price hike

ದೇಶಾದ್ಯಂತ ಡೀಸೆಲ್ ದರ ಏರಿಕೆ: ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ ಬೆಲೆ
ಶತಕದ ಗಡಿ ದಾಟಿದ ಬಳಿಕ ಕಳೆದ 21 ದಿನಗಳಿಂದ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗದೆ ಸ್ಥಿರವಾಗಿದ್ದು, ಎಲ್ಲಾ ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆ ಮಾತ್ರ ಗಗನಕ್ಕೇರುತ್ತಲೇ ಇದೆ.

ಬೆಲೆ ಏರಿಕೆಗೆ ಜನಾಕ್ರೋಶ ವ್ಯಕ್ತವಾಗುತ್ತಿಲ್ಲ: ರಮೇಶ್ ಕುಮಾರ್ ಅಸಮಾಧಾನ
ಬೆಲೆ ಏರಿಕೆ ಕುರಿತು ವಿಧಾನಸಭಾ ಕಲಾಪದ ನಾಲ್ಕನೇ ದಿನವೂ ಚರ್ಚೆ ಮುಂದುವರಿಯಿತು. ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ಬೆಲೆ ಏರಿಕೆ ಯಾವುದಕ್ಕೆ ಆಗಿದೆ, ಯಾವ ವಸ್ತುಗಳ ಬೆಲೆ ಏರಿಕೆ ಆಗಿದೆ ಎಂಬುದರ ಬಗ್ಗೆ ಹೆಚ್ಚಿನ ಮಂದಿಗೆ ಗಮನವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಲೆ ಏರಿಕೆ ಕುರಿತು ಬಿಸಿ ಬಿಸಿ ಚರ್ಚೆ: ಮಸಾಲೆ ದೋಸೆ ಒಂದಕ್ಕೆ 100 ರೂ.! ಇದಕ್ಕೆ ಏನ್ ಹೇಳ್ತೀರಿ?
ವಿಧಾನಸಭಾ ಕಲಾಪದ ಮೂರನೆಯ ದಿನ ಸದನದಲ್ಲಿ ಬೆಲೆ ಏರಿಕೆ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದ್ದು, ಒಂದು ಮಸಾಲೆ ದೋಸೆಗೆ ನೂರು ರೂಪಾಯಿ ಆಗಿದೆ. ಇದಕ್ಕೆ ಏನ್ ಹೇಳ್ತೀರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ...

ನಿಜವಾದ ಇಂಧನ, ಗ್ಯಾಸ್ ಬಳಕೆದಾರರು ಯಾರೂ ಪ್ರತಿಭಟಿಸಿಲ್ಲ; ಎಲ್ಲಾ ಡ್ರಾಮಾ: ಬೆಲೆ ಏರಿಕೆಗೆ ಸಚಿವ ನಾರಾಯಣ ಗೌಡ ಸಮರ್ಥನೆ
ನಿಜವಾದ ಇಂಧನ, ಗ್ಯಾಸ್ ಬಳಕೆದಾರರು ಯಾರೂ ಬೀದಿಗೆ ಬಂದಿಲ್ಲ, ಬೀದಿಗೆ ಬಂದಿರುವವರು ರಾಜಕಾರಣಿಗಳು ಮಾತ್ರ. ಹೀಗೆ ಕೇಂದ್ರದ ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು ಕ್ರೀಡಾ ಸಚಿವ ನಾರಾಯಣಗೌಡ ಹೇಳಿಕೆ ನೀಡಿದರು.

ತೈಲ ಬೆಲೆ ಏರಿಸಿ ಸಂಗ್ರಹಿಸಿದ 25 ಲಕ್ಷ ಕೋಟಿ ರೂ. ಎಲ್ಲಿ?: ಕೇಂದ್ರಕ್ಕೆ ರಾಹುಲ್ ಪ್ರಶ್ನೆ
ರೈತರು, ಸಣ್ಣಪುಟ್ಟ ವ್ಯಾಪಾರಿಗಳ ಜೇಬಿನಲ್ಲಿ ಅಳಿದುಳಿದ ರುಪಾಯಿಗಳನ್ನೂ ಮೋದಿ ಬಾಚಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಕಿಡಿ ಕಾರಿದ್ದಾರೆ.

ಎಲ್ ಪಿ ಜಿ ಸಿಲಿಂಡರ್ ಬೆಲೆಯೇರಿಸಿದ ಕೇಂದ್ರದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ
ಜನವರಿ ತಿಂಗಳಿನಿಂದ ಇಲ್ಲಿಯವರೆಗೆ ದೇಶದ ನಾಲ್ಕು ಪ್ರಮುಖ ಮೆಟ್ರೊ ನಗರಗಳಲ್ಲಿನ ಎಲ್ ಪಿ ಜಿ ಸಿಲಿಂಡರುಗಳ ಬೆಲೆ ಏರಿಕೆಯಾಗಿರುವ ಅಂಕಿ ಅಂಶಗಳನ್ನು ರಾಹುಲ್ ತಮ್ಮ ಟ್ವೀಟ್ ನಲ್ಲಿ ನಮೂದಿಸಿದ್ದಾರೆ.

ತೈಲ ಬೆಲೆ ಏರಿಕೆ ಮುಂದುವರಿಕೆ; ಬೆಂಗಳೂರಿನಲ್ಲಿ 105 ರೂ. ಗಡಿ ದಾಟಿದ ಪೆಟ್ರೋಲ್ ದರ!
ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ 36 ಪೈಸೆ ಮತ್ತು ಡೀಸೆಲ್ ದರ 17 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.105ರ ಗಡಿ ದಾಟಿದಂತಾಗಿದೆ.

ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಜೆಡಿಎಸ್ ಪ್ರತಿಭಟನೆ: ಎಚ್.ಕೆ. ಕುಮಾರಸ್ವಾಮಿ
ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಳೆದ ವಾರ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು, ಈಗ ಜೆಡಿಎಸ್ ಪ್ರತಿಭಟನೆಗೆ ಮುಂದಾಗಿದೆ.

ಉದ್ಯಮಗಳ ನಷ್ಟ ಸರಿದೂಗಿಸುವಿಕೆಯಿಂದ ಅವಶ್ಯಕ ವಸ್ತುಗಳ ಬೆಲೆ ಏರಿಕೆ- ಆರ್ಥಿಕ ತಜ್ಞರು
ಲಾಕ್ ಡೌನ್ ಅವಧಿಯಲ್ಲಿ ತಮ್ಮಗಾದ ನಷ್ಟವನ್ನು ಬೆಲೆ ಏರಿಕೆ ಮೂಲಕ ಉತ್ತಮಗೊಳಿಸಲು ಉದ್ಯಮಗಳು ಪ್ರಯತ್ನಿಸುತ್ತಿರುವುದರಿಂದ ಆರ್ಥಿಕ ಕುಸಿತದ ನಂತರ ಹಣದುಬ್ಬರ ನಿರೀಕ್ಷಿತ ಫಲಿತಾಂಶವಾಗಿದೆ ಎಂದು ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಮಾಜಿ ನಿರ್ದೇಶಕ ಮತ್ತು ಐಎಸ್ ಇಸಿ ಅತಿಥಿ ಪ್ರೊಫೆಸರ್ ಆರ್ ಎಸ್ ದೇಶಪಾಂಡೆ ವಿವರಿಸಿದ್ದಾರೆ.

