public

ಕಬ್ಬನ್ ಪಾರ್ಕ್ ನಲ್ಲಿ ಪ್ರೇಮಿಗಳ ಅಸಭ್ಯ ವರ್ತನೆಗೆ ಬ್ರೇಕ್! ತಿಂಡಿ ತಿನಿಸು ಒಯ್ಯುವಂತಿಲ್ಲ: ಇದಕ್ಕೆ ಅಧಿಕಾರಿಗಳು ಏನಂತಾರೆ?ಏನಂತಾರೆ?
ಕಬ್ಬನ್ ಪಾರ್ಕ್ ಒಳಗೆ ತಿಂಡಿ-ತೀರ್ಥ ತೆಗೆದುಕೊಂಡು ಹೋಗುವ ಹಾಗಿಲ್ಲ, ಫೋಟೋಗ್ರಾಫರ್ ಗಳು ಫೋಟೋ ತೆಗೆಯುವ ಹಾಗಿಲ್ಲ, ಲವರ್ಸ್ ಬೇಕಾಬಿಟ್ಟಿ ವರ್ತಿಸುವ ಹಾಕಿಲ್ಲ ಎಂಬಿತ್ಯಾದಿ ಕಠಿಣ ನಿಯಮಗಳನ್ನು ಸಾರ್ವಜನಿಕರಿಗೆ ತೋಟಗಾರಿಕೆ ಇಲಾಖೆ ತಂದಿದೆ ಎಂಬ ಸುದ್ದಿಯನ್ನು ಇತ್ತೀಚೆಗೆ ಕೇಳಿದ್ದೆವು.

'ಸ್ಟಾಪ್ ಟೊಬ್ಯಾಕೋ' ಮೊಬೈಲ್ ಆ್ಯಪ್ ಬಿಡುಗಡೆ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ದೂರು ನೀಡಲು ವೇದಿಕೆ ಸೃಷ್ಟಿ!
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿಷೇಧ ಹೇರಿದ್ದರೂ, ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಪ್ರತಿನಿತ್ಯ ಕಂಡು ಬರುತ್ತಲೇ ಇರುತ್ತದೆ. ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದರೂ ದೂರು ನೀಡಲು ಸಾಧ್ಯವಾಗದ ಕಾರಣ ಇಷ್ಟು ದಿನ ಮೂಕ ಪ್ರೇಕ್ಷಕರಂತಿರಬೇಕಾಗಿತ್ತು. ಆದರೆ, ಇದೀಗ ದೂರ ನೀಡಲು ಸರ್ಕಾರ ವೇದಿಕೆಯೊಂದನ್ನು ಕಲ್ಪಿಸಿದೆ.

ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಮುಜುಗರ ಉಂಟುಮಾಡಬೇಡಿ: ರೂಪಾ v/s ಸಿಂಧೂರಿಗೆ ಸರ್ಕಾರ ಆದೇಶ
ರಾಜ್ಯದಲ್ಲಿ ಇಬ್ಬರು ಉನ್ನತ ಮಹಿಳಾ ಅಧಿಕಾರಿಗಳು ಬಹಿರಂಗವಾಗಿ ಕಿತ್ತಾಡಿಕೊಂಡು, ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳನ್ನು ಮುಜುಗರದ ಪರಿಸ್ಥಿತಿಗೆ ಸಿಲುಕಿಸುತ್ತಿರುವುದರಿಂದ, ರಾಜ್ಯ ಸರ್ಕಾರವು ಇಬ್ಬರಿಗೂ ಛೀಮಾರಿ ಹಾಕಿದೆ ಮತ್ತು ಇಬ್ಬರೂ ಆರೋಪ ಮತ್ತು ಪ್ರತ್ಯಾರೋಪಗಳನ್ನು ಸಾರ್ವಜನಿಕವಾಗಿ ಮಾಡುವುದನ್ನು ತಡೆಯಲು ನಿರ್ದೇಶನ ನೀಡಿದೆ.

'ಮಾಲಿನ್ಯವನ್ನು ಒಂದು ಸಾರ್ವಜನಿಕ ಸಮಸ್ಯೆಯಾಗಿ ಪರಿಗಣಿಸಬೇಕು, ಆಗ ಅದು ಚುನಾವಣಾ ಆದೇಶವಾಗುತ್ತದೆ'
ಮಾಲಿನ್ಯವು ಸಾರ್ವಜನಿಕ ಸಮಸ್ಯೆಗಳಲ್ಲಿ ಪ್ರಮುಖವಾದದ್ದು. ಸಾರ್ವಜನಿಕರು, ರಾಜಕಾರಣಿಗಳು ಅದನ್ನು ಗಂಭೀರವಾಗಿ ಪರಿಗಣಿಸಿ ಚರ್ಚಿಸಿದರೆ ಬದಲಾವಣೆ ತರಬಹುದು. ಎಲ್ಲಾ ರೀತಿಯ ಮಾಲಿನ್ಯ - ಗಾಳಿ, ನೀರು, ಪುರಸಭೆಯ ಘನ ತ್ಯಾಜ್ಯ, ಪ್ಲಾಸ್ಟಿಕ್, ಶಬ್ದ ಇತ್ಯಾದಿ - ಸಾರ್ವಜನಿಕ ಸಮಸ್ಯೆಯಾಗಿದೆ.

ರಾಜ್ಯೋತ್ಸವ ಪ್ರಶಸ್ತಿಗೆ ಸಾರ್ವಜನಿಕರಿಗೆ ಸಾಧಕರನ್ನು ಗುರುತಿಸುವ ಅವಕಾಶ!
ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಗೆ ಅರ್ಹರನ್ನು ಗುರುತಿಸಿ ಆನ್ಲೈನ್ ಮೂಲಕ ಅವರ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೇ ಅವಕಾಶ ಕಲ್ಪಿಸಲಾಗಿದೆ.

ಆಗಸ್ಟ್1 ರಿಂದ ರಾಷ್ಟ್ರಪತಿ ಭವನ ಸಾರ್ವಜನಿಕರ ವೀಕ್ಷಣೆಗೆ ಮುಕ್ತ
ಕೋವಿಡ್-19 ಸಾಂಕ್ರಾಮಿಕದಿಂದ ಏಪ್ರಿಲ್ ಮಧ್ಯಭಾಗದಿಂದ ಮುಚ್ಚಲ್ಪಟ್ಟಿರುವ ರಾಷ್ಟ್ರಪತಿ ಭವನ ಮತ್ತು ರಾಷ್ಟ್ರಪತಿ ಭವನದ ಮ್ಯೂಸಿಯಂ ಸಂಕೀರ್ಣಕ್ಕೆ ಆಗಸ್ಟ್ 1 ರಿಂದ ಸಾರ್ವಜನಿಕರು ಭೇಟಿ ನೀಡಬಹುದಾಗಿದೆ ಎಂದು ಶುಕ್ರವಾರ ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.

ವಿಶ್ವ ಪ್ರಸಿದ್ಧ ಜೋಗ ಜಲಪಾತ ನಾಳೆಯಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತ
ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮುಚ್ಚಲಾಗಿದ್ದ ಜಿಲ್ಲೆಯ ವಿಶ್ವ ಪ್ರಸಿದ್ಧ ಜೋಗ ಜಲಪಾತ ಸೋಮವಾರದಿಂದ ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ.

ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ವಂಚನೆ; ಆರೋಪಿ ಪತ್ತೆಗೆ ಸಾರ್ವಜನಿಕರ ನೆರವು ಕೋರಿದ ಪೊಲೀಸರು
ತನ್ನ ಮೂಲ ಗುರುತನ್ನು ಮರೆಮಾಚಿ ನಕಲಿ ದಾಖಲೆಗಳೊಂದಿಗೆ ವಿವಿಧ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಅಮಾಯಕ ಜನರನ್ನು ವಂಚಿಸುತ್ತಿರುವ ವಂಚನೋರ್ವನನ್ನು ಪತ್ತೆಹಚ್ಚಲು ಮುಂದಾಗಿರುವ ಪೊಲೀಸರು, ಇದಕ್ಕಾಗಿ ಸಾರ್ವಜನಿಕರ ಸಹಾಯವನ್ನು ಕೋರಿದ್ದಾರೆ.

ನಾಗರಿಕರು ಸರ್ಕಾರದ ಯೋಜನೆಗಳ ಫಲಾನುಭವಿಗಳು ಮಾತ್ರವಲ್ಲ, ನಿಜವಾದ ಪ್ರೇರಕ ಶಕ್ತಿಗಳು: ಪ್ರಧಾನಿ ಮೋದಿ
2022ರಿಂದ ಮುಂದಿನ 25 ವರ್ಷಗಳು ದೇಶದ ಬೆಳವಣಿಗೆ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ನಿಮಗೆ ಬಹಳ ದೊಡ್ಡ ಜವಾಬ್ದಾರಿಯಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುವ ಸಂದರ್ಭದಲ್ಲಿ ದೇಶದ ಸೇವೆಯಲ್ಲಿರುವವರು ನೀವುಗಳು ಎಂದು ಪ್ರಧಾನಿ ನರೇಂದ್ರ ಮೋದಿ ಸಿವಿಲ್ ಸರ್ವಿಸ್ ಪ್ರೊಬೆಷನರಿಗಳನ್ನುದ್ದೇಶಿಸಿ ಮಾತನಾಡಿದರು.

