Newyear

ಹೊಸ ವರ್ಷದ ಪಾರ್ಟಿ ನಿಷೇಧ ಕುರಿತು ಶೀಘ್ರದಲ್ಲೇ ತೀರ್ಮಾನ: ಬೊಮ್ಮಾಯಿ
ಹೊಸವರ್ಷಾಚರಣೆ ಪಾರ್ಟಿಗಳಿಗೆ ಅನುಮತಿ ನೀಡಬೇಕೇ ಅಥವಾ ನಿಷೇಧ ಹೇರಬೇಕೇ ಎಂಬ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ಪಾಕ್ ಹೊರತುಪಡಿಸಿ ನೆರೆ ರಾಷ್ಟ್ರಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ
ವಿಶ್ವದಾದ್ಯಂತ ಹೊಸ ವರ್ಷದಿಂದ ಸಂಭ್ರಮದಿಂದ ಸ್ವಾಗಿತಿಸಲಾಗಿದ್ದು, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.

ಹೊಸ ವರ್ಷದ ಸ್ವಾಗತಕ್ಕೆ ಗೂಗಲ್ ಡೂಡಲ್ ಮೆರಗು
ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರ್ಷನ್ನು ನಾವು ಬರಮಾಡಿಕೊಳ್ಳಲಿದ್ದೇವೆ. ಈ ಸಂಭ್ರಮದ ಕ್ಷಣವನ್ನು ಕಣ್ಣು ತುಂಬಿ ಕೊಳ್ಳಲು ವಿಶ್ವವೇ ಸಿದ್ಧವಾಗಿದೆ. ವಿಶ್ವದ ದೊಡ್ಡ ಸರ್ಚ್ ಇಂಜಿನ್ ಗೂಗಲ್ ಹೊಸ ವರ್ಷದ ಮುನ್ನಾದಿನಕ್ಕೆ ನೂತನ ಡೂಡಲ್ ಮೆರಗು ನೀಡಿದೆ.

ಹೊಸ ವರ್ಷಾಚರಣೆಗೆ ಖಾಕಿ ಸರ್ಪಗಾವಲು: ಅಸಭ್ಯ ವರ್ತನೆ ವಿರುದ್ಧ ಕಠಿಣ ಕ್ರಮ
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ವರ್ಷಾಚರಣೆ ನೆಪದಲ್ಲಿ ಬಲವಂತವಾಗಿ ಶುಭ ಕೋರಿ ಅನುಚಿತವಾಗಿ ವರ್ತಿಸುವುದು, ಬಲವಂತವಾಗಿ ಕೈ ಕುಲುಕುವುದು, ಮೈ ಮೇಲೆ ಬೀಳುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

