panaji

Goa Kidnapping: ಗೋವಾದಲ್ಲಿ ಕಿಡ್ನಾಪ್ ಹೈಡ್ರಾಮಾ; ಹೈದರಾಬಾದ್ ಮೂಲದ ಇಬ್ಬರ ರಕ್ಷಣೆ, 11 ಮಂದಿ ಪೊಲೀಸ್ ವಶಕ್ಕೆ
ಗೋವಾದಲ್ಲಿ ಕಿಡ್ನಾಪ್ ಹೈಡ್ರಾಮಾವೊಂದು ಬೆಳಕಿಗೆ ಬಂದಿದ್ದು, ಹೈದರಾಬಾದ್‌ನ ಇಬ್ಬರು ವ್ಯಕ್ತಿಗಳನ್ನು ಸುಲಿಗೆಗಾಗಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ 11 ಮಂದಿ ಆರೋಪಿಗಳನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

240 ಪ್ರಯಾಣಿಕರಿದ್ದ ಮಾಸ್ಕೋ-ಗೋವಾ ವಿಮಾನಕ್ಕೆ ಬಾಂಬ್ ಬೆದರಿಕೆ!
ರಷ್ಯಾದ ರಾಜಧಾನಿ ಮಾಸ್ಕೋದಿಂದ 240 ಪ್ರಯಾಣಿಕರ ಹೊತ್ತು ಗೋವಾಗೆ ಹೊರಟಿದ್ದ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಗೋವಾ ಬಿಜೆಪಿ ಶಾಸಕರಲ್ಲಿ ಭಿನ್ನಮತದ ವರದಿ: ಸಿ.ಟಿ. ರವಿ ಹೇಳಿದಿಷ್ಟು
ಗೋವಾ ಸಂಪುಟ ಹಾಗೂ ಸರ್ಕಾರದಲ್ಲಿ ಯಾವುದೇ ಸ್ಥಾನ ನೀಡದಿರುವುದರಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ 8 ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳನ್ನು ಪಕ್ಷದ ಉಸ್ತುವಾರಿ ಸಿ. ಟಿ. ರವಿ ಅಲ್ಲಗಳೆದಿದ್ದಾರೆ.

ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಕ್ಷಮೆಯಾಚಿಸುವವರೆಗೂ ಪ್ರತಿಭಟನೆ- ಹಿಂದೂ ಜನ ಜಾಗೃತಿ ಸಮಿತಿ
ಹಿಂದೂಪರ ಸಂಘಟನೆಗಳ ಪ್ರತಿಭಟನೆಯಿಂದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಶೋ ಬೆಂಗಳೂರಿನಲ್ಲಿ ರದ್ದು ಆದ ನಂತರ, ಅಮೆರಿಕದಲ್ಲಿ ಆತ ನೀಡಿದ ಭಾರತ ವಿರೋಧಿ ಹೇಳಿಕೆಗೆ ಕ್ಷಮೆಯಾಚಿಸುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜನ ಜಾಗೃತಿ ಸಮಿತಿ ಶನಿವಾರ ಹೇಳಿದೆ.

ಖಾಸಗಿ ವಲಯದಲ್ಲಿ ಕನಿಷ್ಠ ಒಂದು ವರ್ಷ ಅನುಭವವಿಲ್ಲದವರಿಗೆ ಸರ್ಕಾರಿ ಕೆಲಸವಿಲ್ಲ: ಗೋವಾ ಸಿಎಂ ಪ್ರಮೋದ್ ಸಾವಂತ್
ನುರಿತ ಮತ್ತು ಪ್ರತಿಭಾವಂತ ಉದ್ಯೋಗಿಗಳನ್ನು ಪಡೆಯುವ ಪ್ರಯತ್ನದಲ್ಲಿ, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಖಾಸಗಿ ವಲಯದಲ್ಲಿ ಕನಿಷ್ಠ ಒಂದು ವರ್ಷದ ಅನುಭವವನ್ನು ಕಡ್ಡಾಯಗೊಳಿಸಲು ಗೋವಾ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಂಗಳವಾರ ಹೇಳಿದ್ದಾರೆ.

ಸೋನಾಲಿ ಫೋಗಟ್ ಸಾವು: 'ಕರ್ಲೀಸ್' ರೆಸ್ಟೋರೆಂಟ್ ನೆಲಸಮ ಪ್ರಕ್ರಿಯೆಗೆ 'ಸುಪ್ರೀಂ' ತಡೆ
ಹರ್ಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ನಂತರ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗೋವಾದ 'ಕರ್ಲೀಸ್' ರೆಸ್ಟೋರೆಂಟ್ ನ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ಸೋನಾಲಿ ಫೋಗಟ್‌ಗೆ ನಿಷೇಧಿತ ಮೆಥಾಂಫೆಟಮೈನ್ ಡ್ರಗ್ಸ್ ನೀಡಿದ್ದ ಆರೋಪಿಗಳು: ಗೋವಾ ಪೊಲೀಸರು
ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೀಡಾಗುವ ಕೆಲವೇ ಗಂಟೆಗಳ ಮೊದಲು ಉತ್ತರ ಗೋವಾದ ರೆಸ್ಟೋರೆಂಟ್‌ನಲ್ಲಿ ಆರೋಪಿಗಳು ಆಕೆಗೆ ಮೆಥಾಂಫೆಟಮೈನ್ ಡ್ರಗ್ಸ್ ನೀಡಿದ್ದರು ಎಂದು ಗೋವಾ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸೋನಾಲಿ ಫೋಗಟ್ ಸಾವು: ಮರಣೋತ್ತರ ಪರೀಕ್ಷೆಯ ಸಂಪೂರ್ಣ ವಿಡಿಯೋ ಚಿತ್ರೀಕರಣಕ್ಕೆ ಕುಟುಂಬಸ್ಥರ ಷರತ್ತು!
ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಗೋವಾದಲ್ಲಿ ನಿಧನರಾದ ಎರಡು ದಿನಗಳ ನಂತರ, ಮರಣೋತ್ತರ ಪರೀಕ್ಷೆ ಅಥವಾ ವಿಧಿ ವಿಜ್ಞಾನ ಪರೀಕ್ಷೆಗೆ ಒಪ್ಪಿಗೆ ನೀಡಲು ಒಪ್ಪಿದ್ದೇವೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ, ಆದರೆ ಮರಣೋತ್ತರ ಪರೀಕ್ಷೆಯ ಕಾರ್ಯವಿಧಾನವನ್ನು ವೀಡಿಯೊ ಚಿತ್ರೀಕರಣ ಮಾಡಬೇಕೆಂಬ ಷರತ್ತು ಹಾಕಿದ್ದಾರೆ.

ಗೋವಾ ರಾಜಕೀಯ ಬಿಕ್ಕಟ್ಟು ಉಲ್ಬಣ: ಡೆಪ್ಯುಟಿ ಸ್ಪೀಕರ್ ಚುನಾವಣೆ ಘೋಷಣೆ ಹಿಂದಕ್ಕೆ!
ಗೋವಾ ರಾಜಕೀಯ ಬಿಕ್ಕಟ್ಟು ಉಲ್ಬಣವಾಗಿದ್ದು, ಆಪರೇಷನ್ ಕಮಲ ಭೀತಿಯ ಬೆನ್ನಲ್ಲೇ ಇತ್ತ ಉಪಸಭಾಪತಿ ಹುದ್ದೆಯ ಚುನಾವಣೆಯ ಅಧಿಸೂಚನೆಯನ್ನು ರದ್ದುಗೊಳಿಸಲಾಗಿದೆ.

