ragini

ರಾಗಿಣಿ, ಆದಿತ್ಯ ಆಳ್ವ, ವಿರೇನ್ ಖನ್ನಾ: ಎತ್ತಣಿಂದೆತ್ತಣ ಸಂಬಂಧ? ಡ್ರಗ್ಸ್ ನಂಟಿನ ಮಾಹಿತಿ ಇಲ್ಲಿದೆ
ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಮತ್ತು ವಿರೇನ್ ಖನ್ನ ಹೆಸರು ಡ್ರಗ್ ಮಾಫಿಯಾದಲ್ಲಿ ಕೇಳಿ ಬಂದಿದ್ದು, ವಿಶೇಷವಾಗಿ ವಲಸಿಗರಿಗೆ ಪೂರೈಕೆ ಮಾಡುತ್ತಿರುವ ವಿಷಯ ಎಲ್ಲರಲ್ಲೂ ಆಘಾತ ಮೂಡಿಸಿದೆ.

ಡ್ರಗ್ ಪೆಡ್ಲರ್ ಆಫ್ರಿಕನ್ ಪ್ರಜೆ ಜೊತೆ ರಾಗಿಣಿ ಹಣಕಾಸು ವ್ಯವಹಾರ: ಸಾಕ್ಷ್ಯ ನಾಶಕ್ಕೆ ನಟಿ ಯತ್ನ!
ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆಯ ಸಂಬಂಧ ದಿನಕ್ಕೊಂದು ಹೊಸ ಮಾಹಿತಿ ಹೊರಬೀಳುತ್ತಿವೆ. ಸಿಸಿಬಿ ಕಸ್ಟಡಿಯಲ್ಲಿರುವ ನಟಿ ರಾಗಿಣಿ ಈಗಾಗಲೇ ಬಂಧನಕ್ಕೊಳಗಾಗಿರುವ ಲೂಮ್ ಪೆಪ್ಪರ್ ಸಾಂಬಾ ಜತೆ ರಾಗಿಣಿ ಹಣಕಾಸಿನ ವ್ಯವಹಾರ ನಡೆಸಿರುವುದು ಗೊತ್ತಾಗಿದೆ.

ಕನ್ನಡ ಸ್ವಲ್ಪ ಗೊತ್ತಿದೆ ಎಂದು ಉತ್ತರದಿಂದ ಬಂದವರಿಂದ ಚಿತ್ರರಂಗದ ಮಾನ ಹರಾಜು : ಜಗ್ಗೇಶ್
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ದಿನದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಈ ಬಗ್ಗೆ ನವರಸನಾಯಕ ಜಗ್ಗೇಶ್ ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕನ್ನಡ ಸ್ವಲ್ಪ ಗೊತ್ತಿದೆ ಎಂದು ಉತ್ತರದಿಂದ ಬಂದವರಿಂದ ಚಿತ್ರರಂಗದ ಮಾನ ಹರಾಜಾಗುತ್ತಿದೆ" ಎಂದು ಜಗ್ಗೇಶ್ ಹೇಳಿದ್ದಾರೆ.

ಪಾರ್ಟಿಗೆ ಹೋದಾಗಲೆಲ್ಲಾ ಡ್ರಗ್ಸ್ ಸೇವನೆ ಮಾಡುವಂತೆ ಸ್ನೇಹಿತ ಬಲವಂತ ಮಾಡುತ್ತಿದ್ದ: ವಿಚಾರಣೆ ವೇಳೆ ನಟಿ ರಾಗಿಣಿ ಹೇಳಿಕೆ
ಯಾವುದೇ ಪಾರ್ಟಿಗೆ ಹೋದರೂ ಸ್ನೇಹಿತ ರವಿಶಂಕರ್ ಡ್ರಗ್ಸ್ ಸೇವನೆ ಮಾಡುವಂತೆ ಬಲವಂತ ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ನಟಿ ರಾಗಿಣಿ ದ್ವಿವೇದಿ ಹೇಳಿಕೆ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ನಟಿ ರಾಗಿಣಿಗೂ ಬಿಜೆಪಿಗೂ ಯಾವ ಸಂಬಂಧವಿಲ್ಲ: ಸಚಿವ ಸಿಟಿ ರವಿ
ರಾಗಿಣಿಗೂ ನಮ್ಮ ಅಕ್ಷಕ್ಕೂ ಯಾವ ಸಂಬಂಧವಿಲ್ಲ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ. ಡ್ರಗ್ಸ್ ದಂಧೆಯ ಪ್ರಕರಣದಲಿ ಬಂಧಿತರಾಗಿರುವ ನಟಿ ರಾಗಿಣಿ ಈ ಹಿಂದೆ ಉಪ ಚುನಾವಣೆ ವೇಳೆ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದ ವೀಡಿಯೋಗಳು ಹರಿದಾಡಿದ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಡ್ರಗ್ಸ್ ದಂಧೆ: ರೇವ್ ಪಾರ್ಟಿ ಆಯೋಜಕರಿಗಾಗಿ ತೀವ್ರಗೊಂಡ ಪೊಲೀಸರ ಹುಡುಕಾಟ
ರಾಜ್ಯದಲ್ಲಿ ಕಳೆದೊಂದು ವಾರದಿಂದ ಸುಂಟರಗಾಳಿ ಎಬ್ಬಿಸಿರುವ ಡ್ರಗ್ಸ್ ದಂಧೆ ಕನ್ನಡ ಚಿತ್ರರಂಗಕ್ಕೂ ಜೋರಾಗೇ ತಗುಲಿಕೊಂಡಿದೆ. ಇದೇ ಮೊದಲ ಬಾರಿ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡ ಆರೋಪದಲ್ಲಿ ಸ್ಯಾಂಡಲ್'ವುಡ್'ನ ಸ್ಟಾರ್ ನಟಿಯೊಬ್ಬರನ್ನು ನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ರೇವ್ ಪಾರ್ಟಿ ಆಯೋಜಕರಿಗಾಗಿ...

ರ್ಯಾಂಪ್ ನಿಂದ ಸುಲಭವಾಗಿ ಬೆಳ್ಳಿ ತೆರೆ ಪ್ರವೇಶಿಸಿದ 'ಮಾದಕ' ನಟಿ ರಾಗಿಣಿ ನಡೆದು ಬಂದ ಹಾದಿ!
ಡ್ರಗ್ಸ್ ನಂಟಿನ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ, ಮಾಡೆಲ್ ಆಗಿ ನಂತರ ನಟಿಯಾಗಿ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ಹೆಸರು ಪಡೆದವರು.

ಶುಕ್ರವಾರ ಬೆಳ್ಳಂಬೆಳಿಗ್ಗೆ ತುಪ್ಪದ ಬೆಡಗಿಗೆ ಶಾಕ್: ರಾಗಿಣಿ ಮನೆಗೆ ಸಿಸಿಬಿ ದಾಳಿ, ಶೋಧಕಾರ್ಯ ಶುರು ಮಾಡಿದ ಅಧಿಕಾರಿಗಳು
ಸ್ಯಾಂಡಲ್ ವುಡ್ ಬೆಡಗಿ ನಟಿ ರಾಗಿಣಿಗೆ ಶುಕ್ರವಾರ ಬೆಳ್ಳಂಬೆಳಿಗ್ಗೆ ಸಿಸಿಬಿ ಪೊಲೀಸರು ಶಾಕ್ ನೀಡಿದ್ದು, ಯಲಹಂಕದಲ್ಲಿರುವ ಅವರ ನಿವಾಸಕ್ಕೆ ತೆರಳಿ ಶೋಧಕಾರ್ಯ ನಡೆಸುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

'ಅಮ್ಮ ನಾನ್ ಸೇಲ್ ಆದೆ': ಅಮೆರಿಕ ಅಧ್ಯಕ್ಷನ ಹೊಸ ವರಸೆ!
ಕನ್ನಡದ ಸ್ಟಾರ್ ನಿರ್ದೇಶಕ ಕಾಶಿನಾಥ್ ನಿರ್ದೇಶನದ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಚಿತ್ರದ ಅಮ್ಮ ನಾನ್ ಸೇಲ್ ಆದೆ ಅಮೆರಿಕ ಪಾಲಾದೆ ಹಾಡು ಈಗಲೂ ಸಖತ್ ಫೇಮಸ್ ಇದೀಗ ಇದೇ ಹಾಡಿನ ಸಾಲನ್ನು ಅಧ್ಯಕ್ಷ ಇನ್ ಅಮೆರಿಕ ಚಿತ್ರಕ್ಕೆ ಬಳಸಿಕೊಳ್ಳಲಾಗುತ್ತಿದೆ.

