patients

ಕೋವಿಡ್-19 ರೋಗಿಗಳನ್ನು ಕೀಳಾಗಿ ಕಾಣುವವರು, ಅವಮಾನಿಸುವವರಿಗೆ ಶಿಕ್ಷೆ ನೀಡಿ: ವಿರೋಧ ಪಕ್ಷಗಳ ಆಗ್ರಹ
ಕೋವಿಡ್-19 ರೋಗಿಗಳ ವಿರುದ್ಧ ನಾಗರಿಕರು ತೋರುತ್ತಿರುವ ಅಮಾನವೀಯ ವರ್ತನೆ, ಕಾನೂನು ಬಾಹಿರ ನಡವಳಿಕೆಗೆ ವಿರೋಧ ಪಕ್ಷದ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ. ಪೊಲೀಸರು, ಸರ್ಕಾರ ಮತ್ತು ಅಧಿಕಾರಿಗಳು ಇಂತಹ ಕ್ರಮಗಳು ನಡೆಯದಂತೆ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕೆಲಸ ಮಾಡುತ್ತಿದೆ 'ಅವೇಕ್ ಪ್ರೋನಿಂಗ್': ಒಂದೇ ವಾರದಲ್ಲಿ 800 ರ ಪೈಕಿ 500 ಜನರು ಗುಣಮುಖ!
ಕೋವಿಡ್-19 ನ್ನು ಎದುರಿಸಲು ಭಿನ್ನ ಭಿನ್ನ ಮಾದರಿಯ ಚಿಕಿತ್ಸೆಗಳ ಮೊರೆ ಹೋಗುತ್ತಿದೆ ವೈದ್ಯ ಲೋಕ. 2 ವಾರಗಳ ಹಿಂದಷ್ಟೇ ಸರ್ಕಾರ ಘೋಷಣೆ ಮಾಡಿದ್ದ ಅವೇಕ್ ಪ್ರೋನಿಂಗ್ ಚಿಕಿತ್ಸಾ ವಿಧಾನ ಕೋವಿಡ್-19 ನಿಂದ ಗುಣಮುಖವಾಗುವುದಕ್ಕೆ ಒಂದಷ್ಟು ಆಶಾಕಿರಣ ಮೂಡಿಸಿದೆ.

ಕೋವಿಡ್-19 ರೋಗಿಗಳಿಗೆ ಸೋರಿಯಾಸಿಸ್ ಇಂಜೆಕ್ಷನ್ ಗೆ ಅನುಮತಿ
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಸೋರಿಯಾಸಿಸ್ ಇಂಜೆಕ್ಷನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಕ ಅನುಮತಿ ನೀಡಿದೆ.

ರೆಮ್ಡೆಸಿವಿರ್ ಈಗ ಭಾರತದಲ್ಲಿ ಲಭ್ಯ: ಬೆಂಗಳೂರಿನಲ್ಲಿ ಕೋವಿಡ್-19 ರೋಗಿಗಳ ಮೇಲಿನ ಪ್ರಯೋಗ ಯಶಸ್ವಿ!
ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಯಾದ ನಂತರ ರೆಮ್ಡೆಸಿವಿರ್ ಸೋಂಕು ನಿವಾರಕ ಔಷಧಿಯನ್ನು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೆಲವು ಕೋವಿಡ್ -19 ರೋಗಿಗಳ ಮೇಲೆ ತಜ್ಞರು ಮತ್ತು ವೈದ್ಯರು ಬಳಸುತ್ತಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ ; ರೋಗಿಗಳ ಜತೆ ವಿಡಿಯೋ ಸಂವಾದ
ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ಸೌಲಭ್ಯಗಳ ವಿಷಯದಲ್ಲಿ ಲೋಪಗಳಿಗೆ ಅವಕಾಶವಿಲ್ಲದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.

ಹಾಸನ: ಉಸಿರಾಟ ತೊಂದರೆಯಿಂದ ರಾತ್ರಿ ಹೊತ್ತು ಬಂದ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಣೆ!
ಉಸಿರಾಟದ ತೊಂದರೆಯಿಂದ ತೀವ್ರ ಬಳಲುತ್ತಿದ್ದ ಕೋವಿಡ್-19 ಶಂಕಿತ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ 30 ವರ್ಷದ ಮಹಿಳೆಯನ್ನು ನಾಲ್ಕು ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸಿವೆ.

ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ: ಕೊರೋನಾ ರೋಗಿಗಳ ಕಷ್ಟ ಕೇಳುವವರಿಲ್ಲ!
ಕೊರೋನಾ ಲಾಕ್ ಡೌನ್ ಜನರಿಗೆ ತಂದೊಡ್ಡಿದ ಸಂಕಷ್ಟಗಳಲ್ಲಿ ಆರ್ಥಿಕ ಸಂಕಷ್ಟ ಮುಖ್ಯವಾದದ್ದು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೆ ರೋಗಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ, ಇನ್ಷೂರೆನ್ಸ್ ಸಿಗುತ್ತದೆ ಎಂಬ ಖಚಿತತೆ ಇದ್ದರೂ ಕೂಡ ಎಷ್ಟು ಸಿಗುತ್ತದೆ, ಎಷ್ಟು ಹಣ ತಾವು ಭರಿಸಬೇಕು ಎಂಬ ಗೊಂದಲದಲ್ಲಿ ರೋಗಿಗಳ ಮನೆಯವರಿದ್ದಾರೆ.

ಇನ್ನು ಮುಂದೆ ಕೊರೋನಾ ರೋಗಿಗಳಿಗೆ ಪರೀಕ್ಷೆ ವರದಿ ಸಿಗುವುದು ಪ್ರಯೋಗಾಲಯದಿಂದಲ್ಲ, ಬಿಬಿಎಂಪಿಯಿಂದ!
ಇನ್ನು ಮುಂದೆ ನಗರದಲ್ಲಿ ಕೊರೋನಾ ರೋಗಿಗಳ ತಪಾಸಣೆ ಬಳಿಕ ವರದಿ ನೇರವಾಗಿ ಪ್ರಯೋಗಾಲಯಗಳಿಂದ ಸಿಗುವುದಿಲ್ಲ. ಬದಲಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸಿಗಲಿದೆ.

ಚೆನ್ನೈನ ಖಾಸಗಿ ಆಸ್ಪತ್ರೆಗಳು ಕೊರೋನಾ ರೋಗಿಗಳಿಂದ ಹಣ ಸುಲಿಗೆ ಮಾಡುತ್ತಿವೆಯೇ?: ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ ಈ ನಿದರ್ಶನ!
ಇನ್ನು ಬದುಕಿಸಲು ಸಾಧ್ಯವಾಗುವುದಿಲ್ಲ ಎಂದು ಕಂಡುಬರುತ್ತಿದ್ದಂತೆ ಕೊರೋನಾ ಸೋಂಕಿತ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಉಲ್ಲೇಖಿಸುತ್ತಾರೆಯೇ?

