North Karnataka

ನೀವು ಭಿಕ್ಷೆ ಬೇಡಿ, ಸಾಲ ಕೇಳಿ ಅಥವಾ ಕದಿಯಿರಿ, ಆದ್ರೆ ಕೃಷ್ಣಾ ಮೇಲ್ದಂಡೆ ಕಾಮಗಾರಿ ಮಾತ್ರ ಪೂರ್ಣ ಮಾಡಿ: ಸರ್ಕಾರಕ್ಕೆ ಎಸ್ ಆರ್ ಪಾಟೀಲ್ ಆಗ್ರಹ
ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು 60 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಜೆಟ್ ನ ಅಗತ್ಯವಿದ್ದು ರಾಜ್ಯಸರ್ಕಾರ ಜಿಡಿಪಿಯ ಶೇಕಡಾ 10ರಷ್ಟನ್ನು ಎರಡು ವರ್ಷಗಳ ಕಾಲ ಮೀಸಲಿಡಬೇಕೆಂದು ನಿನ್ನೆ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜೆಡಿಎಸ್ ನಿಂದ ಸ್ಪರ್ಧಿಸಿದರೆ ಗೆಲ್ಲುವ ಭರವಸೆಯಿಲ್ಲ, ಕುಮಾರಸ್ವಾಮಿ ಮೇಲೆ ವಿಶ್ವಾಸವಿಲ್ಲ: 'ತೆನೆ' ಹೊತ್ತ ಮಹಿಳೆ ಬಿಟ್ಟು 'ಕೈ' ಹಿಡಿದ ಕೋನರೆಡ್ಡಿ!
ನವಲಗುಂದ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ ಜೆಡಿಎಸ್ ತೊರೆಯುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಹೊಡೆತ ಬೀಳಲಿದೆ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಉತ್ತರ ಕರ್ನಾಟಕದಲ್ಲಿ ಪುನೀತ್ ಫೋಟೋ ಫ್ರೇಮ್‌ಗಳಿಗೆ ಬೇಡಿಕೆ; ದೇವರ ಪಕ್ಕದಲ್ಲಿಟ್ಟು ಪೂಜಿಸುವ ಅಭಿಮಾನಿಗಳು!
ಕರ್ನಾಟಕ ತನ್ನ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು 20 ದಿನಗಳು ಕಳೆದಿವೆ. 46ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಪುನೀತ್ ನೆನಪಿನಿಂದ ಅವರ ಸ್ನೇಹಿತರು, ಸಹ-ನಟರು, ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ಇನ್ನೂ ಹೊರಬಂದಿಲ್ಲ.

ಉತ್ತರ ಕರ್ನಾಟಕ ಭಾಗಗಳಲ್ಲಿ ಕಲುಷಿತ ನೀರು ಕುಡಿದು ಹಲವರು ಸಾವು: ವಿಸ್ತೃತ ಯೋಜನೆ ರೂಪಿಸುವಂತೆ ಆರೋಗ್ಯ ಇಲಾಖೆಗೆ ಸರ್ಕಾರ ಸೂಚನೆ
ಕಳೆದ ಕೆಲ ವಾರಗಳಲ್ಲಿ ಉತ್ತರ ಕರ್ನಾಟಕದಲ್ಲಿ ಕಲುಷಿತ ನೀರು ಕುಡಿದು 11 ಮಂದಿ ಮೃತಪಟ್ಟಿದ್ದಾರೆ. ಇಲ್ಲಿನ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ನೀಡುವುದು ಸರ್ಕಾರಕ್ಕೆ ಸವಾಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸವಿಸ್ತಾರವಾದ ಯೋಜನೆಯನ್ನು ರೂಪಿಸುವಂತೆ ಸರ್ಕಾರ ಆರೋಗ್ಯ ಇಲಾಖೆಗೆ ಸೂಚಿಸಿದೆ.

ಮಳೆ ತರುವ ದೇವರು 'ಜೋಕುಮಾರಸ್ವಾಮಿ'
ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯೊಂದಿಗೆ ಹಲವು ಆಚರಣೆಗಳು ಗರಿಗೆದರುತ್ತವೆ. ಅಂತಹ ಆಚರಣೆಗಳಲ್ಲಿ ಒಂದು ಜೋಕುಮಾರಸ್ವಾಮಿಯ ಪೂಜೆ. ಗಣೇಶ ಹೋದ ನಂತರ ಹುಟ್ಟುವ ಜೋಕುಮಾರ ಸ್ವಾಮಿ ಮಳೆ ಮಳೆ ತರುವುದರ ಜೊತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಸಮೃದ್ಧಿಯನ್ನು ನೀಡುತ್ತಾನೆ ಎಂದೇ ಜನಪದರ ನಂಬಿಕೆ.

ನೂತನ ಸಿಎಂ ಬಸವರಾಜ ಬೊಮ್ಮಾಯಿ ಮೂಲಕ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕನಸು ನನಸಾಗುವುದೇ?
ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಈ ಭಾಗದ ಹಲವು ವರ್ಷಗಳ ಅಭಿವೃದ್ಧಿ ಕನಸು ಚಿಗುರೊಡೆದಿದೆ.

ಮೌಢ್ಯತೆಯ ಪರಾಕಾಷ್ಠೆ: ಕೊರೋನಾ ಓಡಿಸಲು ಟ್ರ್ಯಾಕ್ಟರ್ ನಲ್ಲಿ ಅನ್ನ ತಂದು ಊರಾಚೆ ಸುರಿದ ಗ್ರಾಮಸ್ಥರು!
ಕೊರೋನಾ ಸೋಂಕಿನ ಸಂಖ್ಯೆ ರಾಜ್ಯಾದ್ಯಂತ ಏರುತ್ತಿರುವ ಬೆನ್ನಲ್ಲೇ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೂಢನಂಬಿಕೆಯ ಹಲವು ಆಚರಣೆಗಳು ನಡೆಯುತ್ತಿವೆ.

1,763 ವೈದ್ಯರು, ವೈದ್ಯಾಧಿಕಾರಿಗಳ ನೇಮಕ; ಆರೋಗ್ಯ ವ್ಯವಸ್ಥೆಗೆ ಬಲ: ಶಿಕ್ಷಣ ಸಚಿವ ಡಾ. ಕೆ.ಸುಧಾಕರ್
ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಒಟ್ಟು 1,763 ವೈದ್ಯರು ಹಾಗೂ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.

ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಮೇರೆಗೆ ವೈದ್ಯರು, ತಜ್ಞರ ನೇಮಕ: ಡಾ. ಕೆ.ಸುಧಾಕರ್
ಹಳೇ ಮೈಸೂರು ಮತ್ತು ಬೆಂಗಳೂರು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಹಿಂದುಳಿದ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ವೈದ್ಯರು ಮತ್ತು ತಜ್ಞರ ಹುದ್ದೆಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಲಾಗುವುದು ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

