opposition

ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ವಿವಾದ: ವಿರೋಧ ಹಿನ್ನೆಲೆ ಉದ್ಘಾಟನೆ ಕಾರ್ಯಕ್ರಮ ಮುಂದೂಡಿಕೆ
ಯಲಹಂಕ ಡೈರಿ ವೃತ್ತದ ನೂತನ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಮಾಡುವುದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಿದೆ.

ಸೋನಿಯಾ ವಿರುದ್ಧದ ಎಫ್ ಐಆರ್ ರದ್ದುಗೊಳಿಸಲು ಸಿಎಂ ಸಹಮತ: ಬಿಎಸ್ ವೈ ವಿರುದ್ಧ ಬಿಜೆಪಿ ಕೊತಕೊತ!
ಕೊರೋನಾ ವಿರುದ್ಧ ಹೋರಾಟ ನಡೆಸಲು ಮುಖ್ಯಮಂತ್ರಿ ಸರ್ವ ಪಕ್ಷ ಕರೆದು ಸಮಾಲೋಚಿಸಿದರು ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧದ ಎಫ್ ಐ ಆರ್ ಕೈ ಬಿಡುವುದಾಗಿ ನೀಡಿದ ಹೇಳಿಕೆ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿತ್ತು, ಆದರೆ ಸಿಎಂ ನಡೆಗೆ ಪಕ್ಷದೊಳಗೆ ಅಸಮಾಧಾನ ಮೂಡಿಸಿದೆ.

ಕೇಂದ್ರದಿಂದ ರೂ.50,000 ಕೋಟಿ ವಿಶೇಷ ಪ್ಯಾಕೇಜ್ ಕೇಳಿ: ಸರ್ಕಾರಕ್ಕೆ ಪ್ರತಿಪಕ್ಷಗಳ ನಿಯೋಗ ಆಗ್ರಹ
ಲಾಕ್''ಡೌನ್'ನಿಂದಾಗಿ ಜನತೆಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ರಾಜ್ಯಕ್ಕೆ ರೂ.50 ಸಾವಿರ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಾಯಿಸಬೇಕು ಮತ್ತು ಕೊರೋನಾ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಯ ಖರ್ಚು ವೆಚ್ಚದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ಕೊರೊನವೈರಸ್: ತ್ರಿಪುರಾದಲ್ಲಿ ನಿಷೇಧಾಜ್ಞೆ ರದ್ದುಪಡಿಸುವಂತೆ ಪ್ರತಿಪಕ್ಷಗಳ ಒತ್ತಾಯ
ಕೊರೊನವೈರಸ್ ಸೋಂಕು ಹರಡುವಿಕೆ ತಡೆಯಲು ಐವರು ಮತ್ತು ಹೆಚ್ಚಿನ ಜನ ಗುಂಪುಗೂಡುವುದನ್ನು ನಿರ್ಬಂಧಿಸಿ ಸೆಕ್ಷನ್ 144ರಡಿ ಮಾರ್ಚ್ 16 ರಾತ್ರಿ ತ್ರಿಪುರದಾದ್ಯಂತ ವಿಧಿಸಲಾಗಿರು ನಿಷೇಧಾಜ್ಞೆಯನ್ನು ವಾಪಸ್ ಪಡೆಯುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ

ವಿರೋಧ ಪಕ್ಷದ ನಾಯಕರುಗಳಿಗೆ ಸಿಎಂ ಯಡಿಯೂರಪ್ಪ ಗಣಿತ ಪಾಠ!
ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುವಾಗ, ರಾಜಕೀಯ ಮಾತನಾಡುವುದು ನನಗೆ ಇಷ್ಟವಿಲ್ಲ. ಆದರೆ, ವಿರೋಧಪಕ್ಷದವರು ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡಿದ್ದಾರೆ. ಅದಕ್ಕೆ ಉತ್ತರ ಕೊಡಲೇಬೇಕು ಎಂದು ಹೇಳಿದ್ದಾರೆ.

ಜೂಜು ಕೇಂದ್ರ ಕ್ಯಾಸಿನೋ ತೆರೆದರೆ ರಾಜ್ಯದ ಜನತೆಗೇನು ಲಾಭ: ಡಿ.ಕೆ. ಶಿವಕುಮಾರ್
ಅಮೆರಿಕ ಹಾಗೂ ಶ್ರೀಲಂಕಾ ಮಾದರಿಯಲ್ಲಿ ರಾಜ್ಯದಲ್ಲೂ ಕ್ಯಾಸಿನೋ (ಜೂಜು ಕೇಂದ್ರ) ತೆರೆದರೆ ರಾಜ್ಯದ ಜನರಿಗೆ ಏನು ಲಾಭ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ವಿಧಾನಸಭೆಯಲ್ಲಿ ಮಂಗಳೂರು ಗೋಲಿಬಾರ್ ಪ್ರತಿಧ್ವನಿ: ಗದ್ದಲ, ಆಡಳಿತ-ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ
ಮಂಗಳೂರು ಗೋಲಿಬಾರ್ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಭಾರೀ ಕೋಲಾಹಲ, ಗದ್ದಲ ಉಂಟಾಗಿ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು.

ಕಾಂಗ್ರೆಸ್ ಸಂಸದ ಯಾರ ಮೇಲೂ ಹಲ್ಲೆ ನಡೆಸಲಿಲ್ಲ, ನಮ್ಮ ಸಂಸದರ ಮೇಲೆಯೇ ಹಲ್ಲೆ ನಡೆದಿದೆ: ರಾಹುಲ್ ಸ್ಪಷ್ಟನೆ
ಲೋಕಸಭಾ ಸದನದ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಮೇಲೆ ಕಾಂಗ್ರೆಸ್ ಸಂಸದ ಮಣಿಕ್ಕಮ್ ಟಾಗೋರ್ ಹಲ್ಲೆ ನಡೆಸಿದ್ದಾರೆ ಎಂಬ ಕೇಂದ್ರ ಸರ್ಕಾರದ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲಗೆಳೆದಿದ್ದಾರೆ.

ಗುಂಡು ಹಾರಿಸುವುದನ್ನು ನಿಲ್ಲಿಸಿ: ಸಿಎಎ ವಿರುದ್ಧ ಲೋಕಸಭೆಯಲ್ಲಿ ದನಿ ಎತ್ತಿದ ವಿರೋಧ ಪಕ್ಷಗಳು
ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ದನಿ ಎತ್ತಿದ್ದು, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವುದನ್ನು ನಿಲ್ಲಿಸಿ ಎಂದು ಘೋಷಣೆ ಕೂಗುತ್ತಿದ್ದಾರೆ.

