Parliament security breach

ಸಂಸತ್ ಭದ್ರತಾ ಲೋಪ: ಪೂರ್ವಾನುಮತಿ ಇಲ್ಲದೆ ನಗರದಿಂದ ಹೊರ ಹೋಗದಿರಿ; ಆರೋಪಿ ಮನೋರಂಜನ್ ಕುಟುಂಬ ಸದಸ್ಯರಿಗೆ ಅಧಿಕಾರಿಗಳ ಸೂಚನೆ
ಸಂಸತ್ತಿನ ಭದ್ರತಾ ಲೋಪ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಆರೋಪಿಗಳಾದ ಮನೋರಂಜನ್ ಮತ್ತು ಲಖನೌ ಮೂಲದ ಸಾಗರ್ ಶರ್ಮಾ ಅವರನ್ನು ಮೈಸೂರಿಗೆ ಕರೆತಂದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಸಂಸತ್ ಭದ್ರತಾ ಲೋಪ: ಪೊಲೀಸರಿಂದ ಪ್ರತಾಪ್ ಸಿಂಹ ಹೇಳಿಕೆ ದಾಖಲು ಸಾಧ್ಯತೆ
ಸಂಸತ್ ಮೇಲೆ ಹೊಗೆ ಬಾಬ್ ದಾಳಿ ನಡೆಸಿದ ಇಬ್ಬರಿಗೆ ಸಂಸತ್ ಪ್ರವೇಶದ ಪಾಸು ನೀಡಿದ್ದ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದೆಹಲಿ ಪೊಲೀಸರ ವಿಶೇಷ ಘಟಕ ಪಡೆಯುವ ಸಾಧ್ಯತೆ ಇದೆ.

ಸಂಸತ್ ಭದ್ರತಾ ಲೋಪ: ಆರೋಪಿಗಳ ಮೊಬೈಲ್ ಫೋನ್ಗಳು ರಾಜಸ್ಥಾನದಲ್ಲಿ ಪತ್ತೆ!
ಡಿಸೆಂಬರ್ 13ರಂದು ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರಿದಿದೆ. ಈ ನಡುವೆ ಆರೋಪಿಗಳ ಮೊಬೈಲ್ ಫೋನ್ಗಳು ರಾಜಸ್ಥಾನದಲ್ಲಿ ಪತ್ತೆಯಾಗಿವೆ.

ಸಂಸತ್ ಭದ್ರತೆ ಉಲ್ಲಂಘನೆ ಹಿಂದೆ ನಿರುದ್ಯೋಗ, ಬೆಲೆ ಏರಿಕೆ ಕಾರಣ: ರಾಹುಲ್ ಗಾಂಧಿ
ಸಂಸತ್ ಭವನದ ಭದ್ರತೆ ಉಲ್ಲಂಘನೆ ಘಟನೆಗೆ ನಿರುದ್ಯೋಗ, ಬೆಲೆ ಏರಿಕೆ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಸಂಸತ್ ಭದ್ರತಾ ಲೋಪ: ಚುರುಕುಗೊಂಡ ತನಿಖೆ, ಸಂಸತ್ತಿನೆದುರು ಬೆಂಕಿ ಹಚ್ಚಿಕೊಳ್ಳಲು ಯೋಜನೆ ರೂಪಿಸಿದ್ದ ಆರೋಪಿ!
ಸಂಸತ್ ಭವನದಲ್ಲಿ ಕಿಡಿಗೇಡಿಗಳು ಹೊಗೆ ಬಣ್ಣಮಿಶ್ರಿತ ಹೊಗೆ ದಾಳಿ ನಡೆಸಿದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಈ ಪ್ರಕರಣದ ಅಡಿಯಲ್ಲಿ ಈಗಾಗಲೇ ಒಟ್ಟು 5 ಮಂದಿ ಆರೋಪಿಗಳನ್ನು ದೆಹಲಿ ಪೊಲೀಸ್ ವಿಶೇಷ ತನಿಖಾ ತಂಡ ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದೆ.

ಸಂಸತ್ ನಲ್ಲಿ ಭದ್ರತಾ ಲೋಪ: ದೇಶದಲ್ಲಿ ನಿರ್ಮಾಣವಾಗುತ್ತಿರುವ ನಿರೂಪಣೆಗಳ ಬಗ್ಗೆ ಎಚ್ಚರದಿಂದಿರಬೇಕು- ಪ್ರಕಾಶ್ ರೈ
ದೇಶದ ವಿವಿಧ ನಿರೂಪಣೆಗಳು ಜನರ ಚಿಂತನೆಯ ಮೇಲೆ ಪ್ರಭಾವ ಬೀರುತ್ತವೆ. ಅವುಗಳ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ನಟ-ನಿರ್ಮಾಪಕ ಪ್ರಕಾಶ್ ರೈ ಹೇಳಿದ್ದಾರೆ.

ಸಂಸತ್ ನಲ್ಲಿ ಭದ್ರತಾ ಲೋಪ: ಆರೋಪಿ ಮನೋರಂಜನ್ ಪ್ರತಾಪ್ ಸಿಂಹ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ- ಎಂ. ಲಕ್ಷ್ಮಣ್
ಸಂಸತ್ ಭವನಕ್ಕೆ ನುಗ್ಗಿದ್ದ ಆರೋಪಿ ಮನೋರಂಜನ್ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಸಂಸತ್ತು ಭದ್ರತೆ ಲೋಪ: ಆರೋಪಿ ಮನೋರಂಜನ್ ಮೈಸೂರು ನಿವಾಸಕ್ಕೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಭೇಟಿ, ತಪಾಸಣೆ
ಲೋಕಸಭೆಯಲ್ಲಿ ಭದ್ರತಾ ಲೋಪ ಪ್ರಕರಣದ ಆರೋಪಿ ಯುವಕ ಮನೋರಂಜನ್ ನ ಮೈಸೂರಿನ ವಿಜಯನಗರದಲ್ಲಿರುವ ಮನೆಗೆ ಕೇಂದ್ರ ಗುಪ್ತಚರ ಮತ್ತು ಆಂತರಿಕ ಭದ್ರತೆ ಅಧಿಕಾರಿಗಳ ತಂಡ ನಿನ್ನೆ ಗುರುವಾರ ಭೇಟಿ ನೀಡಿದೆ ತಪಾಸಣೆ ನಡೆಸಿದೆ.

ಸಂಸದ ಪ್ರತಾಪ್ ಸಿಂಹ ವಿರುದ್ಧ ಕೊಡಗು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ; ರಾಜೀನಾಮೆಗೆ ಆಗ್ರಹ
ಸಂಸತ್ತಿನಲ್ಲಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ ಸಿಂಹ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕೊಡಗು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.

