Newdelhi

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2.86 ಲಕ್ಷಕ್ಕೆ ಏರಿಕೆ; ಸಮುದಾಯ ಹಂತ ತಲುಪಿಲ್ಲ: ಐಸಿಎಂಆರ್
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2.86ಕ್ಕೆ ಲಕ್ಷಕ್ಕೆ ಏರಿಕೆಯಾಗಿದ್ದು, 8 ಸಾವಿರದ 102 ಮಂದಿ ಸಾವನ್ನಪ್ಪಿದ್ದಾರೆ. ಆದರೂ ಸೋಂಕು ಸಮುದಾಯ ಹಂತ ತಲುಪಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ -ಐಸಿಎಂಆರ್ ಪುನರುಚ್ಚರಿಸಿದೆ.

ಚೀನಾ ಗಡಿ ಕುರಿತು ಅನಪೇಕ್ಷಿತ ಮತ್ತು ಬಾಲಿಶ ಹೇಳಿಕೆ: ರಾಹುಲ್ ವಿರುದ್ಧ ಸೇನಾ ಹಿರಿಯರ ಕಿಡಿ
ಲಡಾಖ್ ಗಡಿಯಲ್ಲಿ ಚೀನಾ ಜೊತೆಗಿನ ಭಾರತದ ಪ್ರಸ್ತುತ ನಿಲುವು ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳು "ಅನಪೇಕ್ಷಿತ ಮತ್ತು ಶೋಚನೀಯ" ಎಂದು ಸಶಸ್ತ್ರ ಪಡೆಗಳ ಹಿರಿಯರು,ಪರಿಣತರು ಖಂಡಿಸಿದ್ದಾರೆ.

ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಮದ್ರಾಸಿನ ಐಐಟಿ ನಂ.1, ಬೆಂಗಳೂರಿನ ಐಐಎಸ್ ಸಿಗೆ 2ನೇ ಸ್ಥಾನ
ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಮದ್ರಾಸ್ಸಿನ ಐಐಟಿ ಅಗ್ರ ಶ್ರೇಯಾಂಕ ಪಡೆದರೆ, ಉದ್ಯಾನನಗರಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ( ಐಐಎಸ್ ಸಿ) ಎರಡನೇ ಶ್ರೇಯಾಂಕ ಪಡೆದುಕೊಂಡಿದೆ. ದೆಹಲಿಯ ಐಐಟಿ ಮೂರನೇ ಸ್ಥಾನದಲ್ಲಿದೆ.

ಇಡೀ ದೇಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂಸಾತ್ಮಕ ರಾಜಕೀಯಕ್ಕೆ ಪ್ರಚೋದನೆ: ಅಮಿತ್ ಶಾ
ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ರಾಜಕೀಯದ ಸಂಸ್ಕೃತಿ ಇದೆ ಎಂಬ ಆರೋಪದೊಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಆದಾಗ್ಯೂ, ಉಗ್ರರ ವಾತವಾರಣವಿರುವ ಟಿಎಂಸಿ ಆಡಳಿತದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ವಿಸ್ತರಿಸಲು ಬಯಸುವುದಾಗಿ ಅವರು ಹೇಳಿದ್ದಾರೆ.

ಮೊನಿಕಾ ಕಪಿಲ್ ಮೊಹ್ತಾ ಸ್ವಿಟ್ಜರ್ಲೆಂಡ್ ನ ಭಾರತದ ಮುಂದಿನ ರಾಯಭಾರಿಯಾಗಿ ನೇಮಕ
ಸ್ವಿಟ್ಜರ್ಲೆಂಡ್ ನ ಭಾರತದ ಮುಂದಿನ ರಾಯಭಾರಿಯಾಗಿ ಮೊನಿಕಾ ಕಪಿಲ್ ಮೊಹ್ತಾ ನೇಮಕಗೊಂಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಈ ವಿಷಯವನ್ನು ಪ್ರಕಟಿಸಿದೆ.

ಕಾಂಗ್ರೆಸ್ ನಲ್ಲಿ ನಿರ್ಲಕ್ಷ್ಯ: ನವಜೋತ್ ಸಿಧು ಎಎಪಿ ಸೇರ್ಪಡೆಗೆ ಪ್ರಶಾಂತ್ ಕಿಶೋರ್ ಮಧ್ಯಸ್ಥಿಕೆ?
ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಆಮ್ ಆದ್ಮಿ ಪಕ್ಷ ಸೇರಲಿದ್ದಾರೆ ಎಂಬಂತಹ ಮಾತುಗಳು ಹರಿದಾಡುತ್ತಿವೆ.

ಎಲೆಕ್ಟ್ರಾನಿಕ್ ಉತ್ಪನ್ನಗಳ ಸ್ವಾವಲಂಬನೆಗೆ ಕೇಂದ್ರದಿಂದ 50 ಸಾವಿರ ಕೋಟಿ ರೂ. ಮೌಲ್ಯದ 3 ಯೋಜನೆ ಘೋಷಣೆ
ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಗೆ ವೇಗ ನೀಡಲು ಮತ್ತು ಮೊಬೈಲ್ ಫೋನ್ ಉತ್ಪಾದನೆಯಲ್ಲಿ ದೇಶವನ್ನು ವಿಶ್ವದರ್ಜೆಗೇರಿಸುವ ಗುರಿಯೊಂದಿಗೆ 50 ಸಾವಿರ ಕೋಟಿ ರೂ. ಮೊತ್ತದ ಮೂರು ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ರಾಣಿ ರಾಂಪಲ್ ನಾಮನಿರ್ದೇಶನ ಮಾಡಿದ ಹಾಕಿ ಇಂಡಿಯಾ!
ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಲ್ ಅವರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವ ಹಾಕಿ ಇಂಡಿಯಾ, ವಂದನಾ ಕಟಾರಿಯಾ, ಮೊನಿಕಾ ಮತ್ತು ಹರ್ಮನ್ ಪ್ರೀತ್ ಸಿಂಗ್ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಮೋದಿ ನಾಯಕತ್ವದಡಿ ಭಾರತ ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಿಕಾ ರಾಷ್ಟ್ರ: ರವಿಶಂಕರ್ ಪ್ರಸಾದ್
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಡಿಯಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಿಕಾ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

