Odisha Train Accident

ಬಾಲಾಸೋರ್ ರೈಲು ದುರಂತ ಬೆನ್ನಲ್ಲೇ ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
275 ಮಂದಿಯ ಸಾವಿಗೆ ಕಾರಣವಾದ ಬಾಲಾಸೋರ್ ರೈಲು ದುರಂತ ಹಸಿರಾಗಿರುವಂತೆಯೇ ಇತ್ತ ಒಡಿಶಾದಲ್ಲಿ ಮತ್ತೊಂದು ರೈಲು ಹಳಿ ತಪ್ಪಿರುವ ಕುರಿತು ವರದಿಯಾಗಿದೆ.

ಒಡಿಶಾ ರೈಲು ದುರಂತ: ಭರದಿಂದ ಸಾಗಿದ ರೈಲು ಮಾರ್ಗ ಮರುಸ್ಥಾಪನೆ ಕಾರ್ಯ
280ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಒಡಿಶಾ ರೈಲು ದುರಂತದ ಬೆನ್ನಲ್ಲೇ ರೈಲು ಮಾರ್ಗಗಳನ್ನು ಮರುಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ.

ರೈಲು ಅಪಘಾತದಲ್ಲಿ 1000 ಜನರು ಗಾಯಗೊಂಡಿದ್ದು, 100ಕ್ಕೂ ಹೆಚ್ಚು ರೋಗಿಗಳಿಗೆ ಐಸಿಯುವಿನಲ್ಲಿ ಚಿಕಿತ್ಸೆಯ ಅಗತ್ಯವಿದೆ: ಕೇಂದ್ರ ಆರೋಗ್ಯ ಸಚಿವ
ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 1000 ಜನರು ಗಾಯಗೊಂಡಿದ್ದು, 100ಕ್ಕೂ ಹೆಚ್ಚು ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾನುವಾರ ಹೇಳಿದ್ದಾರೆ.

ಒಡಿಶಾ ರೈಲು ಅಪಘಾತ: ರಾಶಿ-ರಾಶಿ ಹೆಣಗಳ ಮಧ್ಯೆ ಪ್ರೀತಿಪಾತ್ರರ ಹುಡುಕುವುದೇ ದೊಡ್ಡ ಸವಾಲು
ಒಡಿಶಾ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 280ಕ್ಕೂ ಆಧಿಕ ಮಂದಿಯ ರಾಶಿ ರಾಶಿ ಹೆಣಗಳ ನಡುವೆ ಪ್ರೀತಿ ಪಾತ್ರರ ಹೆಣಗಳನ್ನು ಹುಡುಕಲು ಸಂಬಂಧಿಕರ ಹರಸಾಹಸಪಡುತ್ತಿರುವ ದೃಶ್ಯ ಮನಕಲುಕುವಂತಿದೆ.

ಒಡಿಶಾ ರೈಲು ದುರಂತ: ಗಾಯಗೊಂಡ ಪ್ರಯಾಣಿಕರ ಚಿಕಿತ್ಸೆಯ ವ್ಯವಸ್ಥೆಯನ್ನು ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವರು!
ಬಾಲಸೋರ್ ಜಿಲ್ಲೆಯ ಬಹನಾಗಾದಲ್ಲಿ ಶುಕ್ರವಾರ ಸಂಭವಿಸಿದ ರೈಲು ದುರಂತದಲ್ಲಿ ಬದುಕುಳಿದವರ ನಿರ್ಣಾಯಕ ಆರೋಗ್ಯ ಅಗತ್ಯಗಳನ್ನು ಪೂರೈಸಲು, ಕೇಂದ್ರವು ನವದೆಹಲಿಯಿಂದ ಭುವನೇಶ್ವರ ಮತ್ತು ಕಟಕ್‌ಗೆ ವೈದ್ಯರು ಮತ್ತು ನಿರ್ಣಾಯಕ ವೈದ್ಯಕೀಯ ಸಾಧನಗಳನ್ನು ಸಜ್ಜುಗೊಳಿಸಿದೆ.

ಒಡಿಶಾ ರೈಲು ದುರಂತ: ಎಂಜಿನ್ ಬದಲಾಗಿದ್ದರಿಂದ ನಾವು ಬದುಕಿದ್ದೇವೆ; ನಟ ಪ್ರೀತಮ್ ಬಿಚ್ಚಿಟ್ಟ ದುರಂತದ ಕ್ಷಣ
ಒಡಿಶಾದ ಬಾಲಸೋರ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತದಲ್ಲಿ ಸಿಲುಕಿದ್ದವು.

ಒಡಿಶಾ ರೈಲು ದುರಂತ: ಹಳಿಗಳ ಮೇಲೆ ಹೆಣಗಳ ರಾಶಿ, ಗಾಯಾಳುಗಳಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆ; ಹೊರಗಡೆಯೇ ಚಿಕಿತ್ಸೆ
ಭೀಕರ ದುರಂತದಲ್ಲಿ ಸುಮಾರು 233 ಮಂದಿ ಸಾವನ್ನಪ್ಪಿರುವುದರಿಂದ ರೈಲು ಹಳಿಗಳ ಮೇಲೆ ಹೆಣಗಳ ರಾಶಿಯೇ ಬಿದ್ದಿದೆ. ರೈಲ್ವೆ ಬೋಗಿಗಳು ಒಂದರ ಮೇಲೆ ಒಂದು ಬಿದ್ದಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕ್ಲಿಷ್ಟಕರವಾಗಿದೆ.

ಒಡಿಶಾದಲ್ಲಿ ಭೀಕರ ಅಪಘಾತ: 2 ರೈಲುಗಳ ನಡುವೆ ಢಿಕ್ಕಿ, ಕನಿಷ್ಠ 30 ಸಾವು, 180ಕ್ಕೂ ಅಧಿಕ ಮಂದಿಗೆ ಗಾಯ
ಒಡಿಶಾದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, 2 ರೈಲುಗಳ ನಡುವೆ ಢಿಕ್ಕಿಯಾಗಿ ಕನಿಷ್ಛ 30 ಮಂದಿ ಸಾವಿಗೀಡಾಗಿ, 180ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಡಿಶಾ: ಮೂರು ರೈಲುಗಳ ಮಧ್ಯೆ ಭೀಕರ ಅಪಘಾತ; 207ಕ್ಕೇರಿದ ಸಾವಿನ ಸಂಖ್ಯೆ, ಪ್ರಧಾನಿ ಮೋದಿ ಸಂತಾಪ
ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಎರಡಲ್ಲ.. ಬದಲಿಗೆ ಮೂರು ರೈಲುಗಳು ಢಿಕ್ಕಿಯಾಗಿವೆ ಎಂದು ತಿಳಿದುಬಂದಿದ್ದು, ಈ ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 207 ದಾಟಿದೆ ಎನ್ನಲಾಗಿದೆ.

