Odisha

ಒಡಿಶಾ ರೈಲು ದುರಂತ: ವೈಫಲ್ಯಕ್ಕೆ ಹೊಣೆಗಾರಿಕೆಯಿದೆಯೇ? ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ
ಒಡಿಶಾ ರೈಲು ಅಪಘಾತದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ 'ಈ ಬೃಹತ್ ಕಾರ್ಯಾಚರಣೆಯ ವೈಫಲ್ಯಕ್ಕೆ ಯಾವುದೇ ಹೊಣೆಗಾರಿಕೆ ಇರುತ್ತದೆ'ಯೇ ಎಂದು ಪ್ರಶ್ನಿಸಿದೆ.

ಒಡಿಶಾ ರೈಲು ದುರಂತ: ತನಿಖೆ ಪೂರ್ಣ, ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ನಲ್ಲಿನ ಬದಲಾವಣೆಯೇ ಅಪಘಾತಕ್ಕೆ ಕಾರಣ ಎಂದ ಕೇಂದ್ರ ಸರ್ಕಾರ
ಒಡಿಶಾದ ಬಾಲಸೋರ್ ರೈಲು ಅಪಘಾತ ಪ್ರಕರಣಕ್ಕೆ ಮೂಲಕ ಕಾರಣಗಳ ಪತ್ತೆ ಮಾಡಲಾಗಿದ್ದು, ಅದಕ್ಕೆ ಕಾರಣರಾದವರನ್ನೂ ಗುರ್ತಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಹೇಳಿದ್ದಾರೆ.

ಒಡಿಶಾ ರೈಲು ಅಪಘಾತ: ಟಿಕೆಟ್ ರಹಿತ ಪ್ರಯಾಣಿಕರಿಗೂ ಪರಿಹಾರ
ಒಡಿಶಾದ ಬಾಲಾಸೋರ್ ಬಳಿ ಅಪಘಾತಕ್ಕೀಡಾದ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಟಿಕೆಟ್ ರಹಿತ ಪ್ರಯಾಣಿಕರು ಸಹ ಪರಿಹಾರ ಪಡೆಯುತ್ತಾರೆ ಎಂದು ರೈಲ್ವೆ ಭಾನುವಾರ ತಿಳಿಸಿದೆ.

ಒಡಿಶಾ ರೈಲು ದುರಂತ: ಬೈಯಪ್ಪನಹಳ್ಳಿಯಲ್ಲಿ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಮಾಡುವಂತೆ ಬಿಬಿಎಂಪಿಗೆ ಸಿಎಂ ಸೂಚನೆ
ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಊಟ, ತಿಂಡಿ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಶನಿವಾರ ಸೂಚನೆ ನೀಡಿದ್ದಾರೆ.

ಬಾಲಸೋರ್ನಲ್ಲಿ ಸಮರೋಪಾದಿಯಲ್ಲಿ ಸಾಗಿದ ಹಳಿ ದುರಸ್ತಿ ಕಾರ್ಯ: ವೈಮಾನಿಕ ದೃಶ್ಯ
ಒಡಿಶಾದ ಬಾಲಸೋರ್ನಲ್ಲಿ ಭೀಕರ ರೈಲು ಅಪಘಾತ ನಡೆದ ಸ್ಥಳದಲ್ಲಿ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ.

ರೈಲು ದುರಂತಕ್ಕೆ ಕೋಮು ಬಣ್ಣ: ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ- ಒಡಿಶಾ ಪೊಲೀಸರ ಎಚ್ಚರಿಕೆ
275 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 1,110ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಬಾಲಾಸೋರ್ ರೈಲು ದುರಂತ ಕುರಿತ ವದಂತಿ ಹರಡುವುದನ್ನು ನಿಲ್ಲಿಸುವಂತೆ ಒಡಿಶಾ ಪೊಲೀಸರು ಭಾನುವಾರ ಮನವಿ ಮಾಡಿದ್ದಾರೆ.

ಒಡಿಶಾ ರೈಲು ಅಪಘಾತ: ಕರ್ನಾಟಕದ ಕಳಸ ತಾಲೂಕಿನ ಎಲ್ಲಾ 110 ಪ್ರಯಾಣಿಕರು ಸುರಕ್ಷಿತ
ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (12864) ನಲ್ಲಿ ಪ್ರಯಾಣಿಸುತ್ತಿದ್ದ ಕಳಸಾ ತಾಲೂಕಿನ ಎಲ್ಲಾ 110 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಒಡಿಶಾದಲ್ಲಿ ಸಿಲುಕಿರುವ ವಾಲಿಬಾಲ್ ಆಟಗಾರರನ್ನು ಕರೆತರಲು ವಿಮಾನ ಟಿಕೆಟ್ಗಳನ್ನು ಕಾಯ್ದಿರಿಸಿದ ಕರ್ನಾಟಕ ಸರ್ಕಾರ
ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಿಂದಾಗಿ ಅಲ್ಲಿ ಸಿಲುಕಿರುವ 32 ವಾಲಿಬಾಲ್ ಆಟಗಾರರು ಮತ್ತು ಅವರ ಕೋಚ್ಗಾಗಿ ತಂಡವು ಕೋಲ್ಕತ್ತಾ-ಬೆಂಗಳೂರು ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದೆ ಎಂದು ಸುದ್ದಿ ಪ್ರಕಟಣೆ ತಿಳಿಸಿದೆ.

ಒಡಿಶಾ ತ್ರಿವಳಿ ರೈಲು ದುರಂತ: ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ರಾಜೀನಾಮೆಗೆ ಶರದ್ ಪವಾರ್ ಒತ್ತಾಯ
ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಾಗ ನಿಲ್ದಾಣ ಬಳಿ ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಸ್ಥಾನಕ್ಕೆ ಅಶ್ವಿನ್ ವೈಷ್ಣವ್ ರಾಜೀನಾಮೆ ನೀಡಬೇಕೆಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಶನಿವಾರ ಒತ್ತಾಯಿಸಿದ್ದಾರೆ.

