passengers

ವಿದೇಶಗಳಿಂದ ಪ್ರಯಾಣಿಕರು ಆಗಮನ: ದೆಹಲಿ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಆರಂಭ
ದೇಶದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಅಧಿಕಾರಿಗಳು ಕ್ರಮ ಕೈಗೊಳ್ಳುವುದು ಹೆಚ್ಚಿಸುತ್ತಿದ್ದಂತೆ ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಯಿತು.

ವಲಸೆ ವಿಭಾಗದ ಪ್ರಕ್ರಿಯೆಯಲ್ಲಿ ವಿಳಂಬ: ಕೆಐಎನಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಪ್ರಯಾಣಿಕರ ಬೇಸರ!
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಪ್ರಕ್ರಿಯೆ ದುಃಸ್ವಪ್ನದಂತೆ ಕಾಡುತ್ತಿದ್ದು, ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿರುವ ಪ್ರಯಾಣಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಕೊಳಕು ಹೊದಿಕೆ-ದಿಂಬು; ವಾಸನೆ ತಡೆಯಲಾಗದೆ ಸೂಪರ್ ಫಾಸ್ಟ್ ರೈಲಿನ ತುರ್ತು ಸರಪಳಿ ಎಳೆದ ಪ್ರಯಾಣಿಕರು!
ಚೆನ್ನೈ ಸೆಂಟ್ರಲ್- ಏಕ್ತಾ ನಗರ (ಕೆವಾಡಿಯಾ) ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ಒಂದು ಗಂಟೆಯ ನಂತರ, ಭಾನುವಾರ ಅರಕ್ಕೋಣಂ ಜಂಕ್ಷನ್‌ನಲ್ಲಿ 20 ನಿಮಿಷಗಳ ಕಾಲ ನಿಂತಿತು. ಕೊಳಕಾದ ಹೊದಿಕೆಗಳು ಮತ್ತು ದಿಂಬುಗಳ ದುರ್ವಾಸನೆಯನ್ನು ಸಹಿಸಲಾಗದೆ ಎಸಿ ಕೋಚ್‌ನಲ್ಲಿದ್ದ ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆದಿದ್ದಾರೆ.

ಹೆಚ್ಚಿನ ದರ ವಸೂಲಿ ಮಾಡಿದರೆ ಕಾನೂನು ಕ್ರಮ; ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ಕೊಟ್ಟ ಸಾರಿಗೆ ಸಚಿವ ಶ್ರೀರಾಮುಲು
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ತೆಗೆದುಕೊಂಡರೆ ಅಂಥವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಸಿದ್ದಾರೆ.

ಪಾಟ್ನಾದಿಂದ ದೆಹಲಿಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ, ತುರ್ತು ಭೂಸ್ಪರ್ಶ: ಎಲ್ಲಾ ಪ್ರಯಾಣಿಕರು ಸುರಕ್ಷಿತ
ದೆಹಲಿಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವು ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ದೋಷದಿಂದ ವಿಮಾನದೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿ ಇಳಿದಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 7 ಮಂದಿಗೆ ಕೊರೋನಾ ಪಾಸಿಟಿವ್!
ರಾಜ್ಯದಲ್ಲಿ ಐವರು ಪ್ರಯಾಣಿಕರಿಗೆ ಓಮಿಕ್ರಾನ್ ರೂಪಾಂತರಿ ವೈರಸ್ ಸೋಂಕು ದೃಢಪಟ್ಟ ಒಂದು ದಿನದ ಅಂತರದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏಳು ಮಂದಿ ಪ್ರಯಾಣಿಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಆಟೋ ಪರಿಷ್ಕೃತ ದರ ಇಂದಿನಿಂದ ಜಾರಿ, ನೂತನ ದರ ಎಷ್ಟು?
ರಾಜಧಾನಿ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ ಹೆಚ್ಚಿನ ದರ ನೀಡಲು ಸಜ್ಜಾಗಿರಿ. ನಗರದಲ್ಲಿ ಆಟೋ ಪ್ರಯಾಣ ದರ (Auto Fare) ಹೆಚ್ಚಳವಾಗುತ್ತಿದ್ದು ಪರಿಷ್ಕೃತ ದರ ಇಂದು(ಡಿಸೆಂಬರ್ 1) ಬುಧವಾರದಿಂದಲೇ ಜಾರಿಗೆ ಬರುತ್ತಿದೆ.

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬಸ್-ಟ್ರಕ್ ನಡುವೆ ಡಿಕ್ಕಿ, 7 ಮಂದಿ ದುರ್ಮರಣ
ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಬಸ್ ಹಾಗೂ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ಅಸ್ಸಾಂ ದೋಣಿ ದುರಂತ: 84 ಮಂದಿ ಪ್ರಾಣಾಪಾಯದಿಂದ ಪಾರು , ಇಬ್ಬರು ನಾಪತ್ತೆ
ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ್ದ ದೋಣಿಯಲ್ಲಿನ 84 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

