Prayagraj

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲಿಯೇ 5 ಮಂದಿ ಸಾವು, ಐವರಿಗೆ ಗಾಯ
ಉತ್ತರ ಪ್ರದೇಶದ ಪ್ರಯಾಗ್ ರಾಜ್ ದ ವಿಂದ್ಯಾಚಲ ಎಂಬಲ್ಲಿ ಹಂಡಿಯಾ ಹೆದ್ದಾರಿ ಪಕ್ಕ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಸ್ಥಳದಲ್ಲಿಯೇ ಮೃತಪಟ್ಟು ಇನ್ನು 5 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ರಕ್ತದ ಪ್ಲೇಟ್‌ಲೆಟ್ ಬದಲಿಗೆ ರೋಗಿಗೆ 'ಮೂಸಂಬಿ ಜ್ಯೂಸ್' ಪೂರಣ ಮಾಡಿದ ಉತ್ತರ ಪ್ರದೇಶದ ಆಸ್ಪತ್ರೆ ಕೆಡವಲು ನೋಟಿಸ್
ಡೆಂಗ್ಯೂ ರೋಗಿಗೆ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ನೀಡಿದ ಆರೋಪದ ಮೇಲೆ ಜಪ್ತಿ ಮಾಡಲಾಗಿದ್ದ ಖಾಸಗಿ ಆಸ್ಪತ್ರೆಯನ್ನು ಕೆಡವಲು ಇಲ್ಲಿನ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ರಕ್ತದ ಪ್ಲೇಟ್ಲೇಟ್ಸ್ ಪ್ಯಾಕೆಟ್ ನಲ್ಲಿ ಮೂಸಂಬಿ ಜ್ಯೂಸ್; ಉತ್ತರ ಪ್ರದೇಶದಲ್ಲಿ 10 ಮಂದಿ ಬಂಧನ
ರಕ್ತದ ಪ್ಲೇಟ್ಲೇಟ್ಸ್ ಪ್ಯಾಕೆಟ್ ನಲ್ಲಿ ಮೂಸಂಬಿ ಜ್ಯೂಸ್ ಹಾಕಿ ಡೆಂಗ್ಯೂ ರೋಗಿಯೊಬ್ಬರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 10 ಮಂದಿ ನಕಲಿ ಪ್ಲೇಟ್ಲೇಟ್ಸ್ ಮಾರಾಟಗಾರರನ್ನು ಶನಿವಾರ ಬಂಧಿಸಿದ್ದಾರೆ.

ಪ್ಲಾಸ್ಮಾ ಬದಲಿಗೆ ಡ್ರಿಪ್ಸ್ ನಲ್ಲಿ ಮೂಸಂಬಿ ರಸ: ಡೆಂಗ್ಯೂ ರೋಗಿ ಸಾವು, ಆಸ್ಪತ್ರೆ ಸೀಜ್
ಡ್ರಿಪ್ಸ್ ನಲ್ಲಿ ಪ್ಲಾಸ್ಮಾ ಬದಲಿಗೆ ಮೂಸಂಬಿ ರಸ ನೀಡಿದ ಪರಿಣಾಮ ಡೆಂಗ್ಯೂ ರೋಗಿಯೊಬ್ಬರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇದೀಗ ಇಡೀ ಆಸ್ಪತ್ರೆಯನ್ನು ವೈದ್ಯಾಧಿಕಾರಿಗಳು ಸೀಜ್ ಮಾಡಿದ್ದಾರೆ.

ಪವಿತ್ರ ಗಂಗಾ ನದಿ ಮೇಲೆ ದೋಣಿಯಲ್ಲಿ ಹುಕ್ಕಾ, ಮಾಂಸಾಹಾರ ಸೇವನೆ: ಪ್ರಕರಣ ದಾಖಲು
ಹಿಂದೂಗಳ ಪವಿತ್ರ ನದಿ ಎಂದೇ ಕರೆಯಲಾಗುವ ಗಂಗಾ ನದಿ ಮೇಲೆ ದೋಣಿಯಲ್ಲಿ ಹುಕ್ಕಾ, ಮಾಂಸಾಹಾರ ಸೇವನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.

ಮಹಿಳಾ ಸ್ವ ಸಹಾಯ ಸಂಘಗಳ ಬ್ಯಾಂಕ್ ಖಾತೆಗಳಿಗೆ ರೂ.1,000 ಕೋಟಿ ವರ್ಗಾಯಿಸಿದ ಪ್ರಧಾನಿ ಮೋದಿ
ಮಹಿಳಾ ಸಬಲೀಕರಣ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಹಿಳಾ ಸ್ವ ಸಹಾಯ ಸಂಘಗಳ ಬ್ಯಾಂಕ್ ಖಾತೆಗಳಿಗೆ ರೂ.1,000 ಕೋಟಿ ರೂಪಾಯಿಯನ್ನು ವರ್ಗಾಯಿಸಿದ್ದಾರೆ. ಇದರಿಂದ ಸ್ವ ಸಹಾಯ ಸಂಘಗಳ ಸುಮಾರು 16 ಲಕ್ಷ ಮಹಿಳಾ ಸದಸ್ಯರಿಗೆ ಪ್ರಯೋಜನವಾಗಲಿದೆ.

ಉತ್ತರ ಪ್ರದೇಶ: ಭೂ ವಿವಾದ ಹಿನ್ನೆಲೆ ದಲಿತ ಕುಟುಂಬದ ನಾಲ್ವರ ಬರ್ಬರ ಹತ್ಯೆ; ಮೃತ ಬಾಲಕಿಯ ಮೇಲೆ ಅತ್ಯಾಚಾರ ಶಂಕೆ!
ಭೂವಿವಾದದ ಕಾರಣಕ್ಕೆ ಪರಿಶಿಷ್ಟ ಜಾತಿ(ಎಸ್ಸಿ) ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಅಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ನಡೆದಿದೆ.

ಮಹಾಂತ ನರೇಂದ್ರ ಗಿರಿ ಸಾವು ಪ್ರಕರಣ: ಪ್ರಯಾಗ್ ರಾಜ್ ತಲುಪಿದ ಸಿಬಿಐ ತಂಡ
ಅಖಿಲ ಭಾರತೀಯ ಅಖಾಡ ಪರಿಷತ್ ನ ಮುಖ್ಯಸ್ಥರಾದ ಮಹಾಂತ ನರೇಂದ್ರ ಗಿರಿ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುವುದಕ್ಕೆ ಸಿಬಿಐ ತಂಡ ಪ್ರಯಾಗ್ ರಾಜ್ ಗೆ ತಲುಪಿದೆ.

ಪ್ರಯಾಗ್ ರಾಜ್: ಅಖಾಡ ಪರಿಷತ್ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಶವವಾಗಿ ಪತ್ತೆ
ಆಘಾತಕಾರಿ ಘಟನೆಯೊಂದರಲ್ಲಿ, ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಆಚಾರ್ಯ ನರೇಂದ್ರ ಗಿರಿ ಅವರು ಸೋಮವಾರ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ.

