Prabhas

Salaar: ಕನ್ನಡ ಸೇರಿ ಐದು ಭಾಷೆಗಳಲ್ಲೂ ಮಾಡಿದ ಪೃಥ್ವಿರಾಜ್ ಸುಕುಮಾರನ್ ಸ್ವತಃ ಡಬ್ಬಿಂಗ್!
ನಟ ಪ್ರಭಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಲಾರ್ ಚಿತ್ರವು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಡಿಸೆಂಬರ್ 22 ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಬೆನ್ನಲ್ಲೇ ವರದ ಪಾತ್ರದಲ್ಲಿ ನಟಿಸಿರುವ ಪೃಥ್ವಿರಾಜ್ ಸುಕುಮಾರನ್ ತಮ್ಮ ಪಾತ್ರಕ್ಕಾಗಿ ಎಲ್ಲಾ ಐದೂ ಭಾಷೆಗಳಲ್ಲಿ ತಾವೇ ಧ್ವನಿ ನೀಡಿದ್ದಾರೆ.

ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಟ್ರೈಲರ್ ಬಿಡುಗಡೆ
ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದೆ

ಬಿಗ್ ಬಜೆಟ್ ಉಗ್ರಂ ವರ್ಷನ್?; Salaar Trailer ಪಬ್ಲಿಕ್ ರಿವ್ಯೂ
ನಿರೀಕ್ಷೆಯಂತೆಯೇ ನಟ ಪ್ರಭಾಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಜುಗಲ್ ಬಂದಿಯ ಸಲಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಲಾರ್ ಟ್ರೈಲರ್ ಬಿಡುಗಡೆ: ಥಿಯೇಟರ್ ನಲ್ಲಿ ಸಂಭ್ರಮಿಸಿದ ನಿರ್ಮಾಪಕ ವಿಜಯ್ ಕಿರಂಗದೂರ್
ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಇದಕ್ಕೂ ಮೊದಲೇ ಟ್ರೈಲರ್ ನೋಡಿದ ನಿರ್ಮಾಪಕ ವಿಜಯ್ ಕಿರಗಂದೂರು ಟ್ರೈಲರ್ ನೋಡಿ ಫಿದಾ ಆಗಿದ್ದಾರೆ.

'ಕಣ್ಣಪ್ಪ' ತೆಲುಗು ಚಿತ್ರದಲ್ಲಿ ಮೋಹನ್ ಲಾಲ್, ಪ್ರಭಾಸ್ ಜೊತೆಗೆ ಶಿವಣ್ಣ! ಖಚಿತಪಡಿಸಿದ ವಿಷ್ಣು ಮಂಚು
'ಜೈಲರ್' ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿಯಾದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಗೆ ಬೇರೆ ಬೇರೆ ಇಂಡಸ್ಟ್ರಿಯಿಂದ ಅವಕಾಶಗಳು ಹುಡುಕಿ ಬರುತ್ತಿವೆ. ಇದೀಗ ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ತೆಲುಗಿನ ಫ್ಯಾಂಟಸಿ-ಆಕ್ಷನ್ 'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್, ಮೋಹನ್ ಲಾಲ್ ಜೊತೆಗೆ ನಟಿಸುತ್ತಿದ್ದಾರೆ.

ನಟ ಪ್ರಭಾಸ್ ನಟನೆ 'ಸಲಾರ್' ರಿಲೀಸ್ ಡೇಟ್ ಫಿಕ್ಸ್!
ಪ್ರಭಾಸ್ ನಟನೆಯ ‘ಸಲಾರ್’ ಚಿತ್ರ ಬಿಡುಗಡೆಗೆ ಹೊಂಬಾಳೆ ಫಿಲ್ಮ್ಸ್ ಹೊಸ ಮುಹೂರ್ತ ನಿಗದಿ ಮಾಡಿದೆ.

ಕೆಜಿಎಫ್ ಮತ್ತು ಸಲಾರ್ ಕಥೆಗಳ ನಡುವೆ ಸಂಪರ್ಕ; ಪ್ರಶಾಂತ್ ನೀಲ್ ಕೈಚಳಕದ ಬಗ್ಗೆ ಗರಿಗೆದರಿದ ನಿರೀಕ್ಷೆ
ಪ್ರಭಾಸ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ 'ಸಲಾರ್' ಸಿನಿಮಾ ಸೆಪ್ಟೆಂಬರ್ 28ರಂದು ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಈ ಹೈಬಜೆಟ್ ಆ್ಯಕ್ಷನ್ ಥ್ರಿಲ್ಲರ್ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಪ್ರಶಾಂತ್ ಮತ್ತು ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರಕ್ಕೆ ಕನ್ನಡ ಸೇರಿ ಐದು ಭಾಷೆಗಳಿಗೂ ಡಬ್ ಮಾಡಿದ ಶ್ರುತಿ ಹಾಸನ್!
ಬಹುನಿರೀಕ್ಷಿತ ಮುಂಬರುವ ಸಲಾರ್ ಚಿತ್ರಕ್ಕೆ ನಟಿ ಶ್ರುತಿ ಹಾಸನ್ ತಮ್ಮ ಪಾತ್ರಕ್ಕೆ ಐದು ಭಾಷೆಗಳಲ್ಲಿಯೂ ತಮ್ಮದೇ ಧ್ವನಿ ನೀಡಿದ್ದಾರೆ. ತಮ್ಮ ಮಾತೃಭಾಷೆ ತಮಿಳಿನಲ್ಲಿ ಡಬ್ಬಿಂಗ್ ಮಾಡುವುದರ ಜೊತೆಗೆ, ನಟಿ ಮತ್ತು ಗಾಯಕಿ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ತಾವೇ ಡಬ್ ಮಾಡಿದ್ದಾರೆ.

ಪ್ರಭಾಸ್ ಅಭಿನಯದ 'ಸಲಾರ್' ರೀ-ರೆಕಾರ್ಡಿಂಗ್ ಕೆಲಸದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್-ರವಿ ಬಸ್ರೂರ್ ಬ್ಯುಸಿ
'ಸಲಾರ್- ಸೀಸ್ ಫೈರ್' ಎಂಬ ಶೀರ್ಷಿಕೆಯ ಚಿತ್ರದ ಮೊದಲ ಭಾಗದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರಶಾಂತ್ ನೀಲ್ ಮತ್ತು ಸಂಗೀತ ಸಂಯೋಜಕ ರವಿ ಬಸ್ರೂರ್ ಸದ್ಯ ಕುಂದಾಪುರದ ಬಸ್ರೂರು ಗ್ರಾಮದ ಲ್ಯಾಟರ್ಸ್ ಸ್ಟುಡಿಯೋದಲ್ಲಿ ರೀ-ರೆಕಾರ್ಡಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

