President Draupadi Murmu

2023ರ ಅರ್ಜುನ ಪ್ರಶಸ್ತಿ ಪುರಸ್ಕೃತರು- Photos
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನೆರವೇರಿದ ಸಮಾರಂಭದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2023ನೇ ಸಾಲಿನ ಅರ್ಜುನ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಉಪ ರಾಷ್ಟ್ರಪತಿ ಧಂಖರ್ ಬಗ್ಗೆ ಅಪಹಾಸ್ಯದ ಮಿಮಿಕ್ರಿ: ರಾಷ್ಟ್ರಪತಿ, ಪ್ರಧಾನಿ ಸೇರಿ ಹಲವರಿಂದ ಖಂಡನೆ, ದೂರು ದಾಖಲು
ಸಂಸತ್ತು ಭವನದ ಹೊರಗೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಸಿಂಗ್ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಬಗ್ಗೆ ವ್ಯಂಗ್ಯವಾಗಿ ಅಪಹಾಸ್ಯ ಮಾಡುತ್ತಾ ಮಿಮಿಕ್ರಿ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಹ ಅದನ್ನು ವಿಡಿಯೊ ಚಿತ್ರೀಕರಣ ಮಾಡಿದರೆ ಇನ್ನು ಹಲವು ಸಂಸದರು ಅದಕ್ಕೆ ಕೇಕೆ ಹಾಕಿ ನಕ್ಕಿರುವ ವಿಷಯ ತೀವ್ರ ವಿವಾದಕ್ಕೀಡುಮಾಡಿದೆ.

ಭದ್ರತಾ ನಿಯಮಗಳ ಉಲ್ಲಂಘನೆ: ರಾಷ್ಟ್ರಪತಿಗಳಿಂದ ಎಸ್ ಎಫ್ ಸಿ ಮೇಜರ್ ಸೇವೆಯಿಂದ ವಜಾ
ರಾಷ್ಟ್ರೀಯ ಭದ್ರತಾ ನಿಯಮಗಳು, ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳ ಮೂಲ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಉನ್ನತ ಮಟ್ಟದ ತನಿಖೆಯಿಂದ ತಪ್ಪಿತಸ್ಥರೆಂದು ಕಂಡುಬಂದ ನಂತರ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (SFC) ಯಲ್ಲಿ ನೇಮಕಗೊಂಡ ಭಾರತೀಯ ಸೇನಾ ಮೇಜರ್ ಒಬ್ಬರನ್ನು ಸೇವೆಯಿಂದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಜಾಗೊಳಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಮೂವರಿಗೆ ರಾಜ್ಯ ಮುಕ್ತ ವಿವಿ ಗೌರವ ಡಾಕ್ಟರೇಟ್
ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಮೂವರಿಗೆ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (ಡಿ.ಲಿಟ್) ನೀಡಲಾಗುತ್ತಿದೆ.

ಹೊಸ ಸಂಸತ್ತು ಕಟ್ಟಡ ರಾಷ್ಟ್ರಪತಿಗಳಿಂದ ಉದ್ಘಾಟಿಸಬೇಕೆಂದು ಕೋರಿ ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನೂತನ ಸಂಸತ್ ಭವನದ ಉದ್ಘಾಟನೆಗೆ ಲೋಕಸಭೆ ಸೆಕ್ರೆಟರಿಯೇಟ್‌ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ರಾಷ್ಟ್ರಪತಿಗಳಿಗೆ ಮೇಲ್ ಮೂಲಕ ದೂರು ಸಲ್ಲಿಕೆ: 7 ಮಂದಿ ಪ್ರಾಧ್ಯಾಪಕರಿಗೆ ವಿಶ್ವಭಾರತಿ ವಿವಿ ಶೋಕಾಸ್ ನೊಟೀಸ್
ವಿಶ್ವಭಾರತಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿದ್ಯುತ್ ಚಕ್ರವರ್ತಿ ಅವರ ಕಾರ್ಯವೈಖರಿಯ ವಿರುದ್ಧ ದೂರು ನೀಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಘಟಿಕೋತ್ಸವ ಆರಂಭಕ್ಕೆ ಮುನ್ನ ಏಳು ಮಂದಿ ಬೋಧಕ ಸಿಬ್ಬಂದಿಗೆ ಶಿಕ್ಷಣ ಸಂಸ್ಥೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ.

ಕೇಂದ್ರ ಬಜೆಟ್ 2023 ಮಂಡನೆ: ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ವಿತ್ತ ಸಚಿವೆ
ಕೇಂದ್ರ ಹಣಕಾಸು ಸಚಿವರು ಬಜೆಟ್ ಮಂಡನೆಗೆ ಮುನ್ನ ರಾಷ್ಟ್ರಪತಿಗಳನ್ನು ಭೇಟಿ ಮಾಡುವುದು ಸಂಪ್ರದಾಯ. ಅದರ ಪ್ರಕಾರ ಇಂದು ಬುಧವಾರ ಬೆಳಗ್ಗೆ ಲೋಕಸಭೆಯಲ್ಲಿ 11 ಗಂಟೆಗೆ ಬಜೆಟ್ ಮಂಡನೆಗೆ ಮುನ್ನ ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿ ಮಾಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ಭವನಕ್ಕೆ ತೆರಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ವಿಧಾನಸೌಧದಲ್ಲಿ ನಾಗರಿಕ ಸನ್ಮಾನ: ಜೋಗತಿ ಮಂಜಮ್ಮ, ಪ್ರಕಾಶ್ ಪಡುಕೋಣೆ ಸೇರಿ ಹಲವರಿಂದ ಸನ್ಮಾನ
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ನಡೆದ ನಾಗರಿಕ ಸ್ವಾಗತ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸನ್ಮಾನಿಸಲು ವಿವಿಧ ಕ್ಷೇತ್ರಗಳ ವ್ಯಕ್ತಿಗಳನ್ನು ಆಯ್ಕೆ ಮಾಡಲಾಯಿತು. ಇಸ್ಕಾನ್‌ನ ಮಧು ಪಂಡಿತ್ ದಾಸ (ಸಮಾಜ ಸೇವೆ), ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ (ಸಾಹಿತ್ಯ), ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ಕಿರಣ್ ಮಜುಂದಾರ್-ಶಾ (ಉದ್ಯಮ)

ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಪರಿವರ್ತಿಸುವಲ್ಲಿ ಕರ್ನಾಟಕ ಪಾತ್ರ ಮುಖ್ಯವಾಗಿದೆ: ರಾಷ್ಟ್ರಪತಿ ಮುರ್ಮು
ಭಾರತ ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸುವಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

