Omicron

ಕೋವಿಡ್-19 ವೈರಸ್ ನ ಬಹು ರೂಪಾಂತರಗಳ ವಿರುದ್ಧ ಜೈಡಸ್ ಕ್ಯಾಡಿಲಾ ಸಂಸ್ಥೆಯ ಮೊನೊಕ್ಲೋನಲ್ ಪ್ರತಿಕಾಯ ಚಿಕಿತ್ಸೆ ಪರಿಣಾಮಕಾರಿ: ICMR
ಕೋವಿಡ್-19 ವೈರಸ್ ನ ಬಹು ರೂಪಾಂತರಗಳ ವಿರುದ್ಧ ಜೈಡಸ್ ಕ್ಯಾಡಿಲಾ ಸಂಸ್ಥೆಯ ಮೊನೊಕ್ಲೋನಲ್ ಪ್ರತಿಕಾಯ ಚಿಕಿತ್ಸೆ ಪರಿಣಾಮಕಾರಿ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೇಳಿದೆ.

ಭಾರತದಲ್ಲಿ 5ನೇ ಓಮಿಕ್ರಾನ್ ಕೇಸ್ ಪತ್ತೆ: ತಾಂಜಾನಿಯಾದಿಂದ ದೆಹಲಿಗೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ದೃಢ!
ಭಾರತದಲ್ಲಿ ಓಮಿಕ್ರಾನ್ ರೂಪಾಂತರ ಸೋಂಕಿನ ಪ್ರಕರಣಗಳು ದಿನೇದಿನೇ ಏರಿಕೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 5ನೇ ಪ್ರಕರಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ದೆಹಲಿಯಲ್ಲಿ ಮೊದಲನೇ ಓಮಿಕ್ರಾನ್ ಪ್ರಕರಣ ಪತ್ತೆಯಾದಂತಾಗಿದೆ.

'ಓಮಿಕ್ರಾನ್' ಕೋವಿಡ್-19 ರೂಪಾಂತರಗಳ 'ಉಸೇನ್ ಬೋಲ್ಟ್' ಆಗಿದೆ: ಪ್ರಖ್ಯಾತ ವೈರಾಲಜಿಸ್ಟ್ ಡಾ. ರವಿ
ಜಗತ್ತೀನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಓಮಿಕ್ರಾನ್ ರೂಪಾಂತರ ಕೋವಿಡ್-19 ರೂಪಾಂತರಗಳ 'ಉಸೇನ್ ಬೋಲ್ಟ್' ಆಗಿದೆ ಎಂದು ಕರ್ನಾಟಕದ ಪ್ರಖ್ಯಾತ ವೈರಾಲಜಿಸ್ಟ್, ನಿಮ್ಹಾನ್ಸ್‌ನ INSACOG ಲ್ಯಾಬ್‌ನ ನೋಡಲ್ ಅಧಿಕಾರಿ, ಜಿನೋಮ್ ಸೀಕ್ವೆನ್ಸಿಂಗ್ ಸಮಿತಿಯ ಮುಖ್ಯಸ್ಥರೂ ಡಾ. ರವಿ ಹೇಳಿದ್ದಾರೆ.

'ಮೊನೊಕ್ಲೋನಲ್ ಆ್ಯಂಟಿಬಾಡಿ ಥೆರಪಿ' ತೆಗೆದುಕೊಂಡಿದ್ದ 'ಓಮಿಕ್ರಾನ್' ಸೋಂಕಿತ ವೈದ್ಯ ಈಗ ಫುಲ್ 'ಫಿಟ್ ಅಂಡ್ ಫೈನ್'!
ಇಡೀ ಜಗತನ್ನು ಆತಂಕಕ್ಕೀಡು ಮಾಡಿರುವ ಓಮಿಕ್ರಾನ್ ರೂಪಾಂತರ ಸೋಂಕಿಗೆ 'ಮೊನೊಕ್ಲೋನಲ್ ಆ್ಯಂಟಿಬಾಡಿ ಥೆರಪಿ' ಚಿಕಿತ್ಸೆಯಾಗಬಹುದೇ ಎಂಬ ಸಣ್ಣದೊಂದು ಆಶಾವಾದ ಇದೀಗ ತಲೆ ಎತ್ತಿದ್ದು, ಇದಕ್ಕೆ ಕಾರಣ ರಾಜ್ಯದಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕಿತ ವೈದ್ಯ..

ಮಹಾರಾಷ್ಟ್ರ: ಓಮಿಕ್ರಾನ್ ಸೋಂಕಿತ ಕಳೆದ ಎಪ್ರಿಲ್ ನಿಂದ ಹಡಗಿನಲ್ಲಿದ್ದ: ಕೊರೊನಾ ಲಸಿಕೆ ಪಡೆಯಲಾಗಿರಲಿಲ್ಲ
ಹಡಗಿನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆತನಿಗೆ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ಅದರ ಹೊರತಾಗಿಯೂ ಆತ ಲಸಿಕೆ ಪಡೆದುಕೊಳ್ಳಲು ಪ್ರಯತ್ನ ನಡೆಸಿದ್ದಾಗಿ ತಿಳಿಸಿದ್ದಾನೆ.

ಒಮಿಕ್ರಾನ್ ಗಿಂತ ಈಗಲೂ ಡೆಲ್ಟಾ ವೈರಾಣುವೇ ತಲೆನೋವು: ವಿದೇಶಿ ತಜ್ಞರಿಂದ ಮೂರನೇ ಡೋಸ್ ಗೆ ಸಲಹೆ
ಒಮಿಕ್ರಾನ್ ವಿರುದ್ಧ ಲಸಿಕೆಗಳ ಸಾಮರ್ಥ್ಯ ತಿಳಿಯಲು ಪ್ರಯೋಗಗಳು ನಡೆದಿದ್ದು, ಕೆಲ ವಾರಗಳಲ್ಲೇ ಈ ಬಗ್ಗೆ ಮಾಹಿತಿ ಹೊರಬೀಳಲಿದೆ.

ಡೆಲ್ಟಾಗೆ ನೀಡಲಾಗುತ್ತಿರುವ ಚಿಕಿತ್ಸೆಯನ್ನೇ ಓಮಿಕ್ರಾನ್ ಗೂ ನೀಡಲಾಗುತ್ತದೆ, ಮೂರು ಪ್ರಕರಣ ದಾಖಲಾದರೆ ಅದು ಕ್ಲಸ್ಟರ್ ಹಂತ: ಸಿಎಂ ಬೊಮ್ಮಾಯಿ
ಕೊರೋನಾ ಹಾವಳಿ ಹಾಗೂ ಹೊಸ ರೂಂಪಾಂತರಿ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಓಮಿಕ್ರಾನ್: ಸೋಂಕಿತ ವೈದ್ಯನ ಸೋಂಕಿನ ಮೂಲ ಪತ್ತೆಗೆ ಆರೋಗ್ಯ ಇಲಾಖೆ ಮುಂದು!
ಅರವಳಿಕೆ ತಜ್ಞನಿಗೆ ಓಮಿಕ್ರಾನ್ ರೂಪಾಂತರಿ ವೈರಸ್ ಸೋಂಕು ಯಾವ ರೀತಿ ತಗುಲಿತು ಎಂಬುದರ ಮೂಲ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ: ಮಕ್ಕಳ ಆರೋಗ್ಯದಲ್ಲಿ ಕಳವಳ ತಂದಿರುವ ಸೋಂಕು
ಕೋವಿಡ್ 3ನೇ ಅಲೆಯ ಸಂದರ್ಭದಲ್ಲಿ ಓಮಿಕ್ರಾನ್ ರೂಪಾಂತರಿ ಕಂಡುಬಂದಿದ್ದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ದಕ್ಷಿಣ ಆಫ್ರಿಕಾ ತಜ್ಞರಲ್ಲಿ ಆತಂಕವನ್ನುಂಟುಮಾಡಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 16 ಸಾವಿರದ 55 ಮಂದಿಯಲ್ಲಿ ಸೋಂಕು ವಕ್ಕರಿಸಿದ್ದು 25 ಮಂದಿ ಮೃತಪಟ್ಟಿದ್ದಾರೆ.

