Priyanka Gandhi Vadra

ಪ್ರಿಯಾಂಕಾ ಗಾಂಧಿ ಕುರ್ತಾ ಹಿಡಿದು ಎಳೆದ ಪೊಲೀಸ್: ಘಟನೆ ಬಗ್ಗೆ ಕ್ಷಮೆ ಕೇಳಿದ ನೊಯ್ಡಾ ಪೊಲೀಸರು
ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಮಾಡಲು ಹೋಗುತ್ತಿದ್ದ ವೇಳೆ ತಡೆದ ಪೊಲೀಸರು ಕುರ್ತಾ ಹಿಡಿದು ಎಳೆದ ಘಟನೆ ಬಗ್ಗೆ ಕ್ಷಮೆ ಕೇಳಿರುವ ಗೌತಮ್ ಬುದ್ಧ ನಗರ ಪೊಲೀಸರು ಈ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿಯ 70ನೇ ಜನ್ಮದಿನವನ್ನು 'ನಿರುದ್ಯೋಗ ದಿನ' ಎಂದು ಟೀಕಿಸಿದ ಪ್ರಿಯಾಂಕಾ ವಾದ್ರಾ
ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನವನ್ನು 'ನಿರುದ್ಯೋಗ ದಿನ' ಎಂದು ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಸರ್ಕಾರ ಇನ್ನೂ ಕಣ್ಣು ಮುಚ್ಚಿ ಕುಳಿತಿದ್ದರೆ, ಯುವಕರು ಸರ್ಕಾರವನ್ನು ಬದಲಾಯಿಸುತ್ತಾರೆ ಎಂದು ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಭೇಟಿ ಮಾಡಿದ ರೆಬೆಲ್ ನಾಯಕ ಸಚಿನ್ ಪೈಲಟ್!
ಪ್ರಮುಖ ಬೆಳವಣಿಗೆಯಲ್ಲಿ ರಾಜಸ್ಥಾನ ಕಾಂಗ್ರೆಸ್ ನಲ್ಲಿ ರೆಬೆಲ್ ನಾಯಕರಾಗಿ ಗುರುತಿಸಿಕೊಂಡಿದ್ದ ಸಚಿನ್ ಪೈಲಟ್ ಇಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಹೊಸದಾಗಿ ಬರುವ ಬಿಜೆಪಿ ನಾಯಕನನ್ನು ಚಹಾ ಸೇವನೆಗೆ ಕರೆದ ಪ್ರಿಯಾಂಕ ಗಾಂಧಿ!
ಸರ್ಕಾರಿ ಬಂಗಲೆಯನ್ನು ತ್ಯಜಿಸುವುದಕ್ಕೆ ಮೊದಲು ಆ ಮನೆಗೆ ಪ್ರವೇಶಿಸಿ ವಾಸ್ತವ್ಯ ಹೂಡಲಿರುವ ಬಿಜೆಪಿ ನಾಯಕ ಅನಿಲ್ ಬಲುನಿಯವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಚಹಾ ಸೇವನೆಗೆ ಕರೆದಿದ್ದಾರೆ.

'ನಾನು ಇಂದಿರಾ ಗಾಂಧಿ ಮೊಮ್ಮಗಳು': ಉತ್ತರ ಪ್ರದೇಶ ಸರ್ಕಾರ ವಿರುದ್ಧ ಹರಿಹಾಯ್ದ ಪ್ರಿಯಾಂಕಾ ಗಾಂಧಿ
ನಾನು ಇಂದಿರಾ ಗಾಂಧಿಯವರ ಮೊಮ್ಮಗಳು, ಬಿಜೆಪಿಯ ಕೆಲವು ಅಘೋಷಿತ ವಕ್ತಾರರಂತೆ ನಾನು ಅಲ್ಲ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.

ನ್ಯಾಯಾಧೀಶ ಮುರಳೀಧರ್ ವರ್ಗಾವಣೆ ನಾಚಿಕೆಗೇಡು, ಬೇಸರದ ಸಂಗತಿ: ಕಾಂಗ್ರೆಸ್
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮರುಳೀಧರ್ ವರ್ಗಾವಣೆ ನಾಚಿಕೆಗೇಡುತನ ಹಾಗೂ ಬೇಸರದ ಸಂಗತಿ ಎಂದು ಕಾಂಗ್ರೆಸ್ ಹೇಳಿದೆ.

ಪ್ರಿಯಾಂಕ ಗಾಂಧಿ ರಾಜ್ಯಸಭೆಗೆ..!?
ಕಾಂಗ್ರೆಸ್ ತನ್ನ ಪಥವನ್ನು ಬದಲಾಯಿಸಿಕೊಳ್ಳಲಿದೆಯೇ ? ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಆತ್ಮಾವಲೋಕನ ಮಾಡಿಕೊಂಡಿರುವ ಪಕ್ಷದ ವರಿಷ್ಠ ನಾಯಕರು ವಿಳಂಬ ಮಾಡದೆ ನೇರವಾಗಿ ರಂಗಕ್ಕೆ ಇಳಿದಿದ್ದಾರಂತೆ,

ಯೋಗಿ ಆದಿತ್ಯನಾಥ್ ಅವರು ಕೇಸರಿ ಬಟ್ಟೆ ತೊಡುವುದು 'ಸಾರ್ವಜನಿಕ ಸೇವೆ'ಗೆ: ಪ್ರಿಯಾಂಕಾ ಗಾಂಧಿಗೆ ತಿರುಗೇಟು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೇಸರಿ ಧಿರಿಸಿನ ಬಗ್ಗೆ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಕಾರ್ಯಾಲಯ, ಎಲ್ಲವನ್ನೂ ತ್ಯಾಗ ಮಾಡಿ ಸಾರ್ವಜನಿಕ ಸೇವೆ ಮಾಡಲು ಯೋಗಿ ಆದಿತ್ಯನಾಥ್ ಅವರು ಕೇಸರಿ ಬಟ್ಟೆ ತೊಡುತ್ತಾರೆ ಎಂದು ಹೇಳಿದೆ.

ಮೋದಿ ಸರ್ಕಾರ ದೇಶದ ವಿದ್ಯಾರ್ಥಿಗಳು, ಯುವಜನತೆ, ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ: ಪ್ರಿಯಾಂಕಾ ಗಾಂಧಿ
ದೇಶದ ಜನರ ಸಮಸ್ಯೆಗಳನ್ನು ಆಲಿಸುವಲ್ಲಿ ಮೋದಿ ಸರ್ಕಾರ ಹೇಡಿತನ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ದಬ್ಬಾಳಿಕೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ.

