Parameshwar

BJP ಅವಧಿಯಲ್ಲೇ ರೈತರಿಗೆ ಹೆಚ್ಚು ನೋಟಿಸ್: ಗೃಹ ಸಚಿವ ಡಾ. ಜಿ.ಪರಮೇಶ್ವರ್
ಸತ್ಯವನ್ನು ಯಾವತ್ತೂ ಹೆಚ್ಚು ದಿನ ಮುಚ್ಚಿಡಲು ಆಗುವುದಿಲ್ಲ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಇವಿಎಂ ಹ್ಯಾಕ್ ಆಗಿರುವ ಸಾಧ್ಯತೆಗಳಿವೆ: ಸಚಿವ ಪರಮೇಶ್ವರ್
ಕೆಲವು ಬಿಜೆಪಿ ನಾಯಕರೂ ಕೂಡ ಇವಿಎಂಗಳನ್ನು ವಿರೋಧಿಸುತ್ತಿದ್ದಾರೆ, ರಾಜ್ಯದಾದ್ಯಂತ ಇವಿಎಂ ಹ್ಯಾಕ್ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ, ಕೆಲವೆಡೆ ಹ್ಯಾಕ್ ಆಗುವ ಸಾಧ್ಯತೆಗಳಿವೆ.

ಪೊಲೀಸರ ಮೇಲೆ ದಾಳಿ ನಡೆಸಿದ್ದರಿಂದ ವಿಕ್ರಮ್ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು: ಸಚಿವ ಪರಮೇಶ್ವರ್
ಕಳೆದ 20 ವರ್ಷಗಳಿಂದ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ, ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈ ಹಿಂದೆ ನಡೆದ ಅನೇಕ ಎನ್ಕೌಂಟರ್ಗಳಲ್ಲಿ ವಿಕ್ರಮ್ ಗೌಡ ತಪ್ಪಿಸಿಕೊಂಡಿದ್ದ. ನಿನ್ನೆ ಸಂಜೆ ವಿಕ್ರಮ್ ಗೌಡ ಎನ್‌ಕೌಂಟರ್ ಆಗಿದೆ.

ಅಗತ್ಯಬಿದ್ದರೆ BJP ಆಮಿಷಗಳ ಬಗ್ಗೆ ತನಿಖೆಗೆ ಆದೇಶ: ಗೃಹ ಸಚಿವ ಡಾ. ಜಿ.ಪರಮೇಶ್ವರ್
ತನಿಖೆ ಎಂಬುದು ಮಕ್ಕಳ ಆಟವಲ್ಲ, ಆಮಿಷ ವಿಚಾರ ಕುರಿತು ಅಗತ್ಯಬಿದ್ದರೆ ತನಿಖೆಗೆ ಆದೇಶಿಸಲು ಸರ್ಕಾರ ಸಿದ್ಧವಿದೆ, ಅಂತಹ ಸಂದರ್ಭ ಬಂದರೆ ತನಿಖೆಗೆ ಆದೇಶಿಸುತ್ತೇವೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ: ಗೃಹ ಸಚಿವ ಪರಮೇಶ್ವರ ನೇತೃತ್ವದಲ್ಲಿ ಅಕ್ಟೋಬರ್ 21ರಂದು ಸಭೆ
ಪರಮೇಶ್ವರ್ ಅವರು ದಲಿತ ಮುಖಂಡರಾಗಿದ್ದು, ಅಕ್ಟೋಬರ್ 21 ರಂದು ವಿಧಾನಸೌಧದಲ್ಲಿ ಎಸ್‌ಸಿ ಸಮುದಾಯದ ಶಾಸಕರ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಾಫಿ ಹೀರುತ್ತಾ ಸಿಎಂ ಬಗ್ಗೆ ಚರ್ಚೆ ಮಾಡಿದರೆ ತಪ್ಪೇನು?: ಡಾ. ಜಿ.ಪರಮೇಶ್ವರ್
ನಾವು ಮಾತನಾಡುವುದರಿಂದ ಏನು ಆಗುವುದಿಲ್ಲ. ನಿರ್ಧಾರ ಎಲ್ಲ ಹೈಕಮಾಂಡ್ ಮಾಡುತ್ತದೆ. ಅಂತಹ ಸನ್ನಿವೇಶ ಈಗ ಬಂದಿಲ್ಲ. ಸನ್ನಿವೇಶ ಬಂದಾಗ ಚರ್ಚೆ ಮಾಡೋಣ.

ವಿಪಕ್ಷ ನಾಯಕ ಆರ್ ಅಶೋಕ್ ಅವರ ಭೂ ವಂಚನೆ ಹಗರಣ ಬಿಚ್ಚಿಟ್ಟ ಗೃಹ ಸಚಿವ ಜಿ.ಪರಮೇಶ್ವರ್
ಅಶೋಕ್ ಅವರು ಲೊಟ್ಟೆ ಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ಭೂ ಹಗರಣ ಮಾಡಿದ್ದು ನೆನಪಿಲ್ಲವೇ ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದರು.

ಸಿದ್ದರಾಮಯ್ಯಗೆ MUDA ಉರುಳು ಮತ್ತಷ್ಟು ಬಿಗಿ: ಡಿಕೆಶಿ-ಪರಮೇಶ್ವರ್ ಭೇಟಿ; ಕುತೂಹಲ ಮೂಡಿಸಿದ CM ಸ್ಥಾನದ ಆಕಾಂಕ್ಷಿಗಳ ಮಾತುಕತೆ
ಖುದ್ದು ಡಿ.ಕೆ.ಶಿವಕುಮಾರ್‌ರವರೇ ಪರಮೇಶ್ವರ್ ಅವರ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದು, ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಸಿಎಂ ರಾಜೀನಾಮೆಗೆ ಪಕ್ಷದೊಳಗೆ ಯಾವುದೇ ಒತ್ತಡವಿಲ್ಲ: ಸಚಿವ ಪರಮೇಶ್ವರ್
ಕೆಸಿ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರೆಲ್ಲ ಸಿಎಂ ಜೊತೆಗಿದ್ದಾರೆ ಮುಡಾ ಹಗರಣದಲ್ಲಿ ಸಿಎಂ ಪಾತ್ರವಿಲ್ಲ. ಕಾನೂನು ಹೋರಾಟಕ್ಕೆ ಅವಕಾಶವಿರುವುದರಿಂದ ರಾಜೀನಾಮೆ ನೀಡುವ ಅಗತ್ಯವಿಲ್ಲ.

