Prakash raj

ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆ ಸುದ್ದಿ; ನಟ ಪ್ರಕಾಶ್ ರಾಜ್ ಟಾಂಗ್ ಕೊಟ್ಟು ಹೇಳಿದ್ದೇನು?
ರಾಜ್ಯ ರಾಜಕಾರಣದಲ್ಲಿ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವುದು ಕನ್ನಡದ ಬಾದ್ ಶಾ ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಿದ್ದಾರೆ ಎನ್ನುವ ವಿಚಾರ. ಯಾವಾಗಲೂ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಮತ್ತು ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿರುವ ನಟ ಪ್ರಕಾಶ್ ರಾಜ್, ಇದೇ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

2ನೇ ಹಂತದ 'ಅಪ್ಪು ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್' ಗೆ ಚಾಲನೆ: ಪ್ರಕಾಶ್ ರೈಗೆ ಯಶ್, ಚಿರಂಜೀವಿ, ಸೂರ್ಯ ಸಾಥ್!
ನಟ-ರಾಜಕಾರಣಿ ಪ್ರಕಾಶ್ ರಾಜ್ ಇತ್ತೀಚಿಗೆ 2ನೇ ಹಂತದ ಅಪ್ಪು ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್' ಗೆ ಚಾಲನೆ ನೀಡಿದ್ದಾರೆ. ಅವರ ಈ ಸೇವಾ ಕಾರ್ಯಕ್ಕೆ ಈ ಬಾರಿ ರಾಕಿಂಗ್ ಸ್ಟಾರ್ ಯಶ್, ಮೆಗಾಸ್ಟಾರ್ ಚಿರಂಜೀವಿ ಮತ್ತು ಕಾಲಿವುಡ್ ನ ಸೂರ್ಯ ನೆರವಾಗಿದ್ದಾರೆ. ಈ ವಿಚಾರವನ್ನು ಪ್ರಕಾಶ್ ರಾಜ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಿಜಯ್-ರಶ್ಮಿಕಾ ಮಂದಣ್ಣ ಅಭಿನಯದ 'ವಾರಿಸು' ಚಿತ್ರದ ಡಿಲಿಟೆಡ್ ದೃಶ್ಯ ಬಿಡುಗಡೆ ಮಾಡಿದ ಪ್ರೈಮ್ ವಿಡಿಯೋ
ಪ್ರೈಮ್ ವಿಡಿಯೋ ವಿಜಯ್ ಅವರ ಇತ್ತೀಚಿನ ಸಿನಿಮಾ 'ವಾರಿಸು'ದಿಂದ ಅಳಿಸಲಾಗಿದ್ದ ದೃಶ್ಯವನ್ನು ಬಿಡುಗಡೆ ಮಾಡಿದೆ. ಈ ಸಿನಿಮಾ ಸದ್ಯ ಪ್ರೈಮ್ ವಿಡಿಯೋ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತಿದೆ.

ಮೂರ್ಖರು, ಮತಾಂಧರು ಬೊಗಳುತ್ತಾರೆ, ಕಚ್ಚುವುದಿಲ್ಲ: ಪಠಾಣ್ ಸಿನಿಮಾ ವಿರೋಧಿಗಳ ಬಗ್ಗೆ ಪ್ರಕಾಶ್ ರಾಜ್ ಟೀಕೆ
ಕೇರಳದ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್, ‘ಅವರು ಪಠಾಣ್ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಅಂದುಕೊಂಡಿದ್ದರು. ಆದರೆ, ಈ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

‘ಬೊಗಳುತ್ತಾರೆ, ಕಚ್ಚುವುದಿಲ್ಲ ಎಂದಿದ್ದ ನಟ ಪ್ರಕಾಶ್ ರಾಜ್‌ಗೆ ಅರ್ಬನ್ ನಕ್ಸಲ್ ಎಂದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ನಟ ಪ್ರಕಾಶ್ ರಾಜ್ ಅವರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಟೀಕಿಸಿದ ನಂತರ, ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಕಟುವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ತಮ್ಮ ಚಿತ್ರವು ಅರ್ಬನ್ ನಕ್ಸಲರ ನಿದ್ದೆಯನ್ನು ಕೆಡಿಸಿದೆ ಎಂದು ಹೇಳಿದ್ದಾರೆ.

ಕೋಮಲ್ ಕುಮಾರ್ 'ಕಾಲಾಯ ನಮಃ' ಚಿತ್ರದಲ್ಲಿ ನಟ ಪ್ರಕಾಶ್ ರೈ
ಪವನ್ ಒಡೆಯರ್ ಅವರ ಗೋವಿಂದಾಯ ನಮಃ ಚಿತ್ರದ ಮೂಲಕ ನಾಯಕನಾಗಿ ಹೊರಹೊಮ್ಮಿದ ಹಾಸ್ಯನಟ ನಟ ಕೋಮಲ್ ಕುಮಾರ್ ಐದು ವರ್ಷಗಳ ನಂತರ ಕಾಲಾಯ ನಮಃ ಚಿತ್ರದ ನಾಯಕನಾಗಿ ನಟಿಸಲು ಮರಳುತ್ತಿದ್ದಾರೆ.

'ಆಳುವ ಎಡಬಿಡಂಗಿಗಳಿಂದ ಇತಿಹಾಸ ತಿರುಚುವ ಹುನ್ನಾರ; ಗೋಮೂತ್ರ ಶ್ರೇಷ್ಠವಾಗಿದ್ದರೆ ನೀವೇ ಕುಡಿಯಿರಿ, ನಮ್ಮನ್ನು ಸ್ವಚ್ಛವಾಗಿರಲು ಬಿಡಿ'
ಎಡಬಿಡಂಗಿಗಳಿಗೆ ಇತಿಹಾಸವಿಲ್ಲ, ಇತಿಹಾಸವೂ ಗೊತ್ತಿಲ್ಲ. ಇದರಿಂದಲೇ ಇವರಿಗೆ ಭೂತಕಾಲ, ವರ್ತಮಾನದ ಕಾಲವೂ ಅರ್ಥವಾಗುತ್ತಿಲ್ಲ. ಭವಿಷ್ಯತ್ ಕಾಲದ ಕುರಿತು ಅರಿವಿಲ್ಲ. ಅದಕ್ಕಾಗಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಇವರದ್ದು ಬಣ್ಣದ ಕುರುಡು: ಎಷ್ಟು ದಿನ ನಾವು ಇಂತಹ ಅಂಧಭಕ್ತರನ್ನು ಸಹಿಸಿಕೊಳ್ಳಬೇಕು? ಪಠಾಣ್ ವಿವಾದದ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ
ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಪಠಾಣ್ ಸಿನಿಮಾದ ‘ಬೇಷರಮ್ ರಂಗ್’ ವಿಡಿಯೋ ಹಾಡು ಕಳೆದ ಸೋಮವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿನ ಕೊನೆಯಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ಕುಣಿದಿದ್ದಾರೆ.

'ನಿಮಗಿಂತ ರಿಚಾ ಚಡ್ಡಾ ಅವರೇ ಇಂದು ನಮ್ಮ ದೇಶಕ್ಕೆ ಹೆಚ್ಚು ಪ್ರಸ್ತುತ': ಅಕ್ಷಯ್ ಕುಮಾರ್‌ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ
ಬಾಲಿವುಡ್ ನಟಿ ರಿಚಾ ಚಡ್ಡಾ ಅವರ 'ಗಲ್ವಾನ್ ಸೇಸ್ ಹಾಯ್' ಟ್ವೀಟ್ ಕುರಿತು ಅಕ್ಷಯ್ ಕುಮಾರ್ ಅವರ ಪ್ರತಿಕ್ರಿಯೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ, ಟ್ರೋಲ್ ಗೆ ಕಾರಣವಾಗಿದೆ.

