Political parties

'ರೈತರ ಜೀವನ ಉದ್ಧಾರವಾಗಬೇಕೆಂಬುದು ನನ್ನ ಆಶಯ, ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ, ರಾಜಕೀಯ ಮಾಡಬೇಡಿ': ಪ್ರಧಾನಿ ಮೋದಿ
ನೂತನ ಕೃಷಿ ಮಸೂದೆಯನ್ನು ರಾತ್ರಿ-ಹಗಲಾಗುವುದರ ಒಳಗೆ ತರಾತುರಿಯಲ್ಲಿ ಜಾರಿಗೆ ತಂದಿಲ್ಲ, ಈ ಸುಧಾರಣೆಯ ಮಸೂದೆ ಬಗ್ಗೆ ಕಳೆದ 20-30 ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಸ್ತ್ರೃತವಾಗಿ ಚರ್ಚೆ ನಡೆಸುತ್ತಾ ಬಂದಿವೆ.

ಗ್ರಾಮ ಪಂಚಾಯತ್ ಚುನಾವಣೆಯನ್ನು ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದ ಮುಕ್ತಗೊಳಿಸಿ- ಆಯೋಗ ಕಟ್ಟಾಜ್ಞೆ
ರಾಜ್ಯದಲ್ಲಿ ಇದೇ 22 ಮತ್ತು 27 ರಂದು ಎರಡು ಹಂತಗಳಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಹೆಚ್ಚಾಗುತ್ತಿರುವುದನ್ನು ರಾಜ್ಯ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.

ಪ್ರತಿಭಟನೆ ಹಿಂದೆ ಯಾರಿದ್ದಾರೆ, ಮಾಧ್ಯಮಗಳು ತನಿಖೆ ಮಾಡಲಿ: ತೋಮರ್, ಗೋಯಲ್; ಆರೋಪ ತಳ್ಳಿಹಾಕಿದ ರೈತ ಸಂಘಟನೆಗಳು
ರಾಷ್ಟ್ರ ರಾಜಧಾನಿಯ ಹಲವು ಗಡಿಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಹಿಂದೆ ಯಾವುದಾದರೂ ಶಕ್ತಿ ಅಥವಾ ಯಾರಾದರೂ ಕುತಂತ್ರ ನಡೆಸುತ್ತಿದ್ದಾರೆಯೇ ಎಂದು ಮಾಧ್ಯಮಗಳು ಕಂಡುಹಿಡಿಯಬೇಕು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಹಾಗೂ ಆಹಾರ ಖಾತೆ ಸಚಿವ ಪಿಯೂಷ್ ಗೋಯಲ್ ಒತ್ತಾಯಿಸಿದ್ದಾರೆ.

ರೈತರ ಬಂದ್ ಗೆ ಜೆಡಿಎಸ್ ಬೆಂಬಲ, ಭೂ ಮಸೂದೆ ಪರವಾಗಿಯೂ ಮತ; ಯಾವ ಪಕ್ಷದಲ್ಲೂ ತತ್ವ ಸಿದ್ಧಾಂತ ಇಲ್ಲ: ಹೊರಟ್ಟಿ
ಯಾವ ಪಕ್ಷದಲ್ಲೂ ತತ್ವ-ಸಿದ್ದಾಂತ ಇಲ್ಲ, ನಾವೂ ಅದಕ್ಕೆ ಹೊರತಾಗಿಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ಕೋವಿಡ್-19 ನಿಯಮ ಉಲ್ಲಂಘನೆ: ರಾಜಕೀಯ ಪಕ್ಷಗಳಿಗೆ ಹೈಕೋರ್ಟ್ ನೊಟೀಸ್
ಪ್ರತಿಭಟನೆ, ರ್ಯಾಲಿಗಳ ಸಮಯದಲ್ಲಿ ಕೋವಿಡ್-19 ನಿಯಮ ಉಲ್ಲಂಘಟನೆಯಾಗುತ್ತಿರುವ ಬಗ್ಗೆ ಮತ್ತು ಬರುವ ಡಿಸೆಂಬರ್ 5ರಂದು ನಡೆಸಲು ಉದ್ದೇಶಿಸಿರುವ ರಾಜ್ಯ ಬಂದ್ ವೇಳೆ ಕೋವಿಡ್-19 ನಿಯಮ ಉಲ್ಲಂಘನೆಯಾಗದಂತೆ ಹೇಗೆ ನೋಡಿಕೊಳ್ಳುತ್ತೀರೆಂದು ವಿವರಣೆ ಕೋರಿ ಹೈಕೋರ್ಟ್ ರಾಜಕೀಯ ಪಕ್ಷಗಳಿಗೆ ನೊಟೀಸ್ ನೀಡಿದೆ.

ಉಪ ಚುನಾವಣೆ ಸಮಯ: ಚುನಾವಣಾ ಆಯೋಗಕ್ಕೆ ಸೋಷಿಯಲ್ ಮೀಡಿಯಾ ಪೋಸ್ಟ್ ಗಳದ್ದೇ ದೊಡ್ಡ ಸವಾಲು!
ನವೆಂಬರ್ 3ರ ಉಪ ಚುನಾವಣೆಗೆ ಮುನ್ನ ಸೋಷಿಯಲ್ ಮೀಡಿಯಾಗಳಲ್ಲಿ ಸಂದೇಶಗಳನ್ನು ಪತ್ತೆಹಚ್ಚುವ ಕೆಲಸ ಚುನಾವಣಾ ಆಯೋಗದ ಅಧಿಕಾರಿಗಳಿಗೆ ತಲೆನೋವಾಗಿದೆ.

ಶಿರಾ ಉಪ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಕಸರತ್ತು; ಗರಿಗೆದರಿದ ರಾಜಕೀಯ ಚಟುವಟಿಕೆ
ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ಇನ್ನೂ ದಿನಾಂಕವನ್ನೇ ನಿಗದಿ ಪಡಿಸಿಲ್ಲ, ಆದರೆ ಕ್ಷೇತ್ರದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ರಾಜಕೀಯ ಸದ್ಯಕ್ಕೆ ಬೇಡ, ಪಕ್ಷದ ಕಚೇರಿಯಿಂದ ದೂರಉಳಿಯುವಂತೆ ಕಾರ್ಯಕರ್ತರಿಗೆ ಕರೆ
ಕೊರೋನಾ ವೈರಸ್ ಭಯದಿಂದಾಗಿ ಎಲ್ಲಾ ರಾಜಕೀಯ ಪಕ್ಷಗಳ ಬಾಗಿಲು ಮುಚ್ಚಿವೆ, ಮಾರ್ಚ್ 31 ರ ವರೆಗೆ ಯಾವುದೇ ಕಾರ್ಯಕರ್ತರೂ ಪಕ್ಷದ ಕಚೇರಿಗೆ ಬರದಂತೆ ನಾಯಕರು ಮನವಿ ಮಾಡಿದ್ದಾರೆ.

2018-19ರಲ್ಲಿ 7 ಪಕ್ಷಗಳಿಗೆ ಅನಾಮಧೇಯ ಮೂಲಗಳಿಂದ 2513 ಕೋಟಿ ರೂ.ಹಣ: ಬಿಜೆಪಿಗೆ ಬಂದಿದ್ದೆಷ್ಟು ಗೊತ್ತೇ?
ರಾಷ್ಟ್ರೀಯ ರಾಜಕೀಯ ಪಕ್ಷಗಳು 2004ರಿಂದ 05ರವರೆಗೆ ಮತ್ತು 2018-19ರವರೆಗೆ ಅನಾಮಧೇಯ ಮೂಲಗಳಿಂದ 11,234.12 ಕೋಟಿ ರೂ. ಸಂದಾಯವಾಗಿದೆ ಎಂದು ವಿಶ್ಲೇಷಣೆಯೊಂದು ಬಹಿರಂಗಗೊಳಿಸಿದೆ.

