people

ವೈರಸ್, ಯಾವ ವೈರಸ್? ಹಬ್ಬಗಳು ಬರುತ್ತಿದ್ದಂತೆಯೇ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡ ಜನರು!
ಕೊರೋನಾವೈರಸ್ ಪ್ರಕರಣ ಹೊಂದಿರುವ ರಾಷ್ಟ್ರಗಳ ಪೈಕಿಯಲ್ಲಿ ಭಾರತ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದೆ. ಆದರೆ, ಮಹಾರಾಷ್ಟ್ರದ ನೂಲು ಬಿಚ್ಚುವ ಕಾರ್ಖಾನೆಗಳಿಂದ ಹಿಡಿದು ಕೊಲ್ಕತ್ತಾದ ಜನದಟ್ಟಣೆಯ ಮಾರುಕಟ್ಟೆವರೆಗೂ ಕೆಲಸ ಮಾಡಲು ಜನರು ವಾಪಸ್ಸಾಗುತ್ತಿದ್ದಾರೆ. ಹಬ್ಬಗಳ ಉತ್ಸಾಹದಲ್ಲಿ ಸಾಂಕ್ರಾಮಿಕ ರೋಗವನ್ನು ಮರೆಯುತ್ತಿದ್ದಾರೆ.

ಲಾಕ್ ಡಾನ್ ಮುಗಿದು ಥಿಯೇಟರ್ ಏನೋ ಒಪನ್ ಆಯ್ತು, ಆದರೆ ಪ್ರೇಕ್ಷಕರೇ ಇಲ್ಲ!
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಭಯಬಿದ್ದು ಥಿಯೇಟರ್ ತೆರೆದರೂ ಕೂಡ ಜನರು ಸಿನೆಮಾ ಥಿಯೇಟರ್ ಗೆ ಬರುವುದಕ್ಕೆ ಇನ್ನೂ ಮನಸ್ಸು ಮಾಡುತ್ತಿಲ್ಲ, ಧೈರ್ಯ ತೋರುತ್ತಿಲ್ಲ. ಲಾಕ್ ಡೌನ್ ಮುಗಿದು ಮುಕ್ತವಾದ ನಂತರ ಸಿನೆಮಾ ಥಿಯೇಟರ್ ಮುಕ್ತವಾದ ನಂತರ ಮೊದಲ ವಾರಾಂತ್ಯದಲ್ಲಿ ಜನರಿಲ್ಲದೆ ಥಿಯೇಟರ್ ಬಣಗುಡುತ್ತಿತ್ತು.

ಪ್ಲೇಟ್ ಬಿರಿಯಾನಿಗೆ 1.5 ಕಿ.ಮೀ ಉದ್ದ ಸಾಲು: ಹೊಸಕೋಟೆಯಲ್ಲಿ ಸ್ವಾದಿಷ್ಟಕರ ಬಿರಿಯಾನಿ ಹೊಟೇಲ್!
ಕಿಲೋ ಮೀಟರ್ ಗಟ್ಟಲೆ ಉದ್ದದ ಸಾಲಿನಲ್ಲಿ ಜನರು ನಿಂತುಕೊಂಡಿರುವುದು ನೋಡಿ ಯಾವುದೋ ದೇವಸ್ಥಾನದ ಮುಂದೆ ದೇವರ ದರ್ಶನಕ್ಕೆ ನಿಂತಿದ್ದಾರೆ ಅಥವಾ ಜನರು ಯಾವುದೋ ಸರ್ಕಾರಿ ಕಚೇರಿ ಮುಂದೆ ತಮ್ಮ ಕೆಲಸಕ್ಕಾಗಿ ನಿಂತುಕೊಂಡಿದ್ದಾರೆ ಎಂದುಕೊಂಡಿರಾ?

ನಿಮಗೆ ಬರ್ತ್ ಡೇ ಗಿಫ್ಟ್ ಏನು ಬೇಕು ಎಂದು ಕೇಳಿದವರಿಗೆ ಪ್ರಧಾನಿ ಮೋದಿ ಹೇಳಿದ್ದೇನು?
ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ವೈರಸ್ ನ್ನು ಆದಷ್ಟು ತಡೆಗಟ್ಟಲು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಇದುವೇ ನನಗೆ ನೀವು ನನ್ನ ಹುಟ್ಟುಹಬ್ಬಕ್ಕೆ ನೀಡುವ ಉಡುಗೊರೆ ಎಂದು ಕೇಳಿದ್ದಾರೆ.

ಉತ್ತರಾಖಂಡ್:ಬಂಡೆ ಒಡೆಯುತ್ತಿದ್ದ ವೇಳೆ ಕಲ್ಲುಗಳು ತಾಗಿ ಇಬ್ಬರು ಸಾವು
ಬಂಡೆಗಳನ್ನು ಮದ್ದು ಗುಂಡಿನಿಂದ ಒಡೆಯುತ್ತಿದ್ದ ವೇಳೆ ಕಲ್ಲುಗಳು ತಾಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟ ಘಟನೆ ಉತ್ತರಾಖಂಡ್ ನ ಪೌರಿ ಗರ್ವಾಲ್ ಜಿಲ್ಲೆಯ ಕೌಡಿಯಾಲಾ ಸಮೀಪ ರಿಷಿಕೇಶ-ಬದ್ರಿನಾಥ ಹೆದ್ದಾರಿಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಒಂದು ವಾರ ಲಾಕ್ ಡೌನ್: ನಗರ ತೊರೆದು ಊರುಗಳತ್ತ ಗುಳೆ ಹೋಗುತ್ತಿರುವ ಜನರು!
ಮಂಗಳವಾರ ರಾತ್ರಿಯಿಂದ ಒಂದು ವಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್ ಡೌನ್ ಘೋಷಣೆಯಾದ ನಂತರ ಜನರು ಸಾಮೂಹಿಕವಾಗಿ ನಗರ ತೊರೆದು ಊರುಗಳಿಗೆ ಹೋಗುವ ದೃಶ್ಯ ಸಾಮಾನ್ಯವಾಗಿದೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ನಾವು ಸೋಲಬಾರದು: ರಾಜ್ಯದ ಜನತೆಗೆ ಸಿಎಂ ಪತ್ರ
ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ, ನನಗೆ ಈ ಬಗ್ಗೆ ಹೆಮ್ಮೆಯಿದೆ, ಮುಂದಿನ ದಿನಗಳಲ್ಲಿ ಅತ್ಯುತ್ತಮವಾದ ಸಮಯ ಬರುತ್ತದೆ.

ಕೊರೋನಾ ವಿರುದ್ಧ ಹೋರಾಟಕ್ಕೆ ಭಾರತೀಯರು ಬೆಂಬಲ ನೀಡುತ್ತಿದ್ದಾರೆ, ಲಾಕ್ ಡೌನ್ ಪ್ರಯೋಜನವಾಗಿದೆ:ಪಿಎಂ ಮೋದಿ
ವಾಷಿಂಗ್ಟನ್: ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟ ಜನರಿಂದಲೇ ಆರಂಭವಾಗಿದ್ದು ಆರಂಭದ ಹಂತದಲ್ಲಿ ಹೇರಲಾದ ಲಾಕ್ ಡೌನ್ ಜನರ ಸಹಕಾರದಿಂದ ಯಶಸ್ವಿಯಾಯಿತು, ಸೂಕ್ತ ಸಮಯಕ್ಕೆ ಲಾಕ್ ಡೌನ್ ಹೇರಿದ್ದರಿಂದ ಲಕ್ಷಾಂತರ ಜನರ ಪ್ರಾಣ ಉಳಿಯಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಜಯಪುರದಲ್ಲಿ ಭೀಮಾ ನದಿ ತೀರದ ಮೂಲಕ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಜನರ ಅಕ್ರಮ ಪ್ರವೇಶ!
ಕೊರೋನಾ ವೈರಸ್ ಸೋಂಕಿನ ಈ ಸಮಯದಲ್ಲಿ ಅಂತರಾಜ್ಯ ಚೆಕ್ ಪೋಸ್ಟ್ ಗಳನ್ನು ತಪ್ಪಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಹಲವು ನಿವಾಸಿಗಳು ಮತ್ತು ವಲಸೆ ಕಾರ್ಮಿಕರು ಪೊಲೀಸರ ಕಣ್ತಪ್ಪಿಸಿ ಬತ್ತಿಹೋಗಿರುವ ಭೀಮಾ ನದಿತೀರದ ಮೂಲಕ ಅಕ್ರಮವಾಗಿ ಗಡಿ ದಾಟುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

