Rain Deficit

ಮಹಾರಾಷ್ಟ್ರದಲ್ಲೂ ಭೀಕರ ಬರಗಾಲ; 358 ತಾಲ್ಲೂಕುಗಳ ಪೈಕಿ 265 ತಾಲ್ಲೂಕು ಬರಪೀಡಿತ ಎಂದು ಘೋಷಣೆ!
ಧಾರಾಶಿವ್ ಮತ್ತು ಬೀಡ್ನಂತಹ ಜಿಲ್ಲೆಗಳಲ್ಲಿ ಜುಲೈ ತಿಂಗಳಿನಿಂದ ಮಳೆಯಾಗಿಲ್ಲ; ಇದರಿಂದಾಗಿ ಬೆಳೆಗಳು, ಜಾನುವಾರುಗಳು ಹಾಗೂ ರೈತರು ಮತ್ತು ಕಾರ್ಮಿಕರ ದೈನಂದಿನ ನೀರಿನ ಅಗತ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಮಳೆ ಕೊರತೆ, ಬರದ ಆತಂಕ: ರಾಜ್ಯದಲ್ಲಿ 28.52 ಕೋಟಿ ರೂ ವೆಚ್ಚದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಚಾಲನೆ
ಈ ವರ್ಷ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.

ಬಲವಾದ ಗಾಳಿ, ಮಳೆ ಇಲ್ಲ: ಕೈಕೊಟ್ಟ ಮುಂಗಾರು; ಆಗಸ್ಟ್ ತಿಂಗಳಲ್ಲಿ ಮಳೆ ಬರುತ್ತಾ?
ಜೂನ್ ಮತ್ತು ಜುಲೈ ತಿಂಗಳಲ್ಲಿ ನೈಋತ್ಯ ಮುಂಗಾರು ರಾಜ್ಯದಲ್ಲಿ ಶೇ.28ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ಉತ್ತರ ಒಳನಾಡು ಕರ್ನಾಟಕದಲ್ಲಿ ಶೇ.10, ಕರಾವಳಿ ಕರ್ನಾಟಕದಲ್ಲಿ ಶೇ.28 ಹಾಗೂ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶೇ.36ರಷ್ಟು ಮಳೆ ಕೊರತೆಯಾಗಿದೆ.

ರಾಜ್ಯದಲ್ಲಿ ಮಳೆ ಕೊರತೆ, ಬರಗಾಲ: ಡಿಸಿ, ಸಿಇಒಗಳ ಜೊತೆ ಸಿಎಂ ಸಭೆ; ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸೇರಿ ಅಭಿವೃದ್ಧಿ ವಿಚಾರಗಳ ಚರ್ಚೆ
ರಾಜ್ಯ ಸರ್ಕಾರ ಮಂಗಳವಾರ ಮತ್ತು ಬುಧವಾರದಂದು ಮಹತ್ವದ ಸಭೆಯನ್ನು ಕರೆದಿದ್ದು, ರಾಜ್ಯಕ್ಕೆ ಸವಾಲಾಗಿರುವ ಪ್ರಮುಖ ಸಮಸ್ಯೆಗಳನ್ನು, ವಿಶೇಷವಾಗಿ ಬರ ಮತ್ತು ಅಭಿವೃದ್ಧಿ ಕುರಿತಾಗಿ ಚರ್ಚಿಸಲಿದೆ. ಎಲ್ಲಾ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಶಿರಸಿ: ಬೆಳೆ ಹಾನಿ ಭೀತಿ, ಸಾಲ ಮರುಪಾವತಿಸಲಾಗದೆ 65 ವರ್ಷದ ರೈತ ಆತ್ಮಹತ್ಯೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಬ್ಬುತಿ ಗ್ರಾಮದಲ್ಲಿ ರೈತರೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಜಗದೀಶ ಚೆನಪ್ಪ (65) ಎಂದು ಗುರುತಿಸಲಾಗಿದ್ದು, ಅಂಡಗಿ ಗ್ರಾಮದ ಸಹಕಾರಿ ಬ್ಯಾಂಕ್ನಲ್ಲಿ ಪಡೆದಿದ್ದ 3 ಲಕ್ಷ ಸಾಲ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೈಕೊಟ್ಟ ಮುಂಗಾರು: ಕಬ್ಬು ಫಸಲಿಗೆ ಹೊಡೆತ, ಸಕ್ಕರೆ ಉತ್ಪಾದನೆ ಕಡಿಮೆ, ಬೆಲೆ ಏರಿಕೆ ಸಾಧ್ಯತೆ!
ಈ ಬಾರಿಯ ಮಳೆ ಕೊರತೆಯ ಚಿಂತೆ ಕೇವಲ ರಾಜ್ಯದ ರೈತರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಈಗ ಎಲ್ಲಾ ರಾಜ್ಯಗಳಿಗೂ ಆತಂಕದ ವಿಷಯವಾಗಿದೆ.

ಕೊಡಗು: ಮಳೆ ಕೊರತೆಯಿಂದ ಭತ್ತದ ಕೃಷಿಗೆ ಹಿನ್ನಡೆ!
ಕೊಡಗಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ಆಗಸ್ಟ್ ಮಧ್ಯದ ವೇಳೆಗೆ ಶೇ.39ರಷ್ಟು ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ ನೈಋತ್ಯ ಮತ್ತು ವಾಯುವ್ಯ ಭಾಗಗಳ ಕೆಲವು ಕಡೆಗಳಲ್ಲಿ ಜುಲೈ ಕೊನೆಯ ವಾರದಲ್ಲಿ ಭತ್ತದ ಕೃಷಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು.

ಮುಂಗಾರು ಕೊರತೆಯ ನಡುವೆಯೂ ರೈತರಲ್ಲಿ ಆಶಾವಾದ ಮೂಡಿಸಿದ 'ಮಳೆ': ದೀರ್ಘಾವಧಿ ಬೆಳೆ ಬೆಳೆಯಲು ತಜ್ಞರ ಸಲಹೆ!
ಕೆಲವು ವಾರಗಳ ಹಿಂದೆ ಮುಂಗಾರು ಪ್ರಾರಂಭವಾದಾಗಿನಿಂದ ಕರ್ನಾಟಕವು ಮಳೆಯ ತೀವ್ರ ಕೊರತೆಯನ್ನು ಎದುರಿಸುತ್ತಿರುವ ನಡುವೆಯೂ, ಕೆಲ ದಿನಗಳಿಂದ ಮಳೆ ಚುರುಕುಗೊಂಡಿದೆ.

ಬಿಪರ್ಜಾಯ್ ಎಫೆಕ್ಟ್; ರಾಜ್ಯದಲ್ಲಿ ಶೇ 71ರಷ್ಟು ಮಳೆ ಕೊರತೆ, ಜೂನ್ 21ರಿಂದ ಎರಡು ವಾರ ಭಾರಿ ಮಳೆ ಸಾಧ್ಯತೆ!
ಕಳೆದ ವಾರ ಗುಜರಾತ್ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ‘ಬಿಪರ್ಜಾಯ್’ ಕರ್ನಾಟಕದಲ್ಲಿ ನೈಋತ್ಯ ಮಾನ್ಸೂನ್ ಪ್ರಗತಿಯ ಮೇಲೆ ಪರಿಣಾಮ ಬೀರಿದೆ. ಐಎಂಡಿ ಪ್ರಕಾರ, ಜೂನ್ 1 ರಿಂದ ಕರ್ನಾಟಕದಲ್ಲಿ ಇದುವರೆಗೆ 34.3 ಮಿಮೀ ಮಳೆಯಾಗಿದ್ದು, ಸಾಮಾನ್ಯ ಮಳೆಯ 119.6 ಮಿಮೀ ವಿರುದ್ಧ ಶೇ 71 ರಷ್ಟು ಕೊರತೆಯಾಗಿದೆ.

