NGO

ಮಡಿಕೇರಿ: ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಪುನಶ್ಚೇತನ; ಎನ್ ಜಿಒ ಸಂಸ್ಥೆಯ ಕಾರ್ಯಕ್ಕೆ ಶ್ಲಾಘನೆ
ಕೊಡಗಿನ ಕೇರಳದ ಗಡಿಯಲ್ಲಿ ಮುಚ್ಚುವ ಹಂತದಲ್ಲಿದ್ದ ಶಾಲೆಯು ಸ್ವಯಂಸೇವಾ ಸಂಸ್ಥೆಯೊಂದರ ಪ್ರಯತ್ನದಿಂದ ಪುನಶ್ಚೇತನದ ಹಾದಿಯಲ್ಲಿದೆ. ಕರಿಕೆಯಲ್ಲಿರುವ ಕನ್ನಡ ಪ್ರೌಢಶಾಲೆಯನ್ನು ಈಗ ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತಿಸಲಾಗಿದ್ದು, ಗ್ರಾಮೀಣ ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರು ಸ್ವಯಂಪ್ರೇರಿತರಾಗಿ ಮುಂದಾಗಿದ್ದಾರೆ.

ನಡೆದಾಡುವ ಸಾಮರ್ಥ್ಯ ಇಲ್ಲದಿದ್ದರೂ ದಿವ್ಯಾಂಗರು ಗೌರವಯುತ ಜೀವನ ನಡೆಸಲು ನೆರವಾಗುತ್ತಿರುವ ನಿಮಿಷ್ ಆಚಾರ್ಯ!
ಅಪಘಾತವೊಂದು ಅನೇಕ ಜೀವಗಳನ್ನು ಹಾಳುಮಾಡುತ್ತದೆ. ಆದರೆ ಈ ದುರಂತವು ಅನೇಕರ ಜೀವನವನ್ನು ಬದಲಾಯಿಸಿದೆ. 2001ರಲ್ಲಿ ಕಾರು ಅಪಘಾತಕ್ಕೊಳಗಾಗಿದ್ದ ನಿಮಿಷ್ ಆಚಾರ್ಯ (47) ಅವರ ಬೆನ್ನುಹುರಿ ಹಾನಿಯಾಗಿ ನಡೆದಾಡುವ ಸಾಮರ್ಥ್ಯವನ್ನೇ ಕಳೆದುಕೊಂಡರು, ಜೀವನದುದ್ದಕ್ಕೂ ಗಾಲಿಕುರ್ಚಿಗೆ ಸೀಮಿತವಾದರು. ಇದು ಅವರ ಜೀವನದ ಮತ್ತೊಂದು ಅಧ್ಯಾಯವನ್ನು ಪ್ರಾರಂಭಿಸಿತು.

ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಬೋಧನೆಯ ಪರಿವರ್ತನೆ: ಬೆಂಗಳೂರು ಎನ್‌ಜಿಒದಿಂದ 10,200 ಶಿಕ್ಷಕರಿಗೆ ತರಬೇತಿ
ಶಿಕ್ಷಕರಿಗೆ ಉತ್ತಮ ಜ್ಞಾನವನ್ನು ನೀಡಲು ಮತ್ತು ಪರಿಕಲ್ಪನೆಗಳನ್ನು ಸರಳಗೊಳಿಸಲು ಸಹಾಯ ಮಾಡಲು, ಬೆಂಗಳೂರಿನಲ್ಲಿರುವ ಎನ್‌ಜಿಒ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಬೋಧನೆಯ ವಿಧಾನವನ್ನು ಪರಿವರ್ತಿಸುತ್ತಿದೆ.

ಎನ್‌ಜಿಒಗಳ ಪರಿಶ್ರಮಕ್ಕೆ ಸಿಕ್ಕ ಫಲ: ವಿಶಿಷ್ಟ ಉಡುಪಿ ಸೀರೆಗೆ ಪುನಶ್ಚೇತನ!
ಭಾರತೀಯ ಮಹಿಳೆಯರಿಗೆ ಆಭರಣಗಳು ಎಷ್ಟು ಅಮೂಲ್ಯವೋ, ಸೀರೆಗಳೂ ಅಷ್ಟೇ ಅಮೂಲ್ಯ ವಸ್ತುವಾಗಿದೆ. ಸಾಂಪ್ರದಾಯಿಕ ಸಂದರ್ಭಗಳಲ್ಲಿ, ಹಬ್ಬ ಹರಿದಿನಗಳು, ಪ್ರಮುಖ ಕಾರ್ಯಕ್ರಮಗಳಲ್ಲಿ ಸೀರೆಗಳನ್ನು ಉಟ್ಟು ಸಂಭ್ರಮಿಸುತ್ತಾರೆ.

ಗರ್ಭಿಣಿ ಮಹಿಳೆಗೆ ಬಸ್ ನಲ್ಲಿ ಹೆರಿಗೆ ಮಾಡಿಸಲು ಸಹಾಯ: ಕೆಎಸ್ ಆರ್ ಟಿಸಿ ನಿರ್ವಾಹಕಿ ನಡೆಗೆ ಮೆಚ್ಚುಗೆಯ ಮಹಾಪೂರ
ಹಾಸನ ಜಿಲ್ಲೆಯ ಶಾಂತಿಗ್ರಾಮದ ಬಳಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ ಬಸ್ ನಿರ್ವಾಹಕಿ ವಸಂತಮ್ಮ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗತೊಡಗಿದೆ.

ವಿದೇಶಿ ದೇಣಿಗೆ ಕಾಯ್ದೆ ಉಲ್ಲಂಘನೆ: ಹರ್ಷ ಮಂದರ್ ಎನ್‌ಜಿಒ ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಶಿಫಾರಸು
ವಿದೇಶಿ ದೇಣಿಗೆ(ನಿಯಂತ್ರಣ) ಕಾಯ್ದೆ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಲೇಖಕ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಹರ್ಷ ಮಂದರ್ ಅವರ ಎನ್‌ಜಿಒ ಅಮನ್ ಬಿರಾದಾರಿ ವಿರುದ್ಧ ಕೇಂದ್ರ ಗೃಹ ಸಚಿವಾಲಯ(ಎಂಎಚ್‌ಎ) ಸಿಬಿಐ...

ಎನ್‌ಜಿಒಗಳನ್ನು ವಿಶಿಷ್ಟ ಐಡಿಯೊಂದಿಗೆ ಕೇಂದ್ರದ ಡೇಟಾ ಹಬ್‌ಗೆ ಲಿಂಕ್ ಮಾಡಲು ಕೇಂದ್ರ ಸೂಚನೆ
ಕೇಂದ್ರ ಸರ್ಕಾರವು ಎನ್‌ಜಿಒಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಹಣದ ಹರಿವಿನ ಬಗ್ಗೆ ಕಣ್ಗಾವಲು ಮತ್ತು ಈ ಘಟಕಗಳ ಲೆಕ್ಕಪತ್ರ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಲು...

ಬೆಂಗಳೂರು: ‘ಒಂದು ಕೋಟಿ ಸಸಿಗಳ ನೆಡುವ ಯೋಜನೆ’ ಮರುಪ್ರಾರಂಭ, ಕೋಟಿ ವೃಕ್ಷ ಸೈನ್ಯ ಎನ್‌ಜಿಒ ಜೊತೆ ಒಪ್ಪಂದ
ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಭಾರಿ ಹೊಡೆತ ಬಿದ್ದಿದ್ದ ಬೆಂಗಳೂರಿನಲ್ಲಿ ಒಂದು ಕೋಟಿ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಮರು ಚಾಲನೆ ನೀಡಲಾಗಿದೆ. ನಾಗರಿಕ ಆಧಾರಿತ ಉಪಕ್ರಮವೆಂದು ಹೆಸರಿಸಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಕೋಟಿ ವೃಕ್ಷ ಸೈನ್ಯ ಎಂಬ ಎನ್‌ಜಿಒ ಜೊತೆ ಒಪ್ಪಂದ ಮಾಡಿಕೊಂಡಿದೆ.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ: ಚಿಲುಮೆ ಎನ್ ಜಿಒಗೆ ನೀಡಿದ್ದ ಅನುಮತಿ ರದ್ದು; ಪ್ರಕರಣ ದಾಖಲು
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಅನ್ ಲೈನ್ ಅಥವಾ VHA(Voter Helpline App) ಮುಖೇನಾ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುಮತಿ ನೀಡಲಾಗಿತ್ತು

