online

ಐಐಟಿ ಮುಂಬೈಯ ಮುಂದಿನ ಸೆಮಿಸ್ಟರ್ ಸಂಪೂರ್ಣ ಆನ್ ಲೈನ್: ವಿದ್ಯಾರ್ಥಿಗಳ ಸುರಕ್ಷತೆಯೇ ಮುಖ್ಯ ಎಂದ ಸಂಸ್ಥೆ
ಕೋವಿಡ್-19 ಹಿನ್ನೆಲೆಯಲ್ಲಿ ಮುಂಬೈಯ ಭಾರತೀಯ ತಂತ್ರಜ್ಞಾನ ಸಂಸ್ಥೆ ಮುಂದಿನ ಸೆಮಿಸ್ಟರ್ ನ್ನು ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ನಡೆಸಲಿದೆ. ಕೋವಿಡ್ -19 ಸಮಯದಲ್ಲಿ ನಮಗೆ ವಿದ್ಯಾರ್ಥಿಗಳ ಸುರಕ್ಷತೆಯೇ ಮುಖ್ಯವಾಗಿದೆ ಎಂದು ಐಐಟಿ ಮುಂಬೈ ನಿರ್ದೇಶಕರು ತಿಳಿಸಿದ್ದಾರೆ.

ಹೋಮ್ ಕ್ವಾರಂಟೈನ್ ನಲ್ಲಿರುವವರ ಮನೆ ವಿಳಾಸ ಈಗ ಆನ್ ಲೈನ್ ನಲ್ಲಿ ಲಭ್ಯ!
ಅಂತರ ರಾಜ್ಯಗಳಿಂದ ಬಂದು ಹೋಮ್ ಕ್ವಾರಂಟೈನ್ ನಲ್ಲಿರುವವರ ಮನೆ ವಿಳಾಸ ಈಗ ಆನ್ ಲೈನ್ ನಲ್ಲಿ ಲಭ್ಯವಿದೆ. ಕೋವಿಡ್-19 . ಕರ್ನಾಟಕ. ಗೌ.ಇನ್ ವೆಬ್ ಸೈಟ್ ನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವವರ ಹೆಸರು ಮತಿತ್ತರ ವೈಯಕ್ತಿಕ ವಿಷಯಗಳನ್ನು ಹೊರತುಪಡಿಸಿ ಮನೆ ವಿಳಾಸವನ್ನು ಹಾಕಲಾಗುತ್ತಿದೆ. ಇವರಿಗೆ ಸಕಾರಾತ್ಮಕ ಬೆಂಬಲ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ.

ಎಲ್'ಕೆಜಿ, ಯುಕೆಜಿ ಮಕ್ಕಳಿಗೂ ಆನ್'ಲೈನ್ ಕೋಚಿಂಗ್ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ
ಶಾಲೆಗಳನ್ನು ಯಾವಾಗ ಪ್ರಾರಂಭ ಮಾಡಬಹುದು, ಎಷ್ಟು ಶೈಕ್ಷಣಿಕ ದಿನಗಳು ಕಡಿಮೆ ಆಗುತ್ತದೆ ಎಂಬ ಬಗ್ಗೆ ಶಿಕ್ಷಣ ಇಲಾಖೆ ಅಧ್ಯಯನ ಮಾಡುತ್ತಿದೆ. ತರಗತಿಗಳನ್ನು ಪಾಳಿಯ ಆಧಾರದಲ್ಲಿ ನಡೆಸಬೇಕಾ ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕಾ ಎಂಬ ಚರ್ಚೆಯೂ ನಡೆಯುತ್ತಿದೆ.

ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೊ ವೀಕ್ಷಿಸುವ ಮಕ್ಕಳ ಸಂಖ್ಯೆ ಶೇ.95 ಹೆಚ್ಚಳ:ಗೂಗಲ್, ವಾಟ್ಸಾಪ್ ಗಳಿಗೆ ಆಯೋಗ ನೊಟೀಸ್
ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೊ ನೋಡುವ ಮಕ್ಕಳ ಸಂಖ್ಯೆ ಶೇಕಡಾ 95ರಷ್ಟು ಹೆಚ್ಚಾಗಿದ್ದು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಗೂಗಲ್, ವಾಟ್ಸಾಪ್ ಮಟ್ಟು ಟ್ವಿಟ್ಟರ್ ಗಳಿಗೆ ನೊಟೀಸ್ ಕಳುಹಿಸಿದೆ.

ಲಾಕ್‌ಡೌನ್ ವೇಳೆ ನಿಷೇಧವಿದ್ದರೂ ಆನ್‌ಲೈನ್ ಮೂಲಕ ಸಿಗರೇಟ್ ಮಾರಾಟ: ಇಬ್ಬರು ಆರೋಪಿಗಳ ಬಂಧನ
ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ತಂಬಾಕು ಹಾಗೂ ಗುಟ್ಕಾ ಉತ್ಪನ್ನಗಳ ಮಾರಾಟ ನಿಷೇಧ ಮಾಡಿದ್ದರೂ ಸಹ ದೇಶಿಯ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 3 ಲಕ್ಷ ರೂ. ಮೌಲ್ಯದ ಸಿಗರೇಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಡೆಲಿವರಿ ಬಾಯ್ಸ್ ವೇಷದಲ್ಲಿ 2 ತಲೆ ಹಾವು ಮಾರಾಟಕ್ಕೆ ಯತ್ನಿಸಿದವರು ಸಿಸಿಬಿ ಬಲೆಗೆ
ಡೆಲಿವರಿ ಬಾಯ್ಸ್ ವೇಷ ಧರಿಸಿ ಅಕ್ರಮವಾಗಿ ಎರಡು ತಲೆ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಬೆಂಗಳೂರು ಅಪರಾಧ ವಿಭಾಗದ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಚಿತ್ರೋತ್ಸವ: ಪೂರ್ಣ ಆನ್‌ಲೈನ್ ನೋಂದಣಿಗೆ ವಿರೋಧ
ಬೆಂಗಳೂರು ಅಂತಾರಾಷ್ಟ್ರೀಯ 12ನೇ ಚಿತ್ರೋತ್ಸವ ಪ್ರವೇಶಕ್ಕೆ ಪಾಸ್ ಪಡೆಯಲು ಆನ್ ಲೈನ್ಮೊರೆ ಹೊಗಬೇಕಾಗಿದೆ. ಕೌಂಟರ್ ನೋಂದಣಿ ಇಲ್ಲವೇ ಇಲ್ಲ. ಹೀಗೆ ಮಾಡಿರುವುದು ವ್ಯವಸ್ಥೆಯಲ್ಲ ಕುವ್ಯವಸ್ಥೆ ಎಂದು ಚಿತ್ರಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಮುಂದೆ ಸೈಟು, ಆಸ್ತಿಯ ನಕಲಿ ದಾಖಲೆ ಸೃಷ್ಟಿ ಅಸಾಧ್ಯ: ಬಿಡಿಎಯಿಂದ ಆನ್ ಲೈನ್ ನಲ್ಲಿ ಭೂ ದಾಖಲಾತಿ
ನಕಲಿ ದಾಖಲೆಗಳ ಮೂಲಕ ಆಸ್ತಿಗಳನ್ನು ಮಾರಾಟ ಮಾಡುವ ವಂಚನೆಯಿಂದ ತಪ್ಪಿಸಲು ಎಲ್ಲಾ ಭೂ ದಾಖಲೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸದ್ಯದಲ್ಲಿಯೇ ಆನ್ ಲೈನ್ ವ್ಯವಸ್ಥೆಗೊಳಪಡಿಸಲಿದೆ.

ವಿರೋಧ ವ್ಯಕ್ತಪಡಿಸುತ್ತಿರುವ ರಾಜ್ಯಗಳಿಗೆ ಸಡ್ಡು ಹೊಡೆಯಲು ಮುಂದಾದ ಕೇಂದ್ರ: ಸಿಎಎ ಅಡಿ ಆನ್'ಲೈನ್ ಪೌರತ್ವ?
ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಬಿಜೆಪಿಯೇತರ ಹಲವು ರಾಜ್ಯಗಳು ಘೋಷಿಸಿರುವ ಹಿನ್ನೆಲೆಯಲ್ಲಿ ಆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಟಾಂಗ್ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

