probe

ಅನಿಲ್ ದೇಶ್ ಮುಖ್ ವಿರುದ್ಧದ ತನಿಖೆಯಲ್ಲಿ ಮಹಾರಾಷ್ಟ್ರ ಸರ್ಕಾರ ಅಸಹಕಾರ: ಹೈಕೋರ್ಟ್ ಗೆ ಸಿಬಿಐ
ಭ್ರಷ್ಟಾಚಾರ ಮತ್ತು ದುರ್ನಡತೆ ಆರೋಪ ಎದುರಿಸುತ್ತಿರುವ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧದ ತನಿಖೆಯಲ್ಲಿ ಮಹಾರಾಷ್ಟ್ರ ಸರ್ಕಾರ ಸಹಕರಿಸುತ್ತಿಲ್ಲ ಎಂದು ಸಿಬಿಐ ಸೋಮವಾರ ಬಾಂಬೆ ಹೈಕೋರ್ಟ್ ಗೆ ಹೇಳಿದೆ.

ಸತ್ಯ ಗೊತ್ತಾದ ಬಳಿಕ ತನಿಖೆ ಅಗತ್ಯ ಇಲ್ಲ: ಭದ್ರಾ ಮೇಲ್ದಂಡೆ ಯೋಜನೆ ಭ್ರಷ್ಟಾಚಾರ ಆರೋಪ ಕುರಿತು ಬೊಮ್ಮಾಯಿ ಹೇಳಿಕೆ
ಭದ್ರಾ ಮೇಲ್ದಂಡೆ ಯೋಜನೆಯ ಟೆಂಡರ್ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಬೇಕೆಂಬ ವಿರೋಧ ಪಕ್ಷಗಳ ಆಗ್ರಹವನ್ನು ತಳ್ಳಿಹಾಕಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳೇ ವಾಸ್ತವ ಅಂಶವನ್ನು ತಿಳಿಸಿದ್ದಾರೆ. ಸತ್ಯಾಸತ್ಯತೆ ಗೊತ್ತಾದ ಬಳಿಕ ತನಿಖೆಯ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಕೋವಿಡ್-19 ಮೂಲದ ಬಗ್ಗೆ ಸಮಯೋಚಿತ, ಪಾರದರ್ಶಕ, ಆಧಾರ ಸಹಿತ ತನಿಖೆಗೆ ಜಿ-7 ಒತ್ತಾಯ
ಜಿ-7 ಶೃಂಗಸಭೆಯಲ್ಲಿ ಕೊರೋನಾ ಲಸಿಕೆಗೆ ಸಹಕಾರ ನೀಡುವುದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಕೊರೋನಾ ಮೂಲದ ಪತ್ತೆ ಬಗ್ಗೆಯೂ ನಿರ್ಣಯ ಅಂಗೀಕರಿಸಲಾಗಿದೆ.

ಮೈಸೂರು ಜಿಲ್ಲಾಧಿಕಾರಿಗಳ ಪಾರಂಪರಿಕ ಕಟ್ಟಡ ನಿವಾಸದಲ್ಲಿ ಈಜುಕೊಳ ನಿರ್ಮಾಣ: ನಿಯಮ ಉಲ್ಲಂಘನೆ ಬಗ್ಗೆ ವಾರದಲ್ಲಿ ವರದಿ
1894 ರಲ್ಲಿ ನಿರ್ಮಿಸಲಾದ ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಜಲಸನ್ನಿಧಿಯ ಪ್ರಶಾಂತ ವಿಲ್ಲಾ ಈಗ ವಿವಾದದ ತಾಣವಾಗಿ ಮಾರ್ಪಟ್ಟಿದೆ.

ಗ್ಯಾಂಗ್ ರೇಪ್ ಪ್ರಕರಣ: 6 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ- ಗೃಹ ಸಚಿವ ಬೊಮ್ಮಾಯಿ
ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣವನ್ನು ತನಿಖೆ ಆದೇಶಿಸಲಾಗಿದ್ದು, ಈ ವರೆಗೂ ಇಬ್ಬರು ಮಹಿಳೆಯರು ಸೇರಿ 6 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

'ಕೋವಿಡ್ ಟೂಲ್ ಕಿಟ್' ತನಿಖೆ: ದೆಹಲಿ, ಗುರಗಾಂವ್ ನ ಟ್ವಿಟರ್ ಕಚೇರಿಗಳ ಮೇಲೆ ದೆಹಲಿ ಪೊಲೀಸ್ ದಾಳಿ
ಕೋವಿಡ್ ಟೂಲ್ ಕಿಟ್ ಆರೋಪದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಹಾಗೂ ಗುರಗಾಂವ್ ನ ಟ್ವಿಟರ್ ಕಟೇರಿಗಳ ಮೇಲೆ ದೆಹಲಿ ಪೊಲೀಸ್ ವಿಶೇಷ ಘಟಕದ ತಂಡ ಸೋಮವಾರ ಸಂಜೆ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಆಕಾಶದಲ್ಲಿ ವಿಮಾನದೊಳಗೆ ಭರ್ಜರಿಯಾಗಿ ಮದುವೆಯಾದ ಜೋಡಿ: ಕೋವಿಡ್ ನಿಯಮ ಉಲ್ಲಂಘಿಸಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿ!
ಮದುವೆ ಸ್ವರ್ಗದಲ್ಲಿ ನಡೆಯುತ್ತದೆ ಎನ್ನುತ್ತಾರೆ, ಆದರೆ ಇದು ನಡೆದಿದ್ದು ಆಕಾಶದಲ್ಲಿ ವಿಮಾನದ ಒಳಗೆ.

ಸಿಡಿ ಪ್ರಕರಣ: ಕೊರೋನಾ ಹೆಚ್ಚಳ ಹಿನ್ನೆಲೆ ಎಸ್ಐಟಿ ತನಿಖೆ ಸ್ಥಗಿತ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.

ಅಂಚೆ ಚೀಟಿ ಮೇಲೆ ಛೋಟಾ ರಾಜನ್, ಮುನ್ನಾ ಭಜರಂಗಿ ಭಾವಚಿತ್ರ: ತನಿಖೆಗೆ ಆದೇಶ
ಭೂಗತ ಪಾತಕಿ ಛೋಟಾರಾಜನ್ ಮತ್ತು ಹತನಾಗಿರುವ ಗ್ಯಾಂಗ್ಸ್ಟರ್ ಮುನ್ನಾ ಭಜರಂಗಿ ಭಾವಚಿತ್ರವುಳ್ಳ ಅಂಚೆ ಚೀಟಿಯನ್ನು ಮುದ್ರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ ಅಂಚೆ ವಿಭಾಗ ತನಿಖೆಗೆ ಆದೇಶಿಸಿದೆ.

