Police

ಬೆಂಗಳೂರು: ತನ್ನನ್ನು ಮದುವೆಯಾಗಬೇಕಿದ್ದ ಅಪ್ರಾಪ್ತೆಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಕೊಂದ ಸೈಯದ್!
ತನ್ನನ್ನು ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಭಾವಿ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ಜೀವಂತ ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಮಹಿಳೆ!ಮುಂದೇನಾಯ್ತು? ಈ Video ನೋಡಿ...
ಇಬ್ಬರು ಮಹಿಳೆಯರು ಮತ್ತು ವೃದ್ಧರನ್ನು ಒಳಗೊಂಡ ಐವರ ಗುಂಪು, ವೈಯಾಲಿಕಾವಲ್ ಬಳಿಯ ವಿನಾಯಕ ಸರ್ಕಲ್‌ನಲ್ಲಿರುವ ಕೊರಿಯರ್ ಕಚೇರಿಗೆ ಹೋಗಿ, ಗೋಣಿ ಚೀಲದಲ್ಲಿ ತಂದಿದ್ದನ್ನು ಪಾರ್ಸೆಲ್ ಮಾಡಲು ಹೇಳಿದ್ದಾರೆ.

ಕರ್ತವ್ಯಲೋಪ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಪೊಲೀಸರ ಮೇಲಿನ ನಿಯಂತ್ರಣಕ್ಕೆ PEBಗೆ ಮತ್ತಷ್ಟು ಶಕ್ತಿ; ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ
ಈ ವರೆಗೂ ಡಿಎಸ್ಪಿ ಹುದ್ದೆಯವರೆಗೆ ಇರುವ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸರ್ಕಾರದ ಅನುಮತಿ ಮತ್ತು ಇಲಾಖಾ ವಿಚಾರಣೆ ಅಗತ್ಯವಿತ್ತು. ಆದರೆ, ತಿದ್ದುಪಡಿ ಮಸೂದೆಯಿಂದಾಗಿ ದೋಷ, ನಿರ್ಲಕ್ಷ್ಯ ಅಥವಾ ಕರ್ತವ್ಯಲೋಪ ಕಂಡುಬಂದಲ್ಲಿ, ಇವರ ವಿರುದ್ಧ ಪಿಇಬಿ ತಕ್ಷಣ ಕ್ರಮ ಕೈಗೊಳ್ಳಬಹುದಾಗಿದೆ.

ಚಾಮರಾಜನಗರ: ತನ್ನ ಸಹೋದರಿಯೊಂದಿಗೆ ನಗ್ನವಾಗಿ ಸಿಕ್ಕಿಬಿದ್ದ ಗೆಳೆಯನ ಕತ್ತು ಸೀಳಿದ ಪ್ರಾಣ ಸ್ನೇಹಿತ!
ಸ್ನೇಹಿತನ ಸಹೋದರಿಯ ಜೊತೆಗಿನ ಅಕ್ರಮ ಸಂಬಂಧದಿಂದಾಗಿ ಪ್ರಾಣ ಸ್ನೇಹಿತನನ್ನೇ ಯುವಕನೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಂಡ್ಲುಪೇಟೆಯ ದೊಡ್ಡಕೆರೆ ಏರಿ ಬಳಿ ನಡೆದಿದೆ. ಮೃತನನ್ನು ಮೂಖಹಳ್ಳಿ ಗ್ರಾಮದ 23 ವರ್ಷದ ನಂಜುಂಡಸ್ವಾಮಿ ಎಂದು ತಿಳಿದುಬಂದಿದೆ.

ಬೆಂಗಳೂರು: ಹಫ್ತಾ ಕೊಡದಿದ್ದಕ್ಕೆ ಬ್ಯಾಟ್‌ನಿಂದ ಹಲ್ಲೆ; ಮಕ್ಕಳ ಎದುರೇ ನರಳಿ ಪ್ರಾಣಬಿಟ್ಟ Muslim ವ್ಯಕ್ತಿ, Video
ಬೆಂಗಳೂರಿನಲ್ಲಿ ಹಫ್ತಾ ನೀಡದಿದ್ದಕ್ಕೆ ಗ್ಯಾರೇಜ್ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಬ್ಯಾಟ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಲ್ಸನ್ ಗಾರ್ಡನ್ ನ ಬಡಾ ಮಖಾನ್ ಬಳಿ ನಡೆದಿದೆ.

7ನೇ ಮದುವೆ ಮಾಡಿಕೊಳ್ಳಲು ಮುಂದಾದ ತಂದೆ: ದಯವಿಟ್ಟು ತಡೆಯಿರಿ ಎಂದು ಪೊಲೀಸ್ ಮೊರೆ ಹೋದ ಮಗ!
ತನ್ನ ಮಗ ತನ್ನ ಮಾತು ಕೇಳುವುದಿಲ್ಲ. ಅದಕ್ಕಾಗಿ ತಾನು ಈ ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಅವರು ಇದುವರೆಗೆ ಆರು ಮದುವೆ ಮಾಡಿಕೊಂಡಿರುವುದನ್ನೂ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಪಿಎ ಆತ್ಮಹತ್ಯೆಗೆ ಶರಣು!
ಮೃತ ಶಿವಕುಮಾರ್ ಅವರು ದಾವಣಗೆರೆ ಮೂಲದವರಾಗಿದ್ದು, ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಅವರ ಬಳಿ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ಬೆಂಗಳೂರು: ಅಕ್ರಮ ಸಂಬಂಧ; ವಿವಾಹಿತ ಮಹಿಳೆಗೆ ಹಾಗೂ ಪೋಷಕರಿಗೆ ಬೆಂಕಿ ಹಚ್ಚಿದ ವಿವಾಹಿತ; ಮೂವರ ಸ್ಥಿತಿ ಗಂಭೀರ!
ತರಬನಹಳ್ಳಿಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕ್ಷುಲಕ ಕಾರಣಕ್ಕೆ ಯುವಕನೋರ್ವ ಪೆಟ್ರೋಲ್ ಸುರಿದು ತನ್ನ ಪ್ರಿಯತಮೆ ಮತ್ತು ಆಕೆಯ ಪೋಷಕರ ಮೇಲೆ ಬೆಂಕಿ ಹಚ್ಚಿದ್ದಾನೆ. ಆರೋಪಿಯನ್ನು ಪಾಂಡು ಅಲಿಯಾಸ್ ಚಂದು ಎಂದು ಗುರುತಿಸಲಾಗಿದ್ದು ಆತನನ್ನು ಬಂಧಿಸಲಾಗಿದೆ.

ಐತಿಹಾಸಿಕ ಹೆಜ್ಜೆ: ಮನೆ ಕೆಲಸಕ್ಕೆ ಕಾನ್‌ಸ್ಟೆಬಲ್‌ಗಳನ್ನು ಬಳಸುವ ಕಾಲೋನಿಯಲ್ 'ಆರ್ಡರ್ಲಿ' ಪದ್ಧತಿ ಕೊನೆಗೂ ರದ್ದು; ರಾಜ್ಯ ಪೊಲೀಸ್ ಇಲಾಖೆ ದಿಟ್ಟ ನಿರ್ಧಾರ..!
ಆರ್ಡರ್ಲಿ ಪದ್ಧತಿ ಬ್ರಿಟಿಷ್ ಕಾಲದಲ್ಲಿ ಆರಂಭವಾದ ವ್ಯವಸ್ಥೆ. ಈ ವ್ಯವಸ್ಥೆಯಡಿ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಹಿರಿಯ ಅಧಿಕಾರಿಗಳ ಮನೆಗಳಿಗೆ ನಿಯೋಜಿಸಿ, ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಸುವ ಪದ್ಧತಿ ನಡೆದುಬಂದಿತ್ತು.

