ್ರ ಸರ್ಕಾರದಿಂದ ನೆರವಿನ ಭರವಸೆ
ತೆಲಂಗಾಣದಲ್ಲಿ ಹೈದರಾಬಾದ್ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಸುರಿದಿದ್ದು, ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ 25 ಜನರು ಸಾವನ್ನಪ್ಪಿದ್ದಾರೆ.

ಆಂಧ್ರದಲ್ಲಿ ಭಾರೀ ಮಳೆಗೆ 8 ಮಂದಿ ಬಲಿ: ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಪರಿಸ್ಥಿತಿ ಅವಲೋಕನ
ಮುಖ್ಯಮಂತ್ರಿ ನಾಯ್ಡು ಅವರು ಶನಿವಾರ ಬೆಳಗ್ಗೆಯಿಂದ ರಾಜ್ಯದ ಪರಿಸ್ಥಿತಿ ಮತ್ತು ಮಳೆಯಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಂಡ ಪರಿಹಾರ ಕ್ರಮಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಆಟೋ ಮೇಲೆ ಉರುಳಿ ಬಿದ್ದ ಮರ: ಚಾಲಕ ಸೇರಿ ಇಬ್ಬರಿಗೆ ಗಾಯ, 10 ದಿನದಲ್ಲಿ 3ನೇ ಘಟನೆ
ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಪಾಲಿಕೆಗೆ ನೂರಾರು ದೂರವಾಣಿ ಕರೆಗಳು ಬಂದಿದ್ದವು. ಆದರೆ, ಯಾವುದೇ ಸಾವು-ನೋವುಗಳು ವರದಿಯಾಗಿರಲಿಲ್ಲ. ಕಳೆದ 10 ದಿನಗಳಿಂದ ಮರ ಬಿದ್ದು ಹಲವರು ಗಾಯಗೊಳ್ಳುತ್ತಿರುವುದು, ಸಾವುಗಳು ವರದಿಯಾಗುತ್ತಿವೆ.

ರಾಜ್ಯದಲ್ಲಿ ಆಗಸ್ಟ್ 14ರಿಂದ ಭಾರೀ ಮಳೆ ಮುನ್ಸೂಚನೆ: ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಿ; ಅಧಿಕಾರಿಗಳಿಗೆ ಸರ್ಕಾರ ಸೂಚನೆ
ಕರ್ನಾಟಕ-ಮಹಾರಾಷ್ಟ್ರ ಗಡಿಭಾಗ ಹಾಗೂ ಕೃಷ್ಣ-ಕಾವೇರಿ ನದಿಪಾತ್ರದ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಜೀವಹಾನಿಯಂತಹ ಅನಾಹುತ ತಪ್ಪಿಸಲು ಮತ್ತಷ್ಟು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

