Rachita Ram

ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾಗೆ ನಟಿ ರಚಿತಾ ರಾಮ್ ನಾಯಕಿ!
ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ಹೊರತುಪಡಿಸಿದರೆ ರಚಿತಾ ರಾಮ್ ಕನ್ನಡದಲ್ಲಿ ಯಾವೊಂದು ಚಿತ್ರವನ್ನೂ ಒಪ್ಪಿರಲಿಲ್ಲ.ಝೈದ್ ಖಾನ್ ಅಭಿನಯದ 'ಕಲ್ಟ್' ಚಿತ್ರಕ್ಕೆ ರಚಿತಾ ಇದೀಗ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರಜನಿಕಾಂತ್ ʼಕೂಲಿʼ ಫೀಲ್ಡ್‌ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಎಂಟ್ರಿ..?
ಕೂಲಿ ಚಿತ್ರ ರಜನಿಕಾಂತ್ ಅವರ 171 ನೇ ಚಿತ್ರವಾಗಿದ್ದು, ಚಿತ್ರದಲ್ಲಿ ಶ್ರುತಿ ಹಾಸನ್ ಮತ್ತು ಮಹೇಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಧರ್ಮೋ ರಕ್ಷತಿ ರಕ್ಷಿತಃ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ; ನಟಿ ರಚಿತಾರಾಮ್ ಪ್ರತಿಕ್ರಿಯೆ!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದು, ಹಲವು ಜನಪ್ರಿಯ ವ್ಯಕ್ತಿಗಳು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸ್ಯಾಂಡಲ್ ವುಡ್ ರಚಿತಾ ರಾಮ್ ಘಟನೆ ಕುರಿತು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ನೇಹಾ ಹತ್ಯೆ ಪ್ರಕರಣ: ಇಂಥ ಕೃತ್ಯ ಮಾಡುವವರ ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ- ನಟಿ ರಚಿತಾ ರಾಮ್
ಹುಬ್ಬಳ್ಳಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಸಂಬಂದ ಪ್ರತಿಕ್ರಿಯೆ ನೀಡಿರುವ ನಟಿ ರಚಿತಾ ರಾಮ್ ಅವರು, ಇಂಥ ಕೃತ್ಯ ಮಾಡುವವರ ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಹೇಳಿದ್ದಾರೆ.

ಜಡೇಶಾ ಕೆ ಹಂಪಿ ನಿರ್ದೇಶನದ 'VK-29' ಚಿತ್ರದಲ್ಲಿ ದುನಿಯಾ ವಿಜಯ್‌ಗೆ ನಟಿ ರಚಿತಾ ರಾಮ್ ಜೋಡಿ?
ಜಂಟಲ್‌ಮನ್ ಮತ್ತು ಗುರು ಶಿಷ್ಯರು ಚಿತ್ರಗಳ ನಿರ್ದೇಶಕ ಮತ್ತು ದರ್ಶನ್ ಅವರ ಇತ್ತೀಚಿನ ಬ್ಲಾಕ್‌ಬಸ್ಟರ್ ಕಾಟೇರ ಸಿನಿಮಾದ ಬರಹಗಾರರಾಗಿರುವ ಜಡೇಶಾ ಕೆ ಹಂಪಿ ಇದೀಗ ನಟ ದುನಿಯಾ ವಿಜಯ್ ಅವರೊಂದಿಗೆ ತಮ್ಮ ಮುಂದಿನ ಯೋಜನೆಗೆ ತಯಾರಿ ನಡೆಸುತ್ತಿದ್ದಾರೆ. ನಟ ವಿಜಯ್‌ಗೆ ಜೋಡಿಯಾಗಿ ನಟಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸತೀಶ್ ನೀನಾಸಂ, ರಚಿತಾ ರಾಮ್ ಅಭಿನಯದ 'ಮ್ಯಾಟ್ನಿ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ಈ ಹಿಂದೆ ಮಹೇಶ್ ಕುಮಾರ್ ಅವರ 'ಅಯೋಗ್ಯ' ಚಿತ್ರದ ಮೂಲಕ ವಿಶೇಷವಾಗಿ 'ಏನಮ್ಮಿ ಏನಮ್ಮಿ' ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿ ಇದೀಗ 'ಮ್ಯಾಟ್ನಿ' ಎಂಬ ರೋಮ್ಯಾಂಟಿಕ್ ಥ್ರಿಲ್ಲರ್ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯನ್ನು ಮೋಡಿ ಮಾಡಲು ಸಿದ್ಧರಾಗಿದ್ದಾರೆ.

ಹಿಂದಿನ ಚಿತ್ರಕ್ಕೆ ಹೋಲಿಸಿದರೆ ಸಂಜು ವೆಡ್ಸ್ ಗೀತಾ- 2 ಹೆಚ್ಚು ವೈಭವಯುತವಾಗಿದೆ: ನಾಗಶೇಖರ್
ನಾಲ್ಕು ತಿಂಗಳ ಹಿಂದೆ ಸಂಜು ವೆಡ್ಸ್ ಗೀತಾ 2 ಚಿತ್ರೀಕರಣವನ್ನು ಪ್ರಾರಂಭಿಸಿದ ನಿರ್ದೇಶಕ ನಾಗಶೇಖರ್ ಅವರು ತಂಡದೊಂದಿಗೆ ಇತ್ತೀಚೆಗೆ ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದರು, ಅಲ್ಲಿ ನಿರ್ಣಾಯಕ ಭಾಗಗಳು ಮತ್ತು ಎರಡು ಹಾಡುಗಳನ್ನು ಚಿತ್ರೀಕರಿಸಿದ್ದಾರೆ.

ಸಂಜು ವೆಡ್ಸ್ ಗೀತಾ II ಚಿತ್ರೀಕರಣದಲ್ಲಿ ನಿರ್ದೇಶಕ ನಾಗಶೇಖರ್ ಬ್ಯುಸಿ; ಮುಂದಿನ ವರ್ಷ ಚಿತ್ರ ಬಿಡುಗಡೆಗೆ ಸಿದ್ಧತೆ!
ನಿರ್ದೇಶಕ ನಾಗಶೇಖರ್ ಸದ್ಯ ನಟ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಂಜು ವೆಡ್ಸ್ ಗೀತಾ II ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಕನಕಪುರ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ವೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಸಂಜು ವೆಡ್ಸ್ ಗೀತಾ II ಚಿತ್ರದ ಮತ್ತೊಬ್ಬ ನಾಯಕನಾಗಿ ಮೈನಾ ಖ್ಯಾತಿಯ ನಟ ಚೇತನ್ ಆಯ್ಕೆ?
ನಿರ್ದೇಶಕ ನಾಗಶೇಖರ್ ತಮ್ಮ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ II ಸಿನಿಮಾದ ಕೆಲಸ ಪ್ರಾರಂಭಿಸಿದ್ದಾರೆ. ಈ ಯೋಜನೆಯ ಇತ್ತೀಚಿನ ಅಪ್‌ಡೇಟ್ಸ್ ಪ್ರಕಾರ, ಸಂಜು ವೆಡ್ಸ್ ಗೀತಾ II ನಲ್ಲಿ ಪ್ರಮುಖ ಪಾತ್ರಕ್ಕಾಗಿ ನಾಗಶೇಖರ್ ಅವರು ಮೈನಾ ಚಿತ್ರಕ್ಕೆ ಹೆಸರುವಾಸಿಯಾದ ನಟ ಚೇತನ್ ಅವರನ್ನು ಬೆಳ್ಳಿತೆರೆಗೆ ಮರಳಿ ಕರೆತರುತ್ತಿದ್ದಾರೆ ಎನ್ನಲಾಗಿದೆ.

