Patholes

ಆ್ಯಂಬುಲೆನ್ಸ್'ಗಳ ಮೇಲೆ ಹದಗೆಟ್ಟ ರಸ್ತೆಗಳ ಗಂಭೀರ ಪರಿಣಾಮ: ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ಸಂಕಷ್ಟದಲ್ಲಿ ರೋಗಿಗಳು!
ನಗರದಲ್ಲಿನ ಕಳಪೆ ರಸ್ತೆ ಮೂಲಸೌಕರ್ಯ, ನಿರಂತರ ಮಳೆ ಮತ್ತು ರಸ್ತೆ ಗುಂಡಿಗಳು ಆಂಬ್ಯುಲೆನ್ಸ್ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದರ ಪರಿಣಾಮ ನಿರ್ಣಾಯಕ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಲಾಗದೆ ರೋಗಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಬೆಂಗಳೂರು ರಸ್ತೆಗಳು ಗುಂಡಿಮಯ: ತನ್ನ ಇಂಜಿನಿಯರ್ ಗಳಿಗೆ ಪಾಠ ಹೇಳಲು ಬಿಬಿಎಂಪಿ ಮುಂದು
ನಗರದ ರಸ್ತೆಗಳು ಗುಂಡಿಮಯಗೊಂಡಿದ್ದು, ಅಧಿಕಾರಿಗಳ ಅಸಮರ್ಥತೆಗೆ ಸಾರ್ವಜನಿಕ ವಲಯದಿಂದ ಭಾರೀ ಅಸಮಾಧಾನಗಳು ವ್ಯಕ್ತವಾಗತೊಡಗಿವೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಎಂಜಿನಿಯರ್‌ಗಳಿಗೆ ರಸ್ತೆ ಮೂಲಸೌಕರ್ಯದೊಂದಿಗೆ ಗುಂಡಿಗಳನ್ನು ಹೇಗೆ ಮುಚ್ಚುವುದು ಎಂಬುದರ ಕುರಿತು ತರಬೇತಿ ನೀಡಲು ಮುಂದಾಗಿದೆ.

ಬೆಂಗಳೂರಿನ ರಸ್ತೆಗಳು ಹೊಂಡ ಗುಂಡಿಗಳಿಂದ ಮುಕ್ತವಾಗಿಲ್ಲ ಏಕೆ?: ಪ್ರಶ್ನೆಗೆ ಕಾರಣ ನೀಡಿ ಉತ್ತರಿಸಿದ ಸಿಎಂ ಬೊಮ್ಮಾಯಿ
ಈ ವರ್ಷ ಅಕಾಲಿಕ ಮಳೆಯಿಂದ ಮಹಾನಗರ ಬೆಂಗಳೂರಿನ ರಸ್ತೆಗಳು ಹೊಂಡಗುಂಡಿ ಬಿದ್ದು ರಸ್ತೆಯಲ್ಲಿ ಸವಾರಿ ಮಾಡುವ ವಾಹನ ಸವಾರರು ಸರ್ಕಾರಕ್ಕೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬೆಂಗಳೂರು: ರಸ್ತೆ ಗುಂಡಿ ಖಂಡಿಸಿ ಎಎಪಿಯಿಂದ ಹತ್ತು ದಿನಗಳ ಜನಜಾಗೃತಿ, ಸಹಿ ಸಂಗ್ರಹ ಅಭಿಯಾನ
ರಸ್ತೆ ಗುಂಡಿ ಮುಕ್ತ ಬೆಂಗಳೂರು ನಿರ್ಮಾಣದ ಗುರಿ ಹೊಂದಿರುವ ಆಮ್ ಆದ್ಮಿ ಪಕ್ಷ(ಆಪ್) ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಬಗ್ಗೆ ಸರ್ಕಾರದ ವಿರುದ್ಧ ಜನಜಾಗೃತಿ ಸಹಿ ಸಂಗ್ರಹಣಾ ಚಳುವಳಿ ಹಮ್ಮಿಕೊಂಡಿದೆ.

ಬೆಂಗಳೂರು ವಾಸ್ತವಿಕ ಸ್ಥಿತಿ ಅರಿಯಲು ನಗರ ಪ್ರವಾಸ ಕೈಗೊಳ್ಳಿ: ಸಿಎಂ ಬೊಮ್ಮಾಯಿಗೆ ಜನತೆ ಆಗ್ರಹ
ಗುಂಡಿ ಬಿದ್ದ ರಸ್ತೆಗಳು, ಕಸ ತುಂಬಿದ ರಸ್ತೆಗಳು, ವಿದ್ಯುತ್ ದೀಪಗಳಿಲ್ಲದೆ ಕತ್ತಲಲ್ಲಿ ಬಣಗುಡುತ್ತಿರುವ ರಸ್ತೆಗಳಿಂದ ಸಿಲಿಕಾನ್ ಸಿಟಿ ಜನತೆ ಬೇಸತ್ತು ಹೋಗಿದ್ದು, ನಗರದ ವಾಸ್ತವಿಕ ಸ್ಥಿತಿಯನ್ನು ಅರಿಯಲು ಪ್ರವಾಸ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆಗ್ರಹಿಸುತ್ತಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ 10 ದಿನಗಳ ಗಡುವು ನೀಡಿದ ಸಚಿವ ಆರ್ ಅಶೋಕ್!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿನ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್ ಅಶೋಕ್ 10 ದಿನಗಳ ಗಡುವು ನೀಡಿದ್ದಾರೆ.

ಬೆಂಗಳೂರು: ರಸ್ತೆಗುಂಡಿ ಅಪಘಾತದಲ್ಲಿ ಬಲಿಯಾದವರಿಗೆ ರೂ.3 ಲಕ್ಷ ಪರಿಹಾರ ನೀಡಲು ಬಿಬಿಎಂಪಿ ಮುಂದು
ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳಿಗೆ ಬಿದ್ದು ಮೃತರಾದವರ ಕುಟುಂಬಸ್ಥರಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಇನ್ನು 2 ದಿನಗಳಲ್ಲಿ ಬೆಂಗಳೂರು ಗುಂಡಿ ಮುಕ್ತ ನಗರ: ಬಿಬಿಎಂಪಿ ಆಯುಕ್ತ
ರಸ್ತೆ ಗುಂಡಿ ಮುಚ್ಚುವಲ್ಲಿ ನಿರ್ಲಕ್ಷ್ಯ ತೋರಿಸುವ ಗುತ್ತಿಗೆದಾರರಿಗೆ ನೋಟಿಸ್ ನೀಡಲು ಸೂಚನೆ ನೀಡಲಾಗಿದ್ದು, ನಗರದಲ್ಲಿ ಬಹುತೇಕ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗಿದೆ. ಕೇವಲ 742 ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹೇಳಿದ್ದಾರೆ.

ಸ್ಕೂಟರ್ ಏರಿ ನಗರದ ರಸ್ತೆಗಳ ಪರಿಶೀಲಿಸಿದ ನೂತನ ಮೇಯರ್
ದ್ವಿಚಕ್ರ ವಾನಹದಲ್ಲಿ ಅನಿರೀಕ್ಷಿತವಾಗಿ ಪಶ್ಚಿಮ ವಲಯದ ಸಂಪಿಗೆ ರಸ್ತೆ, ಶ್ರೀರಾಂಪುರ ಸೇರಿದಂದೆ ನಗರದ ವಿವಿಧ ರಸ್ತೆಗಳನ್ನು ಬಿಬಿಎಂಪಿ ನೂತನ ಮೇಯರ್ ಗೌತಮ್ ಕುಮಾರ್ ಅವರು ಭಾನುವಾರ ತಪಾಸಣೆ ನಡೆಸಿದರು.

