Nitin Gadkari

11 ವರ್ಷ ನೀವು ನೋಡಿದ್ದು ಬರೀ 'ನ್ಯೂಸ್ ರೀಲ್', ನಿಜವಾದ ಸಿನಿಮಾ ಇನ್ನೂ ಆರಂಭವಾಗಿಲ್ಲ: ಗಡ್ಕರಿ
ಪಕ್ಷ, ತನ್ನ ಕಾರ್ಯಕರ್ತರಿಗೆ ಯಾವ ಜವಾಬ್ದಾರಿಗಳನ್ನು ನೀಡಬೇಕು ಎಂದು ನಿರ್ಧರಿಸುತ್ತದೆ. ತಮಗೆ ಯಾವುದೇ ಜವಾಬ್ದಾರಿ, ಸ್ಥಾನ ನೀಡಿದರೂ ಅದನ್ನು ನಿರ್ವಹಿಸುವುದಾಗಿ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನ ಆಚರಣೆಯು ಭಾರತದ ದೊಡ್ಡ ಸಾಧನೆ, ಹೆಮ್ಮೆಯ ವಿಷಯ: ನಿತಿನ್ ಗಡ್ಕರಿ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಯೋಗ ಪ್ರದರ್ಶನ ನೀಡಿದರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರೂ ವ್ಯಸನ ಮುಕ್ತಿಯ ಪ್ರತಿಜ್ಞೆ ಸ್ವೀಕರಿಸಿದರು.

Bengaluru: ಹೆಬ್ಬಾಳ ಜಂಕ್ಷನ್ -ಕೆಂಪೇಗೌಡ ಏರ್ ಪೋರ್ಟ್ ಫ್ಲೈಓವರ್ ಕಾರಿಡಾರ್ ಕಾಮಗಾರಿ ತ್ವರಿತಗೊಳಿಸಿ; ನಿತಿನ್ ಗಡ್ಕರಿಗೆ ಡಿಕೆಶಿ ಮನವಿ
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು, ಲಾಜಿಸ್ಟಿಕ್ಸ್ ನಿರ್ವಾಹಕರು ಮತ್ತು ಹತ್ತಿರದ ಟೆಕ್ ಪಾರ್ಕ್‌ಗಳು ಮತ್ತು ಕೈಗಾರಿಕಾ ಪ್ರದೇಶಗಳಿಗೆ ಪ್ರಯಾಣಿಸುವ ಮತ್ತು ಅಲ್ಲಿಂದ ಬರುವ ಉದ್ಯೋಗಿಗಳಿಗೆ ಮೂಲಸೌಕರ್ಯಗಳಿಲ್ಲದೆ ತೊಂದರೆಯಾಗಿದೆ.

ಮೇ 1ರಿಂದ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ? ಇದು ಹೇಗೆ ಕೆಲಸ ಮಾಡುತ್ತದೆ?
ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ (GNSS) ಏಪ್ರಿಲ್ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿತ್ತು, ವಿಳಂಬವಾಗಿ ಈಗ ಮೇ 1ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.

10,000 ಕೋಟಿ ರೂ ಮೌಲ್ಯದ ಕೆಲಸ ಆರಂಭಿಸಲು ಹೇಳಿದ್ದೆ, ಆದರೆ, ಬಾಕಿ ಇರುವುದೇ ಮುಗಿಸಿಲ್ಲ..; ಕರ್ನಾಟಕ ಸಿಎಂ ಮೇಲೆ ಕೋಪ ಇದೆ: Nitin Gadkari
ನಾನು ಅವರಿಗೆ 10,000 ಕೋಟಿ ರೂ.ಗಳವರೆಗಿನ ಕೆಲಸಗಳನ್ನು ಪ್ರಾರಂಭಿಸಬಹುದು ಎಂದು ಹೇಳಿದ್ದೆ, ಆದರೆ ಬಾಕಿ ಇರುವ ಯೋಜನೆಗಳಿಂದಾಗಿ ಹೊಸ ಯೋಜನೆಗಳು ಸಿಲುಕಿಕೊಂಡಿವೆ.

ಭಾರತದಲ್ಲಿ 22 ಲಕ್ಷ ನುರಿತ ಚಾಲಕರ ಕೊರತೆ ಇದೆ: ಲೋಕಸಭೆಗೆ ಗಡ್ಕರಿ ಮಾಹಿತಿ
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ, ಚಾಲಕರಿಗೆ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ 4,500 ಕೋಟಿ ರೂ. ಯೋಜನೆ ಪ್ರಾರಂಭಿಸಿದೆ ಎಂದು ಗಡ್ಕರಿ ತಿಳಿಸಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು, ಶಿರಾಡಿ ಘಾಟ್ ಸೇರಿ 12 ಯೋಜನೆಗಳ ಮಂಜೂರಾತಿಗೆ ಮನವಿ
ದೆಹಲಿಯಲ್ಲಿ ಕೇಂದ್ರ ರಸ್ತೆ, ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಮುಖ್ಯಮಂತ್ರಿ, ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂರ್ಪಕ ಜಾಲವನ್ನು ವೃದ್ಧಿಸಲು ಸಹಕಾರ ನೀಡುತ್ತಿರುವುದಕ್ಕಾಗಿ ರಾಜ್ಯದ ಪರವಾಗಿ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ನಿತಿನ್ ಗಡ್ಕರಿ ಭೇಟಿಯಾದ HDD: ಹಾಸನ ಹೊರ ವರ್ತುಲ ರಸ್ತೆ ಯೋಜನೆ ಅನುಮೋದನೆಗೆ ಮನವಿ
ಹಾಸನ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಕರಾವಳಿ ಮತ್ತು ಒಳನಾಡು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಹೀಗಾಗಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಅಗತ್ಯವಿದೆ.

ನಾಗ್ಪುರ: ಜಾತಿ ಬಗ್ಗೆ ಮಾತನಾಡುವವರನ್ನು ಒದೆಯುತ್ತೇನೆ- ನಿತಿನ್ ಗಡ್ಕರಿ
ಸೆಂಟ್ರಲ್ ಇಂಡಿಯಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಗಡ್ಕರಿ, "ಜೋ ಕರೇಗಾ ಜಾತ್ ಕಿ ಬಾತ್, ಉಸ್ಕೊ ಕಸ್ಕೆ ಮರುಂಗಾ ಲಾತ್ (ಜಾತಿ ಬಗ್ಗೆ ಮಾತನಾಡುವ ಯಾರೇ ಆದರೂ ನಾನು ಒದೆಯುತ್ತೇನೆ) ಎಂದರು.

