Opposition parties

ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದೀನ್, ಪಿಎಫ್ಐಗಳಲ್ಲೂ 'ಇಂಡಿಯಾ' ಇದೆ: ಪ್ರಧಾನಿ ಮೋದಿ ಟೀಕೆ
ಪ್ರತಿಪಕ್ಷಗಳು ದಿಕ್ಕುತೋಚದಂತಹ ಪರಿಸ್ಥಿತಿಗೆ ತಲುಪಿವೆ. ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಎಂದರೆ "ಇಂಡಿಯನ್ ಮುಜಾಹಿದ್ದೀನ್" ಮತ್ತು "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ" ಎಂದು ಕೂಡ ಆಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಅವಿಶ್ವಾಸ ನಿರ್ಣಯದ ವೇಳೆ ವಿಪಕ್ಷಗಳ ಸದಸ್ಯರು ಸದನದಿಂದ ದೂರ ಓಡಿಹೋದರು: ಪ್ರಧಾನಿ ನರೇಂದ್ರ ಮೋದಿ
ಅವಿಶ್ವಾಸ ನಿರ್ಣಯದ ವೇಳೆ ಸಂಸತ್ತಿನಿಂದ ಹೊರನಡೆದಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ಶನಿವಾರ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ ಹರಡುತ್ತಿರುವ ನಕಾರಾತ್ಮಕತೆಯನ್ನು ತಮ್ಮ ಸರ್ಕಾರ ಸೋಲಿಸಿದೆ ಎಂದು ಹೇಳಿದರು.

ಪ್ರತಿಪಕ್ಷಗಳು ತಾವು ಒಳ್ಳೆಯ ಕೆಲಸ ಮಾಡುವುದಿಲ್ಲ, ಬೇರೆಯವರನ್ನು ಮಾಡಲು ಬಿಡುವುದೂ ಇಲ್ಲ,ನಕಾರಾತ್ಮಕ ರಾಜಕಾರಣ ಮಾಡುತ್ತಿವೆ: ಪ್ರಧಾನಿ ಮೋದಿ ವಾಗ್ದಾಳಿ
ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಹೊಸದಾಗಿ ರೂಪುಗೊಂಡ ವಿರೋಧ ಪಕ್ಷವಾದ 'ಇಂಡಿಯಾ' ವಿರುದ್ಧ ಮತ್ತೊಮ್ಮೆ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ "ಕ್ವಿಟ್ ಇಂಡಿಯಾ ಚಳವಳಿಯು ಸ್ವಾತಂತ್ರ್ಯವನ್ನು ಪಡೆಯುವತ್ತ ಭಾರತದ ಮೆಟ್ಟಿಲುಗಳಲ್ಲಿ ಹೊಸ ಶಕ್ತಿಯನ್ನು ತುಂಬಿದೆ.

ಇಂಡಿಯಾ ಮೈತ್ರಿಕೂಟ: ಮುಂಬೈಯಲ್ಲಿ ಆ.31-ಸೆ.1ಕ್ಕೆ ಮುಂದಿನ ಸಭೆ
ಕಳೆದ ತಿಂಗಳು ವಿಪಕ್ಷಗಳ ಒಕ್ಕೂಟ ಸಭೆ ಬೆಂಗಳೂರಿನಲ್ಲಿ ನಡೆದು ಇಂಡಿಯಾ ಎಂದು ಹೆಸರನ್ನಿಡಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ಸಮರ್ಥವಾಗಿ ಎದುರಿಸುವುದು ಈ ಒಕ್ಕೂಟದ ಉದ್ದೇಶ ಮತ್ತು ಆಶಯವಾಗಿದೆ.

ಮುಂಗಾರು ಅಧಿವೇಶನ: ಮುಂದುವರಿದ ವಿರೋಧ ಪಕ್ಷಗಳ ಗದ್ದಲ; ಆಗಸ್ಟ್ 7ಕ್ಕೆ ರಾಜ್ಯಸಭೆ ಕಲಾಪ ಮುಂದೂಡಿಕೆ
ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರವಾಗಿ ಪ್ರತಿಪಕ್ಷಗಳ ಸಂಸದರು ಮತ್ತು ಆಡಳಿತ ಪಕ್ಷದ ಸದಸ್ಯರ ಗದ್ದಲದ ನಡುವೆ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಸದನವನ್ನು ಆಗಸ್ಟ್ 7 ಕ್ಕೆ ಮುಂದೂಡಿದರು.

ಸಂಸತ್ತಿನಲ್ಲಿ ಮಣಿಪುರ ವಿಷಯದ ಚರ್ಚೆಯಿಂದ ವಿರೋಧ ಪಕ್ಷಗಳು ಓಡಿಹೋಗುತ್ತಿವೆ: ಪ್ರಲ್ಹಾದ್ ಜೋಶಿ
ಸಂಸತ್ತಿನಲ್ಲಿ ಮಣಿಪುರ ವಿಷಯದ ಚರ್ಚೆಯಿಂದ ವಿರೋಧ ಪಕ್ಷಗಳು ಓಡಿಹೋಗುತ್ತಿವೆ. ಅವರ (ವಿಪಕ್ಷಗಳ) ಪ್ರಶ್ನೆಗಳಿಗೆ ಸರ್ಕಾರದ ಬಳಿ ಸೂಕ್ತ ಉತ್ತರವಿದೆ ಎಂಬುದನ್ನು ತಿಳಿದಿರುವ ಕಾರಣ ಅವರು ಚರ್ಚೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.

ಮಣಿಪುರ ಹಿಂಸಾಚಾರ; ವಿಪಕ್ಷಗಳ ಪರವಾಗಿ ರಾಷ್ಟ್ರಪತಿಗಳ ಭೇಟಿಗೆ ಸಮಯ ಕೋರಿದ ಮಲ್ಲಿಕಾರ್ಜುನ ಖರ್ಗೆ
ಮಣಿಪುರ ಸಮಸ್ಯೆ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ಪರವಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಆಗಸ್ಟ್ 8 ರಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ; ಪ್ರಧಾನಿ ಮೋದಿಯಿಂದ ಉತ್ತರ!
ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಈಗಾಗಲೇ ಅವಿಶ್ವಾಸ ನಿರ್ಣಯ ಮಂಡಿಸಿವೆ. ಲೋಕಸಭೆಯಲ್ಲಿ ಆಗಸ್ಟ್ 8 ಮತ್ತು 10ರ ನಡುವೆ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡುವ ಸಾಧ್ಯತೆ ಇದೆ.

ಮಣಿಪುರ ಕುರಿತು ಪ್ರಧಾನಿ ಹೇಳಿಕೆಗೆ ಒತ್ತಾಯ: ಸೋಮವಾರ ಸಂಸತ್ತಿನ ಆವರಣದಲ್ಲಿ ವಿಪಕ್ಷ ನಾಯಕರಿಂದ ಪ್ರತಿಭಟನೆ
ಮಣಿಪುರದಲ್ಲಿನ ಹಿಂಸಾಚಾರದ ಕುರಿತು ಚರ್ಚೆ ನಡೆಸಲು ಸಂಸತ್ತಿನಲ್ಲಿ ಉಂಟಾಗಿರುವ ಸಂಘರ್ಷದ ನಡುವೆಯೇ ಉಭಯ ಸದನಗಳಲ್ಲಿ ಪ್ರಧಾನಿ ಮೋದಿ ಈ ಕುರಿತು ಹೇಳಿಕೆ ನೀಡುವಂತೆ ಒತ್ತಾಯಿಸಿ ವಿವಿಧ ವಿರೋಧ ಪಕ್ಷಗಳ ಸಂಸದರು ಸಂಸತ್ತಿನ ಸಂಕೀರ್ಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

