raid

ಖಾಸಗಿ ರೆಸಾರ್ಟ್‌ನಲ್ಲಿ ರೇವ್ ಪಾರ್ಟಿ: 11ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಖಾಕಿ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನ ನಿರ್ಜನ ಪ್ರದೇಶದಲ್ಲಿ ತಡ ರಾತ್ರಿ ರೇವ್ ಪಾರ್ಟಿ ನಡೆದಿದ್ದು, ಪೊಲೀಸರು ದಾಳಿ ನಡೆಸಿ 11ಕ್ಕೂ ಜನರನ್ನು ವಶಕ್ಕೆ ಪಡೆದಿದ್ದಾರೆ.

ತಮಿಳು ನಾಡು: ಎಡಿಎಂಕೆ ಮಾಜಿ ಸಚಿವ ಎಸ್ಪಿ ವೇಲುಮಣಿಗೆ ಸೇರಿದ 52 ಸ್ಥಳಗಳ ಮೇಲೆ ಡಿವಿಎಸಿ ದಾಳಿ, ಎಫ್ಐಆರ್ ದಾಖಲು
ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಒಲವು ತೋರಿಸಿರುವ ಆರೋಪದ ಮೇಲೆ ಜಾಗೃತ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ(ಡಿವಿಎಸಿ)ಎಡಿಎಂಕೆ ಮಾಜಿ ಸಚಿವ ಎಸ್ ಪಿ ವೇಲುಮಣಿ ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಮಂಗಳವಾರ ದಾಳಿ ನಡೆಸಿದೆ.

ಭಯೋತ್ಪಾದನಾ ಪ್ರಕರಣ: ಜಮ್ಮು-ಕಾಶ್ಮೀರದ 14 ಪ್ರದೇಶಗಳಲ್ಲಿ ಎನ್ಐಎ ದಾಳಿ, ಪರಿಶೀಲನೆ
ಎರಡು ಪ್ರತ್ಯೇಕ ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ 14 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆಂದು ಶನಿವಾರ ತಿಳಿದುಬಂದಿದೆ.

ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ, ಹಲವರು ವಶಕ್ಕೆ
ಕೆಲ ದಿನಗಳ ಹಿಂದಷ್ಟೇ ನಗರದಲ್ಲಿ 2 ಸಾವಿರಕ್ಕೂ ಹೆಚ್ಚು ರೌಡಿ ಮನೆಗಳ ಮೇಲೆ ದಾಳಿ ಮಾಡಿದ್ದ ಪೊಲೀಸರು, ಮುಂದುವರಿದ ಭಾಗವಾಗಿ ಶನಿವಾರ ಕೂಡ ಅಪರಾಧ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ಸೈಲೆಂಟ್ ಸುನೀಲ್ ಸೇರಿ 58 ರೌಡಿ ಶೀಟರ್ ಮನೆಗಳ ಮೇಲೆ ಸಿಸಿಬಿ ದಾಳಿ!
ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಕಾಳಗವನ್ನು ಹತ್ತಿಕ್ಕಲು ಮುಂದಾಗಿರುವ ಸಿಸಿಬಿ ಪೊಲೀಸರು ಶುಕ್ರವಾರ ಬೆಳ್ಳಂಬೆಳಿಗ್ಗೆ ರೌಡಿ ಸೈಲೆಂಟ್ ಸುನೀಲ್ ಸೇರಿದಂತೆ 58 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಭಯೋತ್ಪಾದನೆಗೆ ಆರ್ಥಿಕ ನೆರವು ಪ್ರಕರಣ: ಜಮ್ಮು-ಕಾಶ್ಮೀರದ ವಿವಿಧೆಡೆ ಎನ್ಐಎ ದಾಳಿ, 6 ಮಂದಿ ಬಂಧನ
ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದಾದ್ಯಂತ ರಾಷ್ಟ್ರೀಯ ತನಿಖಾ ಸಂಸ್ಥೆ ಶೋಧ ಕಾರ್ಯ ನಡೆಸುತ್ತಿದ್ದು, ಈ ವರೆಗೂ 6 ಮಂದಿಯನ್ನು ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ.

ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ ದೇಶಮುಖ್ ಮನೆಯಲ್ಲಿ ಇಡಿ ಶೋಧ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ ದೇಶ್ ಮುಖ್ ಅವರ ನಾಗ್ಪುರ ಮತ್ತು ಮುಂಬಯಿ ನಿವಾಸದ ಮೇಲೆ ಇಂದು ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಬಕಾರಿ ಇಲಾಖೆಯಿಂದ ಕಳೆದ 9 ತಿಂಗಳಲ್ಲಿ ದಿನಕ್ಕೆ 45 ದಾಳಿ
ಅಕ್ರಮ ಮಧ್ಯಘಟಕಗಳ ಮೇಲೆ ಅಬಕಾರಿ ಇಲಾಖೆಯು 2020ರ ಜುಲೈನಿಂದ ದಿನಕ್ಕೆ ಸರಾಸರಿ 45ದಾಳಿ ನಡೆಸಿದೆ.

ಬೆಂಗಳೂರು ಮೂಲದ ಬ್ರಾಡ್‌ಬ್ಯಾಂಡ್ ಟೆಕ್ ಸಂಸ್ಥೆಯ ಮೇಲೆ ಆದಾಯ ತೆರಿಗೆ ದಾಳಿ
ತೆರಿಗೆ ನಿಯಮ ಉಲ್ಲಂಘನೆ ಮಾಡಿದ ಬೆಂಗಳೂರು ಮೂಲಕ ಪ್ರಮುಖ ಬ್ರಾಡ್ ಬ್ರ್ಯಾಂಡ್ ಟೆಕ್ನಾಲಜಿ ಸಂಸ್ಥೆ ಮೇಲೆ ಗೋವಾ ಮತ್ತು ಕರ್ನಾಟಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

