rain

ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಭಾರಿ ಮಳೆ; ಎಂಟು ಮಂದಿ ಸಾವು
ಸಾಮಾನ್ಯವಾಗಿ ಮೇ ಅಂತ್ಯದ ವೇಳೆಗೆ ಆಗಮಿಸುವ ನೈಋತ್ಯ ಮುಂಗಾರು, ನಿರೀಕ್ಷೆಗಿಂತ ಸುಮಾರು ಎರಡು ವಾರಗಳ ಮುಂಚಿತವಾಗಿ ಆಗಮಿಸಿದೆ.

2 ಸಾವಿರ ಕೋಟಿ ರೂ ವೆಚ್ಚದಲ್ಲಿ ಚರಂಡಿ ಕಾಮಗಾರಿ; ಜನರ ಜೀವ-ಆಸ್ತಿ ಉಳಿಸುವುದು ನಮ್ಮ ಆದ್ಯತೆ: ಡಿ.ಕೆ ಶಿವಕುಮಾರ್
ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಆಡಳಿತದ ವೈಫಲ್ಯದ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿದ ಡಿ ಕೆ ಶಿವಕುಮಾರ್, ಪ್ರಕೃತಿಯನ್ನು ತಡೆಯಲು ಸಾಧ್ಯವೇ, ಇದು ನೈಸರ್ಗಿಕ ಚಟುವಟಿಕೆ ಎಂದರು.

ಮಳೆ ಹಾನಿ ಪ್ರದೇಶಕ್ಕೆ BJP ನಾಯಕರ ಭೇಟಿ: 'ಬ್ಯಾಡ್ ಬೆಂಗಳೂರು' ಪೋಸ್ಟರ್‌ಗಳ ಪ್ರದರ್ಶನ; ಸರ್ಕಾರದ ವಿರುದ್ಧ ಕಿಡಿ
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದರೂ ಅಭಿವೃದ್ಧಿ ಕಾರ್ಯ ಮಾಡದೆ ಕೇವಲ ಭ್ರಷ್ಟಾಚಾರ, ಹಗರಣ ಮತ್ತು ಬೆಲೆಯೇರಿಕೆಯಲ್ಲೇ ಸಾಧನೆಗೈದ ಕಾಂಗ್ರೆಸ್ ವಿರುದ್ಧ ಬ್ಯಾಡ್ ಬೆಂಗಳೂರು ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.

ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ: ರಾಜ್ಯದಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಐವರು ಬಲಿ
ಮಳೆಗೆ ಸಂಬಂಧಿಸಿದ ಅನಾಹುತಗಳಿಗೆ ನಗರದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಸಾಯಿ ಲೇಔಟ್ ದ್ವೀಪದಂತಿದೆ. ಇಲ್ಲಿನ ಮನೆಗಳ ನೆಲ ಮಹಡಿ ಅರ್ಧ ಮುಳುಗಿದ್ದು, ಜನರು ಮನೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.

ಇನ್ನೂ 1 ವಾರ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 13 ಜಿಲ್ಲೆಗಳಿಗೆ yellow ಅಲರ್ಟ್ ಘೋಷಣೆ
ಹಾಸನ, ಕೊಡಗು, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ: ಕೆ.ಆರ್ ಮಾರುಕಟ್ಟೆ ನೆಲಮಾಳಿಗೆಯಲ್ಲಿದ್ದ ನೂರಾರು ದ್ವಿಚಕ್ರ ವಾಹನ ನೀರಿನಲ್ಲಿ ಮುಳುಗಡೆ
ವಾಹನದ ಎಂಜಿನ್‌ಗಳಿಗೆ ನೀರು ನುಗ್ಗಿದ್ದು, ಸವಾರರು ವಾಹನಗಳ ಸ್ಟಾರ್ಟ್ ಮಾಡಲು ಕಷ್ಟಪಡುವಂತಾಗಿತ್ತು ಎಂದು ಕೆ.ಆರ್. ಮಾರುಕಟ್ಟೆಯ ಸಾಗರ್ ವೆಲ್‌ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ಆಸಿಫ್ ಪಾಷಾ ಅವರು ಹೇಳಿದ್ದಾರೆ.
ಬೆಂಗಳೂರು ಮಳೆ ಅವಾಂತರ: ಮೂವರು ಬಲಿ
ಭಾನುವಾರ ರಾತ್ರಿ ಸುರಿದ ಭಾರೀ ಮಳೆಯ ನಂತರ ಸೋಮವಾರ ಬೆಳಿಗ್ಗೆ 7.30 ರ ಸುಮಾರಿಗೆ ಖಾಸಗಿ ಕಂಪನಿಯ ಕಾಂಪೌಂಡ್ ಗೋಡೆ ಕುಸಿದು 35 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಭಾರೀ ಮಳೆಗೆ ಬೆಂಗಳೂರು ತತ್ತರ: ಪ್ರವಾಹ ಪರಿಸ್ಥಿತಿಗೆ ಅನಿರೀಕ್ಷಿತ ಮಳೆ ಕಾರಣ; ಸಾಧನಾ ಸಮಾವೇಶದ ಬಳಿಕ ಸಿಟಿ ರೌಂಡ್ಸ್ ಎಂದ ಸಿಎಂ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಎರಡು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಸಾಧನ ಸಮಾವೇಶ ನಡೆಸಲಾಗುತ್ತಿದ್ದು, ಈ ಸಮಾವೇಶದ ಬಳಿಕ ಬೆಂಗಳೂರು ಸಿಟಿ ರೌಂಡ್ಸ್ ಮಾಡುವುದಾಗಿ ತಿಳಿಸಿದರು.

ಬೆಂಗಳೂರು ಮಳೆ ಅವಾಂತರ: ಈ ಸಮಸ್ಯೆ ಹೊಸದಲ್ಲ, ನಿಮ್ಮೊಂದಿಗೆ ನಿಲ್ಲುತ್ತೇನೆ; ಡಿ.ಕೆ ಶಿವಕುಮಾರ್
ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳು ಹೊಸದೇನಲ್ಲ. ಹಲವು ಸರ್ಕಾರಗಳ, ಹಲವು ವರ್ಷಗಳ ನಿರ್ಲಕ್ಷ್ಯತನದಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ.

