Price

ಜನತೆಗೆ ರಾಜ್ಯ ಸರ್ಕಾರದ ಶಾಕ್: ವಿದ್ಯುತ್ ಬೆಲೆ 3.8% ಹೆಚ್ಚಳ, ಸರಾಸರಿ ಯೂನಿಟ್ ಗೆ 30 ಪೈಸೆ ಏರಿಕೆ; ಏಪ್ರಿಲ್ 1 ರಿಂದ ಪೂರ್ವಾನ್ವಯ!
ಪೆಟ್ರೋಲ್ ಹಾಗೂ ಡೀಸೆಲ್ ಬಳಿಕ ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಜನತೆಗೆ ದೊಡ್ಡ ಶಾಕ್ ನೀಡಿದೆ.

ತೈಲ ಬೆಲೆ ತಗ್ಗಿಸುವುದೇ ಬಿಜೆಪಿ ಸರ್ಕಾರ ನೀಡಬಹುದಾದ ಅತಿದೊಡ್ಡ ಪರಿಹಾರ ಪ್ಯಾಕೇಜ್: ಡಿ.ಕೆ. ಶಿವಕುಮಾರ್
ಬಿಜೆಪಿ ಸರ್ಕಾರ ದೇಶದ ಜನತೆಗೆ ನೀಡಬಹುದಾದ ಅತಿದೊಡ್ಡ ಪರಿಹಾರ ಪ್ಯಾಕೇಜ್ ಎಂದರೆ ಅದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ತಗ್ಗಿಸುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸಿಟಿ-ಸ್ಕ್ಯಾನಿಂಗ್ ದರ ನಿಗದಿಪಡಿಸಿದ ಸರ್ಕಾರ, ದಂಧೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ: ಸಚಿವ ಸುಧಾಕರ್
ಕೋವಿಡ್-19 ಸೋಂಕನ್ನು ಪತ್ತೆಹಚ್ಚಲು ಸಿಟಿ-ಸ್ಕ್ಯಾನ್ ಅಥವಾ ಎಕ್ಸ್-ರೇ ಅಗತ್ಯವಾಗಿರುವುದರಿಂದ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಪ್ರಯೋಗಾಲಯಗಳಲ್ಲಿ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.

ದೇಶದಲ್ಲಿ ಮಾನವ ಬಿಕ್ಕಟ್ಟು ಎದುರಾಗಿದೆ, ಮಾಹಿತಿ ಹತ್ತಿಕ್ಕಿದರೆ ನ್ಯಾಯಾಂಗ ನಿಂದನೆಯಾಗುತ್ತದೆ: ಸುಪ್ರೀಂ ಕೋರ್ಟ್ ಎಚ್ಚರಿಕೆ
ಬಡವರಿಗೆ ಲಸಿಕೆಗಳಿಗೆ ಹಣ ನೀಡಲು ಸಾಧ್ಯವಾಗುವುದಿಲ್ಲವಾದ್ದರಿಂದ ರಾಷ್ಟ್ರೀಯ ರೋಗನಿರೋಧಕ ಮಾದರಿಯನ್ನು ಕೋವಿಡ್-19 ಲಸಿಕೆ ಅಭಿಯಾನಕ್ಕೆ ಅಳವಡಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಡ್ವಾನ್ಸ್ ಫಂಡಿಂಗ್ ಆಧಾರದ ಮೇಲೆ ಆರಂಭಿಕ ದರ ನಿಗದಿ: ಕೋವಿಡ್ ಲಸಿಕೆ ಬೆಲೆ ಕುರಿತು ಸೀರಮ್ ಇನ್ಸ್ಟಿಟ್ಯೂಟ್ ಸಮರ್ಥನೆ
ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಳಸುತ್ತಿರುವ ಕೋವಿಡ್-19 ಲಸಿಕೆಯನ್ನು ತಯಾರಿಸುತ್ತಿರುವ ಸೀರಮ್ ಇನ್ಸ್ಟಿಟ್ಯೂಟ್ ಶನಿವಾರ ಕೋವಿಶೀಲ್ಡ್ ಲಸಿಕೆಯನ್ನು ಆರಂಭಿಕ ದರಕ್ಕಿಂತ 1.5 ಪಟ್ಟು ಹೆಚ್ಚಿಸಿರುವುದನ್ನು ಸಮರ್ಥಿಸಿಕೊಂಡಿದೆ.

ಲಸಿಕೆ ನೀತಿ ಪುನರ್ ವಿಮರ್ಶಿಸಿ, ಏಕರೂಪ ದರ ನಿಗದಿ ಮಾಡಿ: ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಆಗ್ರಹ
ಕೋವಿಡ್-19 ಲಸಿಕೆ ನೀತಿಯನ್ನು ಪುನರ್ ವಿಮರ್ಶೆ ಮಾಡಿ ಏಕ ರೂಪ ದರ ನಿಗದಿಪಡಿಸುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಮೇ 1ರಿಂದ ಖಾಸಗಿ ಆಸ್ಪತ್ರೆಗಳು ಲಸಿಕೆ ತಯಾರಕರಿಂದ ನೇರವಾಗಿ ಖರೀದಿಸಲು ಅವಕಾಶ: ಕೇಂದ್ರ ಸರ್ಕಾರ
ಖಾಸಗಿ ಕೋವಿಡ್-19 ಲಸಿಕಾ ಕೇಂದ್ರಗಳು ಪ್ರಸ್ತುತ ಸರ್ಕಾರದಿಂದ ಕೋವಿಡ್ ಲಸಿಕೆ ಪಡೆದು ಪ್ರತಿ ಡೋಸ್ ಗೆ 250 ರೂಪಾಯಿಯಂತೆ ದರ ನಿಗದಿಪಡಿಸುತ್ತಿದೆ. ಆದರೆ ಮೇ 1ರಿಂದ ಖಾಸಗಿ ಕೋವಿಡ್-19 ಕೇಂದ್ರಗಳು ಲಸಿಕೆ ತಯಾರಕರಿಂದ ನೇರವಾಗಿ ಲಸಿಕೆಗಳನ್ನು ಪಡೆಯಬಹುದಾಗಿದೆ.

ಚಿನ್ನದ ದರದಲ್ಲಿ ಭಾರಿ ಏರಿಕೆ, 10 ಗ್ರಾಮ್ ಬೆಳ್ಳಿಯ ರೇಟ್ ಎಷ್ಟು ಗೊತ್ತೇ?
ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ಚಿನ್ನದ ದರ 816 ರೂಪಾಯಿ ಏರಿಕೆಯಾಗಿದ್ದು ಪ್ರತಿ 10 ಗ್ರಾಮ್ ಗೆ 49,430 ರೂಪಾಯಿ ಆಗಿದ್ದರೆ, ಬೆಳ್ಳಿಯ ದರ 3,063 ರೂಪಾಯಿ ಏರಿಕೆ ಕಂಡಿದ್ದು ಕೆ.ಜಿ ಬೆಳ್ಳಿ 61,298 ರೂಪಾಯಿಗಳಿಂದ 64,361 ಕ್ಕೆ ಏರಿಕೆಯಾಗಿದೆ.

ಬಳ್ಳಾರಿ ವಿಭಜನೆ: ಹೊಸಪೇಟೆಯಲ್ಲಿ ಭೂಮಿ ಬೆಲೆ ಗಗನಕ್ಕೆ; ರಿಯಲ್ ಎಸ್ಟೇಟ್ ವ್ಯವಹಾರ ಚುರುಕು!
ಗಣಿ ಜಿಲ್ಲೆ ಬಳ್ಳಾರಿಯನ್ನು ವಿಭಜನೆ ಮಾಡಿ ರಾಜ್ಯ ಸರ್ಕಾರ ವಿಜಯನಗರ ಹೊಸ ಜಿಲ್ಲೆ ಉದಯಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಇದೀಗ ಬಳ್ಳಾರಿ-ಹೊಸಪೇಟೆ ಮುಖ್ಯರಸ್ತೆಯಲ್ಲಿರುವ ಭೂಮಿ ಬೆಲೆಗಳು ಗಗನಕ್ಕೇರಿದೆ.

