OTT Release

ನಾಗಭೂಷಣ್, ಅಮೃತಾ ಪ್ರೇಮ್ ನಟನೆಯ ಟಗರು ಪಲ್ಯ ಒಟಿಟಿಯಲ್ಲಿ ಬಿಡುಗಡೆ
ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ಹೊತ್ತಿದ್ದ ಉಮೇಶ್ ಕೆ ಕೃಪಾ ಅವರ ಟಗರು ಪಲ್ಯ ಸಿನಿಮಾ ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ನಟ ನಾಗಭೂಷಣ್ ಮತ್ತು ನಟ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿಜಯ್-ತ್ರಿಶಾ ಅಭಿನಯದ 'ಲಿಯೋ' ಒಟಿಟಿ ಬಿಡುಗಡೆ ದಿನಾಂಕ ಬದಲು; ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್!
ನಟ ವಿಜಯ್ ಅಭಿನಯದ ತಮಿಳು ಆ್ಯಕ್ಷನ್ ಥ್ರಿಲ್ಲರ್ 'ಲಿಯೋ' ಸಿನಿಮಾ ನವೆಂಬರ್ 24ರಂದು ಭಾರತದಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲಿದ್ದು, ನಂತರ ನವೆಂಬರ್ 28ರಿಂದ ವಿದೇಶದಲ್ಲಿರುವ ನೆಟ್‌ಫ್ಲಿಕ್ಸ್ ಚಂದಾದಾರರಿಗೆ ಲಭ್ಯವಿರಲಿದೆ.

ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ನಟನೆಯ 'ಬಾನದಾರಿಯಲ್ಲಿ' ಒಟಿಟಿಯಲ್ಲಿ ಬಿಡುಗಡೆ
ಸೆಪ್ಟೆಂಬರ್ 15 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಬಾನದರಿಯಲ್ಲಿ' ಸಿನಿಮಾ ಇದೀಗ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಸಿನಿಮಾ ಸಿನಿಪ್ರಿಯರಿಂದ ಸಕಾರಾತ್ಮಕ ಮೆಚ್ಚುಗೆಗೆ ಪಾತ್ರವಾಯಿತು.

ದಳಪತಿ ವಿಜಯ್ ನಟನೆಯ 'ಲಿಯೋ' ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್: ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್
ದಳಪತಿ ವಿಜಯ್ ನಟನೆಯ 'ಲಿಯೋ: ಬ್ಲಡಿ ಸ್ವೀಟ್' ಗಲ್ಲಾಪೆಟ್ಟಿಗೆಯನ್ನು ಯಶಸ್ಸು ಕಂಡಿದೆ. ಚಿತ್ರ ಬಿಡುಗಡೆಯಾದ ಒಂದು ವಾರದೊಳಗೆ ಹಲವಾರು ದಾಖಲೆಗಳನ್ನು ಮುರಿದಿದೆ ಮತ್ತು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರವು ಇನ್ನೂ ಥಿಯೇಟರ್‌ಗಳಲ್ಲಿ ಓಡುತ್ತಿದ್ದರೂ ಸಹ, 'ಲಿಯೋ' ನ ಒಟಿಟಿ ಬಿಡುಗಡೆ ಬಗ್ಗೆ ತಿಳಿಯಲು ಅಭಿಮಾನಿಗಳು ಉತ್ಸುಕರಾಗಿದ್

ಸಪ್ತ ಸಾಗರದಾಚೆ ಎಲ್ಲೋ-ಸೈಡ್ ಎ ಚಿತ್ರಕ್ಕೆ ಒಟಿಟಿಯಲ್ಲಿ ಭಾರಿ ಪ್ರತಿಕ್ರಿಯೆ, ಸಂತಸದಲ್ಲಿ ಚಿತ್ರತಂಡ
ಹೇಮಂತ್ ಎಂ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೈಡ್ ಎ ಮತ್ತು ಸೈಡ್ ಬಿ ಆಗಿ ತಯಾರಾಗಿದೆ. ಈಮಧ್ಯೆ, ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಸೆಪ್ಟೆಂಬರ್ 29ರಂದು ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಿದ್ದು, ಭಾರಿ ಹಿಟ್ ಆಗಿದೆ.

ಡಾರ್ಲಿಂಗ್ ಕೃಷ್ಣ ಅಭಿನಯದ 'ಕೌಸಲ್ಯಾ ಸುಪ್ರಜಾ ರಾಮ' ಒಟಿಟಿಯಲ್ಲಿ ಬಿಡುಗಡೆ!
ಶಶಾಂಕ್ ಬರೆದು ನಿರ್ದೇಶಿಸಿದ ಇತ್ತೀಚಿನ ಕನ್ನಡ ಚಲನಚಿತ್ರ ಕೌಸಲ್ಯ ಸುಪ್ರಜಾ ರಾಮ ಇದೀಗ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಗಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ನಾಗಭೂಷಣ್ ಮತ್ತು ಬೃಂದಾ ಆಚಾರ್ಯ ನಟಿಸಿದ್ದಾರೆ.

ವಿಜಯ ದೇವರಕೊಂಡ-ಸಮಂತಾ ಅಭಿನಯದ 'ಖುಷಿ' ಸಿನಿಮಾ ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್!
ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅಭಿನಯದ ಖುಷಿ ಸಿನಿಮಾ ಸೆಪ್ಟೆಂಬರ್ 1 ರಂದು ತೆರೆಕಂಡಿತು. ದೇವರಕೊಂಡ ಮತ್ತು ಸಮಂತಾ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿಯೂ ಕಮಾಲ್ ಮಾಡಿತು. ಇದೀಗ, ಚಿತ್ರತಂಡ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಒಟಿಟಿ ಎಂಟ್ರಿಗೆ ದಿನಾಂಕ ಫಿಕ್ಸ್!
ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜುಲೈ 21ರಂದು ಬಿಡುಗಡೆಯಾಯಿತು ಮತ್ತು ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದ ಚಿತ್ರವು ಇದೀಗ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ಪಿಆರ್ಕೆ ಪ್ರೊಡಕ್ಷನ್ಸ್ ನಿರ್ಮಾಣದ ಆಚಾರ್ & ಕೋ. ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ
ಆಚಾರ್ & ಕೋ. ಕನ್ನಡ ಸಿನಿಮಾ ಆಗಸ್ಟ್ 22ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಪ್ರೈಮ್ ವಿಡಿಯೋ ಈ ಸುದ್ದಿಯನ್ನು ಸೋಮವಾರವೇ ಪ್ರಕಟಿಸಿತ್ತು. ಸಿಂಧು ಶ್ರೀನಿವಾಸ ಮೂರ್ತಿ ಅವರು ಬರೆದು ನಿರ್ದೇಶಿಸಿದ್ದು, ಕಾನನ್ ಗಿಲ್ ಸಹ-ಕಥೆ ಬರೆದಿದ್ದಾರೆ.

