Petrol, diesel price hike

ತೈಲ ಬೆಲೆ ಕುಸಿತದಿಂದ ಸರ್ಕಾರಿ ಒಡೆತನದ ಒಐಎಲ್‌ಗೆ ನಷ್ಟ, ಪೆಟ್ರೋಲ್ ಬೆಲೆ ಏರಿಕೆಯಿಂದ ಹೆಚ್ಚುತ್ತಿದೆ ಜನಾಕ್ರೋಶ!
ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಒಡೆತನದ ತೈಲ ಮತ್ತು ಅನಿಲ ಉತ್ಪಾದಕ ಆಯಿಲ್ ಇಂಡಿಯಾ ಲಿಮಿಟೆಡ್(ಒಐಎಲ್) ಕಂಪನಿ ಇತಿಹಾಸದಲ್ಲಿ ಎರಡನೇ ಬಾರಿಗೆ ನಷ್ಟ ಅನುಭವಿಸಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೇ ಕಾರು ಚಾಲಕ ಪರಾರಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಸಿಲಿಕಾನ್ ಸಿಟಿಯಲ್ಲಿ ಕಾರು ಚಾಲಕನೋರ್ವ ಕಾರಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ತೈಲೋತ್ಪನ್ನಗಳ ದರ ಏರಿಕೆ: ಇಂದು ಅಲ್ಪ ಪ್ರಮಾಣದ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ
ಆಗಸದತ್ತ ಮುಖಮಾಡಿರುವ ತೈಲೋತ್ಪನ್ನಗಳ ದರ ಇಂದೂ ಕೂಡ ಏರಿಕೆಯಾಗಿದೆಯಾದರೂ ಅತ್ಯಲ್ಪ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ.

ತೈಲ ಬೆಲೆ ಏರಿಕೆ: ಸರ್ಕಾರದ ವಿರುದ್ಧ ನಾಳೆ ರಾಜ್ಯ ಕಾಂಗ್ರೆಸ್ ನಾಯಕರಿಂದ ಸೈಕಲ್ ಚಳವಳಿ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಜೂ.29ರಂದು ಸೈಕಲ್ ಚಳವಳಿ ನಡೆಸಲು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಸತತ 21ನೇ ದಿನವೂ ಏರಿಕೆ ಕಂಡ ತೈಲ ಬೆಲೆ: ಇಂದಿನ ಪೆಟ್ರೋಲ್, ಡೀಸೆಲ್ ದರ ಇಂತಿದೆ...
ಸತತ 21ನೇ ದಿನವೂ ತೈಲ ಬೆಲೆ ಏರಿಕೆ ಕಂಡಿದ್ದು, ಪ್ರತೀ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 0.25 ಪೈಸೆ ಹಾಗೂ ಪ್ರತೀ ಲೀಟರ್ ಡೀಸೆಲ್ ದರದಲ್ಲಿ 0.21 ಪೈಸೆಯಷ್ಟು ಏರಿಕೆಯಾಗಿದೆ.

ಮತ್ತೆ ಏರಿದ ತೈಲ ಬೆಲೆ: 20 ದಿನದಲ್ಲಿ ಡೀಸೆಲ್ ರೂ.10.82, ಪೆಟ್ರೋಲ್ 8.87 ನಷ್ಟು ಏರಿಕೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ನಾಗಾಲೋಟಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಸತತ 20ನೇ ದಿನ ಶುಕ್ರವಾರವೂ ತೈಲ ಬೆಲೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಡೀಸೆಲ್ ಮೇಲೆ 17 ಪೈಸೆ ಜಾಸ್ತಿಯಾಗಿದೆ.

ಸತತ 19ನೇ ದಿನವೂ ತೈಲೋತ್ಪನ್ನಗಳ ದರ ಏರಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಇಂತಿದೆ
ತೈಲೋತ್ಪನ್ನಗಳ ದರ ಸತತ 19ನೇ ದಿನವೂ ಏರಿಕೆಯಾಗಿದ್ದು, ಗುರುವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ.

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ; ಕೇಂದ್ರದ ಬೊಕ್ಕಸಕ್ಕೆ ಆದಾಯದ ಮಹಾಪೂರ!
ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ವಸೂಲಾಗುತ್ತಿರುವ ಅಬಕಾರಿ ಸುಂಕ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಅಬಕಾರಿ ಸುಂಕದಿಂದಾಗಿ 40,೦೦೦ ಕೋಟಿ ರೂ ವಸೂಲಾಗಿದೆ.

ಸತತ 18ನೇ ದಿನವೂ ಇಂಧನ ದರ ಏರಿಕೆ: ದೆಹಲಿಯಲ್ಲಿ ಪೆಟ್ರೋಲ್'ಗಿಂತಲೂ ದುಬಾರಿಯಾದ ಡೀಸೆಲ್!
ತೈಲ ದರಗಳು ಸತತ 17 ದಿನಗಳಿಂದ ಏರಿಕೆಯಾಗುತ್ತಲೇ ಇದ್ದು, ಆದರೆ, 18ನೇ ದಿನವಾದ ಬುಧವಾರದ ದಿನದಂದು ಏರಿಕೆಯಾಗಿರುವ ಬೆಲೆ ಏರಿಕೆ ಡೀಸೆಲ್ ದರದಲ್ಲಿ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿದೆ.

