Omicron variant

ಓಮಿಕ್ರಾನ್ ಭೀತಿ: ಅಂತಾರಾಷ್ಟ್ರೀಯ ವಿಮಾನ ಸೇವೆ ಡಿಸೆಂಬರ್ 15 ರಿಂದ ಪುನರಾರಂಭ ಇಲ್ಲ- ಡಿಜಿಸಿಎ
ಹೊಸ ಕೋವಿಡ್ ರೂಪಾಂತರಿ 'ಓಮಿಕ್ರಾನ್' ತಳಿ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ್ದು ಈ ಹಿನ್ನೆಲೆಯಲ್ಲಿ ಡಿಸೆಂಬರ್ 15 ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಪುನರಾರಂಭವನ್ನು ಮುಂದೂಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ನಿರ್ಧರಿಸಿದೆ.

ನಾಳೆ ಲೋಕಸಭೆಯಲ್ಲಿ ಓಮಿಕ್ರಾನ್ ರೂಪಾಂತರಿ ಬಗ್ಗೆ ಚರ್ಚೆ ಸಾಧ್ಯತೆ
ಸಂಸತ್ ನ ಚಳಿಗಾಲದ ಅಧಿವೇಶನದ ಲೋಕಸಭೆ ಕಲಾಪದಲ್ಲಿ ಡಿ.1 ರಂದು ಹೊಸ ಕೋವಿಡ್-19 ರೂಪಾಂತರಿ ವೈರಾಣು ಓಮಿಕ್ರಾನ್ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಓಮಿಕ್ರಾನ್ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆ ನಿಗದಪಡಿಸಿದ ದೆಹಲಿ ಸರ್ಕಾರ
ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡಲು ದೆಹಲಿ ಆರೋಗ್ಯ ಇಲಾಖೆಯು ಲೋಕನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯನ್ನು ಮೀಸಲಾಗಿಟ್ಟಿದೆ.

ರಾಜ್ಯದಲ್ಲಿ ಡೆಲ್ಟಾಗಿಂತ ಭಿನ್ನವಾದ ವೈರಸ್ ಪತ್ತೆ. ಚನ್ನರಾಯಪಟ್ಟಣ ವಸತಿ ಶಾಲೆಯ 13 ಮಕ್ಕಳಿಗೆ ಕೊರೋನಾ ಪಾಸಿಟಿವ್!
ಜಗತ್ತಿನಾದ್ಯಂತ ಓಮಿಕ್ರಾನ್ ರೂಪಾಂತರಿ ಹಾವಳಿ ಹೆಚ್ಚಾಗಿದ್ದು ಇದರ ನಡುವೆ ರಾಜ್ಯದಲ್ಲಿ ಡೆಲ್ಟಾಗಿಂತ ಭಿನ್ನವಾದ ವೈರಸ್ ಪತ್ತೆಯಾಗಿದೆ. ಇನ್ನು ಚನ್ನರಾಯಪಟ್ಟಣ ವಸತಿ ಶಾಲೆಯ 13 ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಆತಂಕಕ್ಕೀಡಾಗುವಂತೆ ಮಾ

ಓಮಿಕ್ರಾನ್ ರೂಪಾಂತರಿ ಹೆಚ್ಚಳ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ
ವಿಶ್ವದಾದ್ಯಂತ ಕೊರೊನಾ ವೈರಸ್ನ ಹೊಸ ರೂಪಾಂತರಿ ಓಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಡಿಸೆಂಬರ್ 1ರಿಂದ ಜಾರಿಗೆ ಬರುತ್ತವೆ.

ಓಮಿಕ್ರಾನ್ ಲಕ್ಷಣಗಳು ಏನು? ಹೊಸ ರೂಪಾಂತರಿ ಎಷ್ಟು ಅಪಾಯಕಾರಿ?
ಎಲ್ಲಾ ಕಡೆ ಓಮಿಕ್ರಾನ್ ಹೊಸ ರೂಪಾಂತರಿಯ ದುಗುಡ ಹೆಚ್ಚಾಗುತೊಡಗಿದೆ. ಡೆಲ್ಟಾ ರೂಪಾಂತರಿಯಿಂದ ಭೀತಿಗೊಳಗಾಗಿದ್ದ ವಿಶ್ವದ ರಾಷ್ಟ್ರಗಳು ಓಮಿಕ್ರಾನ್ ಹೊಸ ರೂಪಾಂತರಿಯಿಂದಾಗಿ ಮತ್ತೆ ಭೀತಿ ಆವರಿಸತೊಡಗಿದೆ.

ಓಮಿಕ್ರಾನ್ ಭೀತಿ: ಅಂತಾರಾಷ್ಟ್ರೀಯ ವಿಮಾನ ಪುನರಾರಂಭಿಸುವ ನಿರ್ಧಾರ ಪರಿಶೀಲಿಸಲು ಕೇಂದ್ರ ನಿರ್ಧಾರ
ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ವೈರಸ್ ಜಗತ್ತಿನಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಸೇವೆಯನ್ನು ಪುನರಾರಂಭಿಸುವ ನಿರ್ಧಾರವನ್ನು ಮರು..

'ಓಮಿಕ್ರಾನ್' ರೂಪಾಂತರಿಗೆ ಸಡ್ಡು; ಅಮೆರಿಕ ಮೂಲದ ಔಷಧ ಸಂಸ್ಥೆ Novavaxನಿಂದ 100 ದಿನಗಳಲ್ಲಿ ಕೋವಿಡ್ ಲಸಿಕೆ ಭರವಸೆ!
ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡು ಜಗತ್ತೀನಾದ್ಯಂತ ಭಾರಿ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ಹೊಸ ರೂಪಾಂತರ 'ಓಮಿಕ್ರಾನ್' ಗೆ ಇನ್ನು 100 ದಿನಗಳಲ್ಲಿ ಪರಿಣಾಮಕಾರಿ ಲಸಿಕೆ ಸಂಶೋಧನೆ ಮಾಡುವುದಾಗಿ ಅಮೆರಿಕ ಮೂಲದ ಔಷಧ ತಯಾರಿಕಾ ಸಂಸ್ಥೆ ನೋವಾವ್ಯಾಕ್ಸ್ ಸಂಸ್ಥೆ ಭರವಸೆ ನೀಡಿದೆ.

ಓಮಿಕ್ರಾನ್ ಆತಂಕ: ಮಹಾರಾಷ್ಟ್ರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದರೆ 500 ರೂ. ದಂಡ
ಹೊಸ ಕೊರೋನಾ ವೈರಸ್ ರೂಪಾಂತರವಾದ `ಓಮಿಕ್ರಾನ್' ಜಗತ್ತಿನಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕೋವಿಡ್ ನಿಯಮಗಳನ್ನು ಅನುಸರಿಸದಿದ್ದರೆ ದಂಡ ವಿಧಿಸುವುದಾಗಿ ಶನಿವಾರ ಘೋಷಿಸಿದೆ.

