Newdelhi

ನವದೆಹಲಿ: ಶಾಲೆಗೆ ಬಾಂಬ್ ಬೆದರಿಕೆ ಸಂದೇಶ; 14 ವರ್ಷದ ಬಾಲಕನ ಬಂಧನ
ಶಾಲೆಗೆ ಹೋಗಲು ಇಷ್ಟಪಡದೆ ಸಂಬಂಧಿಕರ ಇಮೇಲ್ ಐಡಿ ಬಳಸಿಕೊಂಡು ಶಾಲೆಯ ಆಡಳಿತಕ್ಕೆ ಬಾಂಬ್ ಬೆದರಿಕೆ ಕಳುಹಿಸಿದ್ದಾನೆ

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಬಂಧನ ಪ್ರಶ್ನಿಸಿ ಬಿಭವ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಜಾ
ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಕುಮಾರ್ ಅವರು ಮೇ 13 ರಂದು ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದರು. ಮೇ 18ರಂದು ಅವರನ್ನು ಬಂಧಿಸಲಾಗಿತ್ತು.

ಮಾಜಿ IAS ಪೂಜಾ ಖೇಡ್ಕರ್ ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ!
ನಾಗರಿಕ ಸೇವಾ ಪರೀಕ್ಷೆ ಪೂರ್ಣಗೊಳಿಸಲು ಇತರ ಹಿಂದುಳಿದ ವರ್ಗಗಳು (OBC) ಮತ್ತು ವಿಶೇಷ ಚೇತನರ ಮೀಸಲಾತಿಯನ್ನು ಆಕೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಯುಪಿಎಸ್ಸಿ ಖೇಡ್ಕರ್ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಸೇರಿದಂತೆ ನಾಲ್ವರು ರಾಜ್ಯಪಾಲರೊಂದಿಗೆ ಅಮಿತ್ ಶಾ ಮಾತುಕತೆ
ಮೈಸೂರಿನ ಸಿ.ಎಚ್. ವಿಜಯ ಶಂಕರ್ ಹಾಗೂ ರಾಜಸ್ಥಾನ, ನಾಗಲ್ಯಾಂಡ್, ಗೋವಾ ರಾಜ್ಯಗಳ ರಾಜ್ಯಪಾಲರೊಂದಿಗೆ ಸಂಸತ್ತಿನ ಗೃಹ ಸಚಿವರ ಕಚೇರಿಯಲ್ಲಿ ಪ್ರತ್ಯೇಕವಾಗಿ ಅಮಿತ್ ಶಾ ಸಭೆ ನಡೆಸಿದ್ದಾರೆ.

ಜೀವ, ವೈದ್ಯಕೀಯ ವಿಮೆ ಮೇಲಿನ GST ತೆಗೆದು ಹಾಕಿ: ನಿರ್ಮಲಾ ಸೀತಾರಾಮನ್ ಗೆ ನಿತಿನ್ ಗಡ್ಕರಿ ಪತ್ರ!
'ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಗಡ್ಕರಿ, ವಿಮೆ ಉದ್ಯಮ ವಿಚಾರಕ್ಕೆ ಸಂಬಂಧಿಸಿದಂತೆ ನಾಗಪುರ ವಿಭಾಗೀಯದ ಜೀವ ವಿಮಾ ನಿಗಮ ನೌಕರರ ಒಕ್ಕೂಟ ಸಲ್ಲಿಸಿರುವ ಮನವಿ ಪತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ'

ನವದೆಹಲಿ: ನೆಲಮಾಳಿಗೆಗೆ ನೀರು ನುಗ್ಗಿ ಮೂವರು UPSC ಆಕಾಂಕ್ಷಿಗಳು ಸಾವು; 13 'ಅಕ್ರಮ' ಕೋಚಿಂಗ್ ಸೆಂಟರ್ಗಳಿಗೆ ಬೀಗ
ಭಾನುವಾರ ತಡರಾತ್ರಿಯವರೆಗೆ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 13 ಕೋಚಿಂಗ್ ಸೆಂಟರ್ಗಳನ್ನು ಸ್ಥಗಿತಗೊಳಿಸಲಾಗಿದೆ.

ಅಸುರಕ್ಷಿತ ನಿರ್ಮಾಣಕ್ಕೆ ಜನರು ಬೆಲೆ ತೆರುತ್ತಿದ್ದಾರೆ: ಕೋಚಿಂಗ್ ಸೆಂಟರ್ ಘಟನೆ ಕುರಿತು ರಾಹುಲ್!
ಭಾರೀ ಮಳೆಯ ನಂತರ ಮಧ್ಯ ದೆಹಲಿಯ ಓಲ್ಡ್ ರಾಜಿಂದರ್ ನಗರ ಪ್ರದೇಶದಲ್ಲಿ ಕೋಚಿಂಗ್ ಸೆಂಟರ್ ಇರುವ ಕಟ್ಟಡದ ನೆಲಮಾಳಿಗೆಯು ಜಲಾವೃತಗೊಂಡ ನಂತರ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ.

ಮನೀಷ್ ಸಿಸೋಡಿಯಾ ಜಾಮೀನು ಅರ್ಜಿ: ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ
ಕಳೆದ ವಿಚಾರಣೆಯಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿಗಳಿಗೆ ತಮ್ಮ ಉತ್ತರ ಸಲ್ಲಿಸುವಂತೆ ಸಿಬಿಐ ಮತ್ತು ಇಡಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಜುಲೈ 29 ರಂದು ಉತ್ತರ ನೀಡುವಂತೆ ಸೂಚಿಸಲಾಗಿತ್ತು.

ಮೇಘಾಲಯದ ನೂತನ ರಾಜ್ಯಪಾಲರಾಗಿ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ನೇಮಕ!
ಮೈಸೂರಿನಿಂದ ಎರಡು ಬಾರಿ ಸಂಸದರಾಗಿದ್ದ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಪ್ರತಿನಿಧಿಸುವ ಮೂಲಕ ರಾಜಕೀಯದಲ್ಲಿ ಸೋಲು- ಗೆಲುವನ್ನು ಕಂಡಿದ್ದರು.

