patna

ಬಿಹಾರ: ನಾಗರಿಕ ಸೇವಾ ಪರೀಕ್ಷೆ ತರಬೇತಿಗೆ ಶುಲ್ಕವಾಗಿ 18 ಸಸಿ ಪಡೆಯುವ ಕೋಚಿಂಗ್ ಸೆಂಟರ್!
ವಿದ್ಯಾರ್ಥಿಗಳಿಂದ ಶುಲ್ಕವಾಗಿ ಸಸಿಯನ್ನು ಪಡೆಯುವ ಶಾಲೆಯೊಂದರ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ 'ಗ್ರೀನ್- ಪಾಠಶಾಲಾ' ಹೆಸರಿನ ಇಂತಹ ಶಾಲೆಯೊಂದನ್ನು 2008 ರಿಂದಲೂ ಯುವಕರೊಬ್ಬರು ನಡೆಸುತ್ತಿದ್ದಾರೆ.

ಜೆಡಿಯು ಮಹತ್ವದ ವಿಭಜನೆಯತ್ತ ಸಾಗಿದೆ, ಬಿಹಾರದಲ್ಲಿ ಮಧ್ಯಂತರ ಚುನಾವಣೆಯ ಸಾಧ್ಯತೆ: ಚಿರಾಗ್ ಪಾಸ್ವಾನ್
ಪ್ರಸ್ತುತ ಬಿಹಾರದಾದ್ಯಂತ ಆಶೀರ್ವಾದ್ ಯಾತ್ರೆ ನಡೆಸುತ್ತಿರುವ ಜಮುಯಿ ಎಲ್ ಜಿಪಿ ಸಂಸದ ಚಿರಾಗ್ ಪಾಸ್ವಾನ್, ಶುಕ್ರವಾರ ಜೆಡಿಯುನಲ್ಲಿ ದೊಡ್ಡ ವಿಘಟನೆ ಯಾಗಲಿದ್ದು, ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಪತನವಾಗಿ ರಾಜ್ಯದಲ್ಲಿ ಮಧ್ಯಕಾಲೀನ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಪಾಟ್ನಾ ಏಮ್ಸ್ ನಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಆರಂಭ
ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಇದೇ ಮೊದಲ ಬಾರಿಗೆ ಪಾಟ್ನಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಮಕ್ಕಳ ಮೇಲೆ ಪ್ರಯೋಗವನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ.

ಆಶ್ಚರ್ಯ! ದೇಶದಲ್ಲಿ 18-44 ವರ್ಷದೊಳಗಿನವರಿಗೆ ಹೆಚ್ಚು ಲಸಿಕೆ ಹಾಕುವಲ್ಲಿ ಬಿಹಾರ ನಂ.1 ರಾಜ್ಯ!
ದೇಶದಲ್ಲಿ 18-44 ವರ್ಷದೊಳಗಿನವರಿಗೆ ಲಸಿಕೆ ಹಾಕುವಲ್ಲಿ ಬಿಹಾರ ನಂಬರ್ ಒನ್ ರಾಜ್ಯವಾಗಿದೆ. ಈ ಗುಂಪಿನ 15,27,000 ಜನರಿಗೆ ಬಿಹಾರ ಈಗಾಗಲೇ ಲಸಿಕೆ ಹಾಕಿದೆ.

ದಾರುಣ ಘಟನೆ: ಕೋವಿಡ್ ಸೋಂಕಿತ ಪತ್ನಿಯ ಕತ್ತು ಸೀಳಿದ ರೈಲ್ವೆ ಉದ್ಯೋಗಿ, ನಂತರ ತಾನೂ ಆತ್ಮಹತ್ಯೆಗೆ ಶರಣು!
ಪೂರ್ವ ಸೆಂಟ್ರಲ್ ರೈಲ್ವೆ(ಇಸಿಆರ್) ಉದ್ಯೋಗಿಯೊಬ್ಬರು ತಮ್ಮ ಕೋವಿಡ್ ಸೋಂಕಿತ ಹೆಂಡತಿಯನ್ನು ಕೊಂದು ನಂತರ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಟ್ನಾದಲ್ಲಿ ವರದಿಯಾಗಿದೆ.

ಗಂಗಾ ನದಿಗೆ ಉರುಳಿಬಿದ್ದ ಪಿಕಪ್ ವಾಹನ: ಕನಿಷ್ಠ ಒಂಬತ್ತು ಮಂದಿ ಸಾವು
ಬಿಹಾರದಲ್ಲಿ ಪ್ರಯಾಣಿಕರ ಹೊತ್ತೊಯುತ್ತಿದ್ದ ಪಿಕಪ್ ವಾಹನ ನದಿಗೆ ಉರುಳು ಬಿದ್ದಿದ್ದು, ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬಿಹಾರ: ಸಚಿವರ ಆಸ್ಪತ್ರೆ ಭೇಟಿ ವೇಳೆ ಸಿಗದ ತುರ್ತು ಚಿಕಿತ್ಸೆ; ಕೊರೋನಾ ವಿರುದ್ಧದ ಯುದ್ಧ ಸೋತ ಮಾಜಿ ಯೋಧ
ಬಿಹಾರದಲ್ಲಿ ಆರೋಗ್ಯ ಮೂಲ ಸೌಕರ್ಯದ ಕೊರತೆಯಿಂದಾಗಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿದ್ದು, ಬಿಹಾರ ಸಚಿವರು ಆಸ್ಪತ್ರೆ ಭೇಟಿಯಲ್ಲಿರುವಾಗಲೇ ಸೋಂಕು ಪೀಡಿತ ನಿವೃತ್ತ ಯೋಧರೊಬ್ಬರು ತುರ್ತು ಚಿಕಿತ್ಸೆ ಸಿಗದೇ ಅಲ್ಲಿಯೇ ಸಾವನ್ನಪ್ಪಿದ್ದಾರೆ.

ಪಾಟ್ನಾ: ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್, ಹಲವರಿಗೆ ಗಾಯ!
ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಮುತ್ತಿಗೆ ಹಾಕಲು ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಮಾರ್ಗ ಮಧ್ಯೆ ತಡೆದಿದ್ದಾರೆ. ಈ ವೇಳೆ ರಸ್ತೆಗೆ ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಕಿತ್ತು ಮುನ್ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು ಹಲವರು ಗಾಯಗೊಂಡಿದ್ದಾರೆ.

ಉರ್ದು ಭಾಷೆಯಲ್ಲಿ ಎಐಎಂಐಎಂ ಶಾಸಕ ಪ್ರಮಾಣ ವಚನ ಸ್ವೀಕರ; 'ಹಿಂದೂಸ್ತಾನ್' ಪದ ಬದಲಿಸುವಂತೆ ಒತ್ತಾಯ!
ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಅದರ ಕರಡಿನಲ್ಲಿರುವ 'ಹಿಂದೂಸ್ತಾನ್' ಪದವನ್ನು ಸಂವಿಧಾನದಲ್ಲಿರುವಂತೆ 'ಭಾರತ್' ಎಂದು ಬದಲಾಯಿಸಬೇಕೆಂದು ಎಐಎಂಐಎಂ ಶಾಸಕರೊಬ್ಬರು, ಒತ್ತಾಯಿಸಿದ್ದರಿಂದ ಬಿಹಾರ ವಿಧಾಸಭೆಯಲ್ಲಿ ವಿವಾದವೊಂದು ತಲೆದೋರಿತು.

