Online class

ಕೋವಿಡ್ ಸೋಂಕಿನಿಂದ ಕಳೆದ 18 ತಿಂಗಳು ಶಾಲೆಗಳು ತೆರೆಯದೆ ವಿದ್ಯಾರ್ಥಿಗಳ ಮೇಲೆ ತೀವ್ರ ದುಷ್ಪರಿಣಾಮ: ವರದಿ
ಕೋವಿಡ್-19 ಸೋಂಕಿನಿಂದಾಗಿ ಕಳೆದ 18 ತಿಂಗಳಲ್ಲಿ ನಿರಂತರ ಶಾಲಾ ಮುಚ್ಚುವಿಕೆ ಮತ್ತು ಆನ್‌ಲೈನ್ ಕಲಿಕೆಯ ಸೀಮಿತ ವ್ಯಾಪ್ತಿಯು ಶೈಕ್ಷಣಿಕ, ಭಾವನಾತ್ಮಕ, ಪೌಷ್ಟಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ವಿದ್ಯಾರ್ಥಿ ಸಮುದಾಯಕ್ಕೆ ದುರಂತದ-ಸಂಕಷ್ಟದ ಪರಿಣಾಮಗಳನ್ನು ತಂದೊಡ್ಡಿದೆ ಎಂದು ರಾಷ್ಟ್ರೀಯ ಶಿಕ್ಷಣ ತುರ್ತುಸ್ಥಿತಿ ಒಕ್ಕೂಟ (NCEE) ವರದಿ ಆತಂಕಕಾರಿ ಅಂಶ ಹೊರಹಾಕಿದೆ.

ಪ್ರಥಮ ಪಿಯುಸಿಗೆ ಪ್ರವೇಶ ಆರಂಭ; ಆಗಸ್ಟ್ 16ರಿಂದ ಆನ್ ಲೈನ್ ತರಗತಿಗಳು
ರಾಜ್ಯಾದ್ಯಂತ ಪ್ರಥಮ ಪಿಯುಸಿ ತರಗತಿಗೆ ಪ್ರವೇಶ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ದಿನವೇ ಪಿಯುಸಿಗೆ ಪ್ರವೇಶ ಪ್ರಕ್ರಿಯೆಗೆ ಆರಂಭವಾಗಿದ್ದು ಆಗಸ್ಟ್ 31ರವರೆಗೆ ಮುಂದುವರಿಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಆರ್ ಸ್ನೆಹಲ್ ತಿಳಿಸಿದ್ದಾರೆ.

ಇದು ಮಕ್ಕಳಾಟ ಅಲ್ಲ; ಆನ್ ಲೈನ್ ತರಗತಿಗೆ ಹಾಜರಾಗಲು ಮಾಡಬೇಕಾದ 'ಮರಕೋತಿ' ಸಾಹಸ!
ಆನ್ ಲೈನ್ ತರಗತಿಗೆ ಹಾಜರಾಗಲು ಮಕ್ಕಳು ಹರಸಾಹಸ ಪಡಬೇಕಾ? ಕೆಲವರು ಮರಗಳನ್ನು ಹತ್ತುತ್ತಿದ್ದಾರೆ. ಕೆಲವರು ಬೃಹತ್ ಬಂಡೆಗಳನ್ನು ಏರುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮಗ್ನರಾಗಿದ್ದು ಕಾರುಗಳಲ್ಲೇ ಕುಳಿತುಕೊಳ್ಳುತ್ತಾರೆ.

ಡಜನ್ ಮಾವಿನಹಣ್ಣನ್ನು 1.2 ಲಕ್ಷ ರೂ. ಗೆ ಮಾರಿ ಆನ್‌ಲೈನ್ ತರಗತಿಗಾಗಿ ಸ್ಮಾರ್ಟ್ಫೋನ್ ಖರೀದಿಸಿದ 11ರ ಬಾಲಕಿ!
ಕೊರೋನಾ ಹಿನ್ನಲೆಯಲ್ಲಿ ತರಗತಿಗಳು ತೆರೆಯುತ್ತಿಲ್ಲ. ಶಾಲಾ ಮಂಡಳಿಗಳು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದೆ. ಸ್ಮಾರ್ಟ್ಫೋನ್ ಖರೀದಿಸಲು ಹಣವಿಲ್ಲದೆ 11 ವರ್ಷದ ಬಾಲಕಿಯೊಬ್ಬಳು ಮಾವಿನಹಣ್ಣನ್ನು ಮಾರುತ್ತಿರುವ ಹೃದಯಸ್ಪರ್ಶಿ ಘಟನೆ ಜಮ್ಶೆಡ್‌ಪುರದಲ್ಲಿ ನಡೆದಿದೆ.

ಇಂಟರ್ನೆಟ್ ಸಮಸ್ಯೆ ಬಗೆಹರಿಸಿ: ಮುಖ್ಯಮಂತ್ರಿಗಳಿಗೆ ಸುರೇಶ್ ಕುಮಾರ್ ಮನವಿ
ರಾಜ್ಯದ ವಿವಿಧ ಭಾಗಗಳಲ್ಲಿ ಅಂತರ್ಜಾಲ ನೆಟ್ವರ್ಕ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿ ಸಮೂಹ ತೊಂದರೆಗೊಳಗಾಗಿದ್ದು, ಅಂತರ್ಜಾಲ ಮತ್ತು ನೆಟ್ವರ್ಕ್ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಹಾಸನ: ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ತರಗತಿ ನಡೆಸಿ ಮೆಚ್ಚುಗೆ ಗಳಿಸಿದ ಸರ್ಕಾರಿ ಶಿಕ್ಷಕಿ
ವಿದ್ಯಾರ್ಥಿಗಳನ್ನು ಆಯಾ ಪಠ್ಯಕ್ರಮವನ್ನು ಮರೆಯದಂತಿಡಲು ನೆರವಾಗುವ ಪ್ರಯತ್ನದಲ್ಲಿ, ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಆನ್‌ಲೈನ್ ಕಲಿಕೆಯನ್ನು ಹೆಚ್ಚಿಸಲು ಯೂಟ್ಯೂಬ್ ಬಳಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಸೆಷನ್‌ಗಳನ್ನು ಆಸಕ್ತಿದಾಯಕವಾಗಿಸುತ್ತಿದ್ದಾರೆ.

'ಮಕ್ಕಳಿಗೆ ಇಷ್ಟೊಂದು ಹೋಂ ವರ್ಕ್ ಯಾಕೆ ಕೊಡ್ತಾರೆ ಮೋದಿ ಸಾಬ್'?: ಪ್ರಧಾನಿಗೆ ಕಾಶ್ಮೀರದ ಪುಟ್ಟ ಪೋರಿಯ ಪ್ರಶ್ನೆ
ಕೊರೋನಾ ಸೋಂಕಿನಿಂದಾಗಿ ಕಳೆದ ವರ್ಷದಿಂದ ಶಾಲೆಗಳು ಆರಂಭವಾಗಿಲ್ಲ. ಆನ್ ಲೈನ್ ಕ್ಲಾಸ್ ನಲ್ಲಿ ಮಕ್ಕಳಿಗೆ ತರಗತಿಗಳು ನಡೆಯುತ್ತಿವೆ, ಆನ್ ಲೈನ್ ನಲ್ಲಿ ಮಕ್ಕಳಿಗೆ ಹೋಂವರ್ಕ್, ಕ್ಲಾಸ್ ವರ್ಕ್ ಎಲ್ಲವನ್ನೂ ಶಿಕ್ಷಕರು ನೀಡುತ್ತಾರೆ. ಇದು ಬಹುತೇಕ ಮಕ್ಕಳಿಗೆ ಇಷ್ಟವಾಗುತ್ತಿಲ್ಲ.

ಆನ್‌ಲೈನ್ ಕಲಿಕೆ; ಮೋಜಿನ ಚಟುವಟಿಕೆಗಳಿಗೆ ಮಕ್ಕಳು ಖುಷ್!
ಇದು ಆನ್‌ಲೈನ್ ಶಿಕ್ಷಣದ ಕಾಲ. ಆದರೆ, ಇಲ್ಲಿ ಆನ್‌ಲೈನ್ ಶಿಕ್ಷಣ ಕೇವಲ ಶಾಲಾ ಕಾಲೇಜುಗಳಿಗೆ ಸೀಮಿತವಾಗಿಲ್ಲ. ಬದಲಿಗೆ ಅಂಗನವಾಡಿಯ ಪುಟಾಣಿ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ಒದಗಿಸಲು ಸರ್ಕಾರ ಮುಂದಾಗಿದೆ.

ಆನ್'ಲೈನ್ ಶಿಕ್ಷಣ: ಮಾರ್ಗಸೂಚಿ ಪಾಲಿಸಿ, ಇಲ್ಲವೇ ಕ್ರಮ ಎದುರಿಸಿ; ಖಾಸಗಿ ಶಾಲೆಗಳಿಗೆ ಸರ್ಕಾರ ಕಠಿಣ ಎಚ್ಚರಿಕೆ
ಆನ್'ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲ ಪುಟ್ಟ ಬದಲಾವಣೆಗಳೊಂದಿಗೆ ಪರಿಷ್ಕೃತ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ತಜ್ಞರ ವರದಿ ಆಧರಿಸಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

