price hike

ಹಾಲಾದರೇನು? ಆಲ್ಕೋಹಾಲಾದರೇನು? ಖಜಾನೆ ತುಂಬಬೇಕಷ್ಟೇ: ಶ್ರಮಿಕರ ಕಿಸೆಗೆ ಕನ್ನ ಕೊರೆದ ಕ್ಷುದ್ರ ವಿತ್ತ ನೀತಿಗೆ ಧಿಕ್ಕಾರ!
ಚುನಾವಣೆ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ ಭರವಸೆ ಕೊಟ್ಟಿದ್ದವರು ಎರಡೇ ತಿಂಗಳಲ್ಲಿ ಅದನ್ನು ಮರೆತೇ ಹೋಗಿದ್ದಾರೆ! ಹಸುಗಳ ಹಿಂಡಿ, ಬೂಸಾ ಬೆಲೆ ಇಳಿಕೆಗೂ ಯಾವ ಗ್ಯಾರಂಟಿಯೂ ಇಲ್ಲ.

ಬಜೆಟ್‌ನಲ್ಲಿ ದರ ಪರಿಷ್ಕರಣೆ: ಇಂದಿನಿಂದ ಮದ್ಯದ ಬೆಲೆ ಶೇ.20ರಷ್ಟು ಏರಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ ಪ್ರಕಾರ, ಮದ್ಯದ ಬೆಲೆ ಇಂದಿನಿಂದ (ಜುಲೈ 20) ಅನ್ವಯವಾಗುವಂತೆ ಹೆಚ್ಚಳವಾಗಿದೆ. ಇದರೊಂದಿಗೆ ಗರಿಷ್ಠ ಶೇ.20ರಷ್ಟು ಹೆಚ್ಚಿನ ದರದೊಂದಿಗೆ ಹೊಸ ಬೆಲೆಯಲ್ಲಿ ಶುಕ್ರವಾರದಿಂದ ಮದ್ಯ ಮಾರಾಟವಾಗಲಿದೆ.

ಬೆಲೆ ಏರಿಕೆ ಮಧ್ಯೆ ಹೋಟೆಲ್ ತಿಂಡಿ ತಿನಿಸು ಬೆಲೆ ಮತ್ತಷ್ಟು ದುಬಾರಿ..!
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್ ಗಳ ಮಾಲೀಕರು ಆಹಾರ ತಿನಿಸುಗಳ ಬೆಲೆಯಲ್ಲಿ ಶೇ.15-25ರಷ್ಟು ಹೆಚ್ಚಳ ಮಾಡಲು ಚಿಂತನೆ ನಡೆಸುತ್ತಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏಕಾಏಕಿ ಹೆಚ್ಚಲು ಕಾಳಧನ ಕಾರಣ; ತನಿಖೆ ಭರವಸೆ ನೀಡಿದ ಪರಮೇಶ್ವರ್
ದಿನ ಬಳಕೆಯ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ಸೊಪ್ಪು ತರಕಾರಿಗಳ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಧವಸ ಧಾನ್ಯಗಳ ಬೆಲೆ ಸಾಮಾನ್ಯ ಜನರ ಕೈಗೆ ನಿಲುದಂತಾಗಿದೆ.

ಸಾಲ ಮಾಡಿ ಎಷ್ಟು ದಿನ ತುಪ್ಪ ತಿನ್ನಬಹುದು? ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಪಿಕ್ ಪಾಕೆಟ್ ಮಾಡುವವರಿಗಿಂತ ನಾಜೂಕಾಗಿ ಜನಸಾಮಾನ್ಯರ ಜೇಬು ಕತ್ತರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದು, ಈ ಮೂಲಕ ಬೆಲೆ ಏರಿಕೆ ಗ್ಯಾರಂಟಿ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಬರಗೆಟ್ಟ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಿಗೆಟ್ಟ ವರನಂತೆ ವರ್ತಿಸುತ್ತಿದೆ ಕಾಂಗ್ರೆಸ್!
ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಗಳು ಹಾಗೂ ದಿನ ನಿತ್ಯ ಬಳಕೆಯ ವಸ್ತು ಗಗನಕ್ಕೇರಿರುವುದರ ಸಂಬಂಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಗಗನಕ್ಕೇರಿದ ಹಣ್ಣು, ತರಕಾರಿಗಳ ಬೆಲೆ: ಗ್ರಾಹಕರು ಹೈರಾಣ
ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮವರ್ಗದ ಜನರು ತತ್ತರಿಸಿ ಹೋಗುತ್ತಿದ್ದು, ಇದೀಗ ಹಣ್ಣು ಹಾಗೂ ತರಕಾರಿಗಳ ಬೆಲೆ ಏರಿಕೆಯಾಗಿರುವುದು ಜನತೆ ಕಂಗಾಲಾಗುವಂತೆ ಮಾಡಿದೆ.

ಬೆಂಗಳೂರು: ವಿದ್ಯುತ್, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೆ ಹೋಟೆಲ್ ಗಳಲ್ಲಿ ಊಟ ತಿಂಡಿಗಳ ದರ ಏರಿಕೆ!
ರಾಜ್ಯದಲ್ಲಿ ಹಾಲು, ಗ್ಯಾಸ್, ವಿದ್ಯುತ್ ದರ ಸೇರಿ ಎಲ್ಲ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾದ ಬೆನ್ನಲ್ಲೇ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಿಸಲು ಬೆಂಗಳೂರು ಹೋಟೆಲ್ ಗಳ ಮಾಲೀಕರ ಸಂಘ ನಿರ್ಧರಿಸಿದೆ.

200 ಯುನಿಟ್ ಉಚಿತ ಘೋಷಣೆ ಬೆನ್ನಲ್ಲೆ ಜನತೆಗೆ ರಾಜ್ಯ ಸರ್ಕಾರ ಶಾಕ್: ಜುಲೈ 1 ರಿಂದ ವಿದ್ಯುತ್ ದರ ಏರಿಕೆ
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಜೊತೆಗೆ ರಾಜ್ಯ ಸರ್ಕಾರ ಜನತೆಗೆ ಶಾಕ್ ನೀಡಿದೆ. ಮತ್ತೆ ವಿದ್ಯುತ್ ದರ ಏರಿಸುವ ಮೂಲಕ ಸರಕಾರ ಮತ್ತೆ ಹೊರೆ ಹಾಕಿದೆ.

