Newdelhi

"ರಾಷ್ಟ್ರೀಯ ವಿಧಿವಿಜ್ಞಾನ ಮೂಲಸೌಕರ್ಯ ವರ್ಧನೆ ಯೋಜನೆ" ಗೆ ಕೇಂದ್ರ ಸಂಪುಟದ ಅನುಮೋದನೆ
"ರಾಷ್ಟ್ರೀಯ ವಿಧಿವಿಜ್ಞಾನ ಮೂಲಸೌಕರ್ಯ ವರ್ಧನೆ ಯೋಜನೆ" ಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಸಿಎಂ ಅರವಿಂದ್ ಕೇಜ್ರಿವಾಲ್ ರೂ.100 ಕೋಟಿ ಲಂಚಕ್ಕೆ ಬೇಡಿಕೆ: ಕೋರ್ಟ್ ಗೆ ED ಮಾಹಿತಿ
ಸೌಥ್ ಗ್ರೂಪ್ ನಿಂದ ಎಎಪಿ ಪಕ್ಷಕ್ಕಾಗಿ ರೂ.100 ಕೋಟಿ ಲಂಚಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೇಡಿಕೆ ಇಟ್ಟಿದ್ದರು ಎಂದು ಜಾರಿ ನಿರ್ದೇಶನಾಲಯ ಬುಧವಾರ ಹೇಳಿದ್ದು, ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದೆ.

ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರದ ಪ್ರತೀಕ 'ಸೂರ್ಯ ಘರ್ 'ಯೋಜನೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರ ಪ್ರಧಾನಿ ಆಶಯವಾಗಿದ್ದು, ಸೂರ್ಯ ಘರ್ ಯೋಜನೆ ಇದಕ್ಕೆ ಪ್ರತೀಕವಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಲೇಖಕಿ ಅರುಂಧತಿ ರಾಯ್ ವಿರುದ್ಧದ ಕೇಸ್: ಮುಂದಿನ ವಾರ ಚಾರ್ಜ್ ಶೀಟ್ ಸಲ್ಲಿಕೆ ಸಾಧ್ಯತೆ!
'ಆಜಾದಿ - ದಿ ಓನ್ಲಿ ವೇ' ಬ್ಯಾನರ್ ಅಡಿಯಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಅರುಂಧತಿ ರಾಯ್ ಹಾಗೂ ಕಾಶ್ಮೀರದ ಸೆಂಟ್ರಲ್ ವಿವಿಯ ಮಾಜಿ ಪ್ರಾಧ್ಯಾಪಕ ಶೇಕ್ ಶೌಕತ್ ಹುಸೇನ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಎಫ್ ಐಆರ್ ದಾಖಲಾಗಿತ್ತು.

ಗಲಭೆಗಳ ಬಗ್ಗೆ ಏಕೆ ಕಲಿಸಬೇಕು? ಪಠ್ಯಕ್ರಮವನ್ನು ಕೇಸರಿಕರಣಗೊಳಿಸುವ ಪ್ರಯತ್ನ ನಡೆದಿಲ್ಲ: NCERT
ಶಾಲಾ ಪಠ್ಯಕ್ರಮ ಕೇಸರಿಕರಣದ ಆರೋಪವನ್ನು ತಳ್ಳಿಹಾಕಿರುವ NCERT ನಿರ್ದೇಶಕರು, ಗುಜರಾತ್ ಗಲಭೆ ಮತ್ತು ಬಾಬರಿ ಮಸೀದಿ ಧ್ವಂಸ ಕುರಿತ ಉಲ್ಲೇಖಗಳನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಮಾರ್ಪಡಿಸಲಾಗಿದೆ. ಏಕೆಂದರೆ ಗಲಭೆಗಳ ಕುರಿತ ಬೋಧನೆಯು ಹಿಂಸಾತ್ಮಕ ಮತ್ತು ಖಿನ್ನತೆಯಿಂದ ಬಳಲುವ ನಾಗರಿಕರನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ಜೂನ್ 24 ರಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ: ಖರ್ಗೆ ಭೇಟಿಯಾದ ಸಚಿವ ಕಿರಣ್ ರಿಜಿಜು
18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಒಂದು ವಾರ ಮುಂಚಿತವಾಗಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದರು. 10, ರಾಜಾಜಿ ಮಾರ್ಗ್ ನಿವಾಸದಲ್ಲಿ ಖರ್ಗೆ ಅವರನ್ನು ರಿಜಿಜು ಭೇಟಿಯಾಗಿದ್ದು, ಇದು ಒಂದು ಸೌಜನ್ಯಯುತ ಭೇಟಿ ಎಂದು ಹೇಳಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯಗಳು 'ಪ್ರಾಕ್ಸಿ ವಾರ್' ಗೆ ಕುಸಿತ: ಬೇರು ಸಮೇತ ಕಿತ್ತೊಗೆಯಲು ಸರ್ಕಾರ ನಿರ್ಧಾರ- ಅಮಿತ್ ಶಾ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವು ನಿರ್ಣಾಯಕ ಹಂತದಲ್ಲಿದೆ. ಹೆಚ್ಚು ಸಂಘಟಿತ ಹಿಂಸಾಚಾರದಿಂದ ನಡೆಯುತ್ತಿದ್ದ ಭಯೋತ್ಪಾದನಾ ಕೃತ್ಯಗಳು ಕೇವಲ ಪ್ರಾಕ್ಸಿ ವಾರ್ ಗೆ (ಪರೋಕ್ಷ ಯುದ್ಧ) ಕುಗ್ಗುವಂತೆ ಮಾಡಿರುವುದನ್ನು ಇತ್ತೀಚಿನ ಭಯೋತ್ಪಾದನಾ ಕೃತ್ಯಗಳು ತೋರಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರ

ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವರಾಗಿ ವಿ. ಸೋಮಣ್ಣ ಅಧಿಕಾರ ಸ್ವೀಕಾರ
ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವರಾಗಿ ವಿ.ಸೋಮಣ್ಣ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಸಚಿವರು, ತಮ್ಮ ಮೇಲೆ ವಿಶ್ವಾಸವಿಟ್ಟು ಸಚಿವ ಖಾತೆ ನೀಡಿದ ಪ್ರಧಾನಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಜಿ7 ಶೃಂಗಸಭೆ: ಪ್ರಧಾನಿ ಮೋದಿ ನಾಳೆ ಇಟಲಿಗೆ ಪ್ರಯಾಣ
ಜೂನ್ 14 ರಂದು ನಡೆಯಲಿರುವ 50ನೇ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಪ್ರಧಾನಮಂತ್ರಿಯ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ನಾಳೆ ಇಟಲಿಯ ಅಪುಲಿಯಾಕ್ಕೆ ತೆರಳಲಿದ್ದಾರೆ.

