Prithvi Shaw

'ಪೃಥ್ವಿ ಶಾಗೂ ಆ ಜಾಗವನ್ನು ತೋರಿಸಿ...': ಸರ್ಫರಾಜ್ ಖಾನ್ ತೂಕ ಇಳಿಕೆ ಬಗ್ಗೆ ಇಂಗ್ಲೆಂಡ್ ದಿಗ್ಗಜ ಕೆವಿನ್ ಪೀಟರ್ಸನ್
ಫಿಟ್‌ನೆಸ್ ಬಗ್ಗೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದ ಸರ್ಫರಾಜ್ ಖಾನ್ ಇದೀಗ ತೂಕ ಕಳೆದುಕೊಂಡಿದ್ದು, ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಪ್ರತಿಕ್ರಿಯಿಸಿದ್ದಾರೆ.

'ಪೃಥ್ವಿ ಶಾಗೆ ಬಂದಂತಹ ಗತಿ ಬಾರದಿರಲಿ': IPL ಸೆನ್ಸೇಷನ್ 14 ವರ್ಷದ ವೈಭವ್ ಸೂರ್ಯವಂಶಿಗೆ ಎಚ್ಚರಿಕೆ
ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸೂರ್ಯವಂಶಿ ಅದ್ಭುತ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಆಟಗಾರನಿಗೆ ಸಿಗುತ್ತಿರುವ ಜನಪ್ರಿಯತೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

IPL 2024 ಹೊತ್ತಲ್ಲೇ ಟೀಂ ಇಂಡಿಯಾ ಕ್ರಿಕೆಟಿಗ Prithvi Shawಗೆ ಸಂಕಷ್ಟ: ಲೈಂಗಿಕ ಕಿರುಕುಳ ಪ್ರಕರಣದ ತನಿಖೆಗೆ ಕೋರ್ಟ್ ಆದೇಶ!
ಇಂಡಿಯನ್ ಪ್ರೀಮಿಯರ್ ಲೀಗ್ 2024 ಕ್ರಿಕೆಟ್ ಟೂರ್ನಿ ಚಾಲ್ತಿಯಲ್ಲಿರುವಂತೆಯೇ ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪೃಥ್ವಿ ಶಾಗೆ ಸಂಕಷ್ಟ ಎದುರಾಗಿದ್ದು, ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತನಿಖೆಗೆ ಆದೇಶಿಸಿದೆ.

ಏಕದಿನ ಪಂದ್ಯದಲ್ಲಿ ದ್ವಿಶತಕ: ಟೀಂ ಇಂಡಿಯಾ ಆಯ್ಕೆಗಾರರ ಬಗ್ಗೆ ಯೋಚಿಸಿಲ್ಲ ಎಂದ ಪೃಥ್ವಿ ಶಾ!
ಕೌಂಟಿ ಮೈದಾನದಲ್ಲಿ ನಡೆದ ಸಾಮರ್‌ಸೆಟ್ ವಿರುದ್ಧದ ಏಕದಿನ ಕಪ್ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್‌ಗಾಗಿ ಹಲವಾರು ಲಿಸ್ಟ್ ಎ ದಾಖಲೆಗಳನ್ನು ಮುರಿದ ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ಪೃಥ್ವಿ ಶಾ, ಟೀಂ ಇಂಡಿಯಾ ಆಯ್ಕೆ ಸಮಿತಿಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು.

ಕ್ರಿಕೆಟಿಗ ಪೃಥ್ವಿ ಶಾ ಮೇಲೆ ದಾಳಿ: ಬಂಧನಕ್ಕೊಳಗಾಗಿರುವ ಭೋಜ್‌ಪುರಿ ನಟಿ ಸಪ್ನಾ ಗಿಲ್ ಹಿನ್ನಲೆ ಗೊತ್ತೆ?
ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರ ಮೇಲೆ ಇತ್ತೀಚೆಗೆ ಸಾಂತಾಕ್ರೂಜ್ ಪ್ರದೇಶದಲ್ಲಿ ಮಹಿಳೆ ಮತ್ತು ಆಕೆಯ ಸ್ನೇಹಿತ ಹಲ್ಲೆ ನಡೆಸಿದ್ದು ಈ ಸಂಬಂಧ ನಟಿಯನ್ನು ಬಂಧಿಸಲಾಗಿದೆ.

ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ: 4ನೇ ಆರೋಪಿ ಬಂಧಿಸಿದ ಪೊಲೀಸರು
ಸೆಲ್ಫಿ ವಿಚಾರವಾಗಿ ನಡೆದ ವಾಗ್ಯುದ್ದ ಸಂದರ್ಭದಲ್ಲಿ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಿದ ನಾಲ್ಕನೇ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೃಥ್ವಿ ಶಾ ಮೇಲೆ ಹಲ್ಲೆ: ಮಹಿಳೆ ಮೂರು ದಿನ ಪೊಲೀಸ್ ಕಸ್ಟಡಿಗೆ
ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಕಾರಿನ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿಯಾಗಿರುವ ಸಪ್ನಾ ಗಿಲ್ ಅವರನ್ನು ಫೆಬ್ರವರಿ 20ರವರೆಗೆ ಪೊಲೀಸ್ ಕಸ್ಟಡಿಗೆ ಮುಂಬೈ ನ್ಯಾಯಾಲಯ ಒಪ್ಪಿಸಿದೆ.

ನೈಟ್‌ಕ್ಲಬ್ ಹೊರಗೆ ಯುವತಿಯನ್ನು ತಳ್ಳುತ್ತಿರುವ ಕ್ರಿಕೆಟಿಗ ಪೃಥ್ವಿ ಶಾ, ವಿಡಿಯೋ ವೈರಲ್!
ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಅವರು ಮುಂಬೈನ ನೈಟ್‌ಕ್ಲಬ್‌ನ ಹೊರಗೆ ಯುವತಿಯನ್ನು ತಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಸೆಲ್ಫಿಗೆ ನಿರಾಕರಣೆ, ಕ್ರಿಕೆಟ್ ಆಟಗಾರ ಪೃಥ್ವಿ ಶಾ ಸ್ನೇಹಿತನ ಕಾರಿನ ಮೇಲೆ ದಾಳಿ
ವಾಣಿಜ್ಯ ನಗರಿ ಮುಂಬೈಯಲ್ಲಿ ಫೈವ್ ಸ್ಟಾರ್ ಹೋಟೆಲ್ ವೊಂದರ ಮುಂಭಾಗ ಸೆಲ್ಫಿಗೆ ನಿರಾಕರಿಸಿದ ನಂತರ ಜನರ ಗುಂಪೊಂದು ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರ ಸ್ನೇಹಿತನ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಸಂಬಂಧ ಎಂಟು ಜನರ ವಿರುದ್ಧ ವಾಯವ್ಯ ಮುಂಬೈನ ಓಶಿವಾರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

