PUNE

ಪುಣೆಯಲ್ಲಿ 270 ಬ್ಲ್ಯಾಕ್ ಫಂಗಸ್ ಪ್ರಕರಣಗಳ ಪತ್ತೆ: ಚಿಕಿತ್ಸೆಗಾಗಿ ಎಸ್‌ಒಪಿ ರಚನೆ
ಅಪರೂಪದ ಆದರೆ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಸೋಂಕಿನ ಸುಮಾರು 270 ಪ್ರಕರಣಗಳು ಪುಣೆಯಲ್ಲಿ ವರದಿಯಾಗಿದ್ದು ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ನಿರ್ದಿಷ್ಟ ಕಾರ್ಯತಂತ್ರ ಮಾನದಂಡ(ಎಸ್ಒಪಿ) ತರಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತೆ, ಚಿತ್ರ ನಿರ್ದೇಶಕಿ ಸುಮಿತ್ರಾ ಭಾವೆ ನಿಧನ
ಏಳು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತೆ, ಮರಾಠಿಯ ಖ್ಯಾತ ಚಿತ್ರ ನಿರ್ದೇಶಕಿ ಮತ್ತು ಬರಹಗಾರ್ತಿ ಸುಮಿತ್ರಾ ಬಾವೆ ವಯೋ ಸಹಜ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಹಾಮಾರಿ ಅಟ್ಟಹಾಸ: ಕಳೆದ 15 ದಿನಗಳಲ್ಲಿ ವಾಯುಪಡೆ ಅಧಿಕಾರಿಯೊಬ್ಬರ ಕುಟುಂಬದ 4 ಸದಸ್ಯರು ಕೊರೋನಾಗೆ ಬಲಿ!
ಎರಡು ವಾರಗಳ ಅವಧಿಯಲ್ಲಿ ಕೊರೋನಾದಿಂದಾಗಿ ವಾಯುಪಡೆಯ ಅಧಿಕಾರಿಯೊಬ್ಬರು ಪತ್ನಿ ಮತ್ತು ಮೂವರು ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಅವರ ತಾಯಿ ಮತ್ತು ಇಬ್ಬರು ಮಕ್ಕಳು ಸಹ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾ ಲಸಿಕೆ ಉತ್ಪಾದನೆ, ವಿತರಣೆ ಬಗ್ಗೆ ಪರಾಮರ್ಶೆ: 3 ಲಸಿಕಾ ಅಭಿವೃದ್ಧಿ ಕೇಂದ್ರಗಳಿಗೆ ಇಂದು ಪ್ರಧಾನಿ ಮೋದಿ ಭೇಟಿ
ಕೋವಿಡ್-19 ಲಸಿಕೆ ಉತ್ಪಾದನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳ ಬಗ್ಗೆ ಪರಾಮರ್ಶೆ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಖುದ್ದಾಗಿ ಶನಿವಾರ 3 ನಗರಗಳಿಗೆ ಭೇಟಿ ನೀಡುತ್ತಿದ್ದಾರೆ.

ಪುಣೆಯ ಸೀರಮ್ ಲ್ಯಾಬ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಶನಿವಾರ ಪುಣೆಯಲ್ಲಿರುವ ಸೀರಮ್ ಲ್ಯಾಬ್ ಗೆ ಭೇಟಿ ನೀಡಲಿದ್ದಾರೆ.

ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಆಶ್ಚರ್ಯಪಡಬೇಕಾಗಿಲ್ಲ- ಸಂಜಯ್ ರಾವತ್
ಆರ್ ಜೆಡಿ ಯುವ ಮುಖಂಡ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಆಕ್ಸ್'ಫರ್ಡ್'ನ ಕೋವಿಡ್ ಲಸಿಕೆ: ಸೋಮವಾರದಿಂದ ಮೂರನೇ ಹಂತದ ವೈದ್ಯಕೀಯ ಪ್ರಯೋಗ
ಪುಣೆಯ ಸೀರಮ್ ಇನ್ ಸ್ಟಿಟ್ಯೂಟ್ ನಿಂದ ಭಾರತದಲ್ಲಿ ತಯಾರಿಸಲ್ಪಟ್ಟ ಆಕ್ಸ್ ಫರ್ಡ್ ನ ಕೋವಿಡ್ ಲಸಿಕೆಗೆ ಸಂಬಂಧಪಟ್ಟಂತೆ ಅಭ್ಯರ್ಥಿಯ ಮೂರನೇ ಹಂತದ ಮಾನವ ವೈದ್ಯಕೀಯ ಪ್ರಯೋಗ ಮುಂದಿನ ವಾರ ಪ್ರಾರಂಭವಾಗಲಿದೆ.

ಬ್ರಿಟನ್ ಬೆನ್ನಲ್ಲೇ ಭಾರತದಲ್ಲೂ ಕೊರೋನಾ ಲಸಿಕೆ ಪ್ರಯೋಗಕ್ಕೆ ಬಿತ್ತು ಬ್ರೇಕ್!
ಬ್ರಿಟನ್ ನ ಆಸ್ಟ್ರಾ ಜೆನಿಕಾ ಸಂಸ್ಥೆಯ ಲಸಿಕೆ ಪ್ರಯೋಗ ಸ್ಥಗಿತವಾದ ಬೆನ್ನಲ್ಲೇ ಭಾರತದ ಸೆರಮ್ ಇನ್ಸ್ ಟಿಟ್ಯೂಟ್ ನ ಕೋವಿಡ್ ಲಸಿಕೆ ಪ್ರಯೋಗಕ್ಕೂ ಕೂಡ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.

ಪುಣೆ: ಆಂಬುಲೆನ್ಸ್ ಚಾಲಕನಾಗಿ, ಕೊರೋನಾ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ವೈದ್ಯ
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಕೊರೋನಾ ವೈರಸ್ ರೋಗಿಯನ್ನು ಇಲ್ಲಿನ ಆರೈಕೆ ಕೇಂದ್ರದಿಂದ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಓಡಿಸಿದ 30 ವರ್ಷದ ವೈದ್ಯರನ್ನು ನಿಜವಾದ "ಕೊರೋನಾ ವಾರಿಯರ್" ಎಂದು ಪ್ರಶಂಸಿಸಲಾಗುತ್ತಿದೆ.

