private school

ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ; ವಿದ್ಯಾರ್ಥಿಯೇ ಮೇಲ್ ಕಳುಹಿಸಿರುವ ಶಂಕೆ!
ಬಸವೇಶ್ವರ ನಗರದ ಖಾಸಗಿ ಶಾಲೆಯ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂಬ ನೆಪವೊಡ್ಡಿ ಇ-ಮೇಲ್ ಸಂಚಲನಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿಯೊಬ್ಬ ಮೇಲ್ ಕಳುಹಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ದುಬಾರಿ ಫೀಸ್: ದೆಹಲಿಯ ಮತ್ತೊಂದು ಖಾಸಗಿ ಶಾಲೆ ಸರ್ಕಾರದ ವಶಕ್ಕೆ!!!
ದುಬಾರಿ ಶುಲ್ಕದ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಮತ್ತೊಂದು ಖಾಸಗಿ ಶಾಲೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ.

ರಾಜ್ಯದಲ್ಲಿ ಹಂತ ಹಂತವಾಗಿ ಆಫ್‌ಲೈನ್ ತರಗತಿಗಳನ್ನು ಪ್ರಾರಂಭಿಸಿ: ಖಾಸಗಿ ಶಾಲೆಗಳಿಂದ ಸರ್ಕಾರಕ್ಕೆ ಬೇಡಿಕೆ
ಹಂತ ಹಂತವಾಗಿ ಆಫ್‌ಲೈನ್ ತರಗತಿಗಳನ್ನು ಪ್ರಾರಂಭಿಸುವಂತೆ ಖಾಸಗಿ ಶಾಲೆಗಳು ಸರ್ಕಾರವನ್ನು ಒತ್ತಾಯಿಸಿದೆ,

ಕಡಿಮೆ ಶುಲ್ಕ ಹೊಂದಿರುವ ಖಾಸಗಿ ಶಾಲೆಗಳು ಮುಚ್ಚದಂತೆ ನೆರವಾಗಿ: ಶಿಕ್ಷಣ ಸಚಿವರಿಗೆ ಆಮ್ ಆದ್ಮಿ ಪಾರ್ಟಿ ಪತ್ರ
ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕೈಗೆಟಕುವ ದರದಲ್ಲಿ ಶುಲ್ಕ ಹೊಂದಿರುವ ರಾಜ್ಯದಲ್ಲಿನ ಖಾಸಗಿ ಶಾಲೆಗಳು ಮುಚ್ಚುವುದಕ್ಕೆ ಬಿಡಬಾರದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರಿಗೆ ಆಮ್ ಆದ್ಮಿ ಪಕ್ಷ ಪತ್ರದ ಮೂಲಕ ಒತ್ತಾಯಿಸಿದೆ.

ಶುಲ್ಕ ಕಟ್ಟಿಸಿಕೊಳ್ಳಲು ಖಾಸಗಿ ಶಾಲೆಗಳ ಲೇವಾದೇವಿ ವ್ಯವಹಾರ: ನೋಟಿಸ್ ಎಚ್ಚರಿಕೆ ನೀಡಿದ ಶಿಕ್ಷಣ ಇಲಾಖೆ
ಕೆಲವು ಖಾಸಗಿ ಶಾಲೆಗಳು ಶಾಲಾ ಶುಲ್ಕ ಕಟ್ಟಲು ಪೋಷಕರಿಗೆ ಫೈನಾನ್ಸ್ ಕಂಪನಿಯವರಿಗೆ ಸಾಲ ಕೊಡಿಸುತ್ತಿರುವ ಬೆಳವಣಿಗೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಅಂತಹ ಶಾಲೆಗಳಿಗೆ ನೋಟಿಸ್ ಜಾರಿ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

ಕಾರಣಗಳಿಲ್ಲದೆ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳು: ಡಿಸೆಂಬರ್ 20ರಂದು ಪೋಷಕರ ಪ್ರತಿಭಟನೆ
ಕಾರಣಗಳಿಲ್ಲದೆಯೇ ಸುಖಾಸುಮ್ಮನೆ ಶುಲ್ಕ ಪಡೆದು ಕೊರೋನಾ ಸಾಂಕ್ರಾಮಿಕ ರೋಗದಂತಹ ಸಂಕಷ್ಟದ ಸಮಯದಲ್ಲೂ ಅಮಾನವೀಯವಾಗಿ ವರ್ತಿಸುತ್ತಿರುವ ಖಾಸಗಿ ಶಾಲೆಗಳ ದುರ್ವರ್ತನೆ ವಿರುದ್ಧ ಸಿಡಿದೆದ್ದಿರುವ ಪೋಷಕರು, ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಆನ್'ಲೈನ್ ಶಿಕ್ಷಣ: ಮಾರ್ಗಸೂಚಿ ಪಾಲಿಸಿ, ಇಲ್ಲವೇ ಕ್ರಮ ಎದುರಿಸಿ; ಖಾಸಗಿ ಶಾಲೆಗಳಿಗೆ ಸರ್ಕಾರ ಕಠಿಣ ಎಚ್ಚರಿಕೆ
ಆನ್'ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲ ಪುಟ್ಟ ಬದಲಾವಣೆಗಳೊಂದಿಗೆ ಪರಿಷ್ಕೃತ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ತಜ್ಞರ ವರದಿ ಆಧರಿಸಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರ ಗ್ರೀನ್ ಸಿಗ್ನಲ್: ಮೊದಲ ಕಂತಿನ ಶುಲ್ಕವಷ್ಟೇ ಸಂಗ್ರಹಕ್ಕೆ ಸಮ್ಮತಿ
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲೆಗಳು ಹಾಗೂ ವೇತನ ದೊರಯದೆ ಸಮಸ್ಯೆಗೆ ಸಿಲುಕಿರುವ ಶಿಕ್ಷಕರ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನ (2020-21) ಶಾಲಾ ಶುಲ್ಕದ ಪ್ರಥಮ ಕಂತು ಪಡೆಯಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಖಾಸಗಿ, ಅನುದಾನ ರಹಿತ ಶಾಲೆಗಳಿಗೂ ಬಿಸಿಯೂಟ
ಖಾಸಗಿ ಹಾಗೂ ಅನುದಾನ ರಹಿತ ಶಾಲೆಗಳಲ್ಲೂ ಇನ್ನು ಮುಂದೆ ಬಿಸಿಯೂಟ ಸಿಗಲಿದೆ.

