NCP

'ಮಹಾ' ಮೈತ್ರಿ ಸರ್ಕಾರ ರಚನೆಗೆ ಕಾಂಗ್ರೆಸ್ ಬಾಹ್ಯಬೆಂಬಲ: ಶಿವಸೇನೆಯಿಂದ ರಾಜ್ಯಪಾಲರ ಭೇಟಿ!
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಚುರುಕುಗೊಳ್ಳುತ್ತಿದ್ದು, ಶಿವಸೇನೆ ಸರ್ಕಾರ ರಚನೆಯ ಹಾದಿಯಲ್ಲಿದೆ.

'ಮಹಾ' ಹೈಡ್ರಾಮಾ: ಎನ್'ಡಿಎ ಕೈಬಿಟ್ಟು ಕಾಂಗ್ರೆಸ್-ಎನ್'ಸಿಪಿ ಜೊತೆ ಸರ್ಕಾರ ರಚನೆಗೆ ಸಿದ್ಧ ಎಂದ ಶಿವಸೇನೆ!
ಮಹಾರಾಷ್ಟ್ರ ಸೋಮವಾರ ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಇಷ್ಟು ದಿನ ಬಿಜೆಪಿ ಜೊತೆಗೆ ಇರಿಸು-ಮುನಿಸು ಪ್ರದರ್ಶಿಸುತ್ತಿದ್ದ ಶಿವಸೇನೆ ಇದೀಗ ಎನ್'ಡಿಎಗೆ ಕೈಕೊಟ್ಟು, ಕಾಂಗ್ರೆಸ್-ಎನ್'ಸಿಪಿ ಪಕ್ಷಗಳ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಸಿದ್ಧ ಎಂದು ಹೇಳಿದೆ.

'ಮಹಾ' ಬಿಕ್ಕಟ್ಟು: ಎನ್ಸಿಪಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಸಿದ್ಧ: ಸಂಜಯ್ ರಾವತ್
ಮಹಾರಾಷ್ಟ್ರದ ಅತಂತ್ರ ರಾಜಕೀಯ ಸ್ಥಿತಿಗೆ ಮಾತಿಗೆ ತಪ್ಪಿದ ಬಿಜೆಪಿಯೇ ಕಾರಣ ಎಂದು ಆರೋಪಿಸಿರುವ ಶಿವಸೇನೆ ಎನ್ಸಿಪಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ಸೋಮವಾರ ಹೇಳಿದ್ದಾರೆ.

'ಮಹಾ' ಬಿಕ್ಕಟ್ಟು: ವಿರೋಧ ಪಕ್ಷದಲ್ಲಿ ಕೂರುವುದೇ ನಮ್ಮ ತೀರ್ಮಾನ: ಮಲ್ಲಿಕಾರ್ಜುನ ಖರ್ಗೆ
ಮಹಾರಾಷ್ಟ್ರದಲ್ಲಿನ ಸರ್ಕಾರ ರಚನೆ ಬಿಕ್ಕಟ್ಟು ತಾರಕಕ್ಕೇರಿರುವಂತೆಯೇ ತಾವು ವಿಪಕ್ಷ ಸ್ಥಾನದಲ್ಲಿ ಕೂರುವುದಾಗಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಎನ್ ಡಿಎಗೆ ಶಿವಸೇನೆ ಗುಡ್ ಬೈ? ಕೇಂದ್ರ ಸಚಿವ ಸ್ಥಾನಕ್ಕೆ ಸಂಸದ ಅರವಿಂದ್ ಸಾವಂತ್ ರಾಜಿನಾಮೆ!
ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಿನ ಸರ್ಕಾರ ರಚನೆ ತಿಕ್ಕಾಟ ತಾರಕಕ್ಕೇರಿರುವಂತೆಯೇ ಶಿವಸೇನಾ ಸಂಸದ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಅರವಿಂದ್ ಸಾವಂತ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಎನ್ ಡಿಎ ಮೈತ್ರಿಕೂಟ ತೊರೆಯಿರಿ: ಶಿವಸೇನೆಗೆ ಎನ್ ಸಿಪಿ ಷರತ್ತು!
ಎನ್ ಡಿಎ ಮೈತ್ರಿಕೂಟ ತೊರೆದರೆ ಮಾತ್ರ ಶಿವಸೇನೆಗೆ ಬೆಂಬಲ ನೀಡುವುದಾಗಿ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಹೇಳಿದೆ.

ಶಿವಸೇನೆಗೆ ಬೆಂಬಲ ನೀಡಲು ಎನ್ ಸಿಪಿ ಹಾಕಿದ್ದು ಒಂದೇ ಒಂದು ಷರತ್ತು, ಅದು ಇಷ್ಟೆ....
ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ಭೂಮಿಕೆ ಸಿದ್ಧವಾಗುತ್ತಿದೆ. ತನ್ನ ಪಕ್ಷದವರೇ ಮುಖ್ಯಮಂತ್ರಿ ಗಾದಿ ಏರಬೇಕೆಂಬ ಪಟ್ಟನ್ನು ಶಿವಸೇನೆ ಮುಂದುವರೆಸಿದ್ದು, ಎನ್ ಸಿಪಿ ಜೊತೆ ಮೈತ್ರಿ ಕಾಂಗ್ರೆಸ್ ನ ಬಾಹ್ಯ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಲು ತಯಾರಿ ನಡೆಸಿದೆ.

ಮಹಾ ಸರ್ಕಾರ ರಚನೆ: ಶಿವಸೇನೆಗೆ ಎನ್ ಸಿಪಿ ಬೆಂಬಲ!: ನ.11 ರಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ಉದ್ಧವ್ ಠಾಕ್ರೆ
ಮಹಾರಾಷ್ಟ್ರದಲ್ಲಿ ತಾನು ಸರ್ಕಾರ ರಚನೆ ಮಾಡುವುದಿಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿದ ಬಳಿಕ ಈಗ ಶಿವಸೇನೆ ಸರ್ಕಾರ ರಚನೆಗೆ ಮುಂದಾಗಲಿರುವುದರ ಬಗ್ಗೆ ನಿರೀಕ್ಷೆಗಳು ಮೂಡಿವೆ.

ರಾಜ್ಯಪಾಲರು ಎನ್ ಸಿಪಿ-ಕಾಂಗ್ರೆಸ್ ಗೆ ಕೂಡ ಸರ್ಕಾರ ರಚನೆಗೆ ಆಹ್ವಾನ ನೀಡಬೇಕು: ಮಿಲಿಂದ್ ಡಿಯೋರಾ
ಮಹಾರಾಷ್ಟ್ರದಲ್ಲಿ ಎರಡನೇ ಅತಿದೊಡ್ಡ ಮೈತ್ರಿಪಕ್ಷವಾಗಿ ಹೊರಹೊಮ್ಮಿರುವ ಎನ್ ಸಿಪಿ ಮತ್ತು ಕಾಂಗ್ರೆಸ್ ನ್ನು ಕೂಡ ಸರ್ಕಾರ ರಚಿಸಲು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಆಹ್ವಾನಿಸಬೇಕು ಎಂದು ಕಾಂಗ್ರೆಸ್ ನಾಯಕ ಮಿಲಿಂದ್ ದಿಯೊರಾ ಹೇಳಿದ್ದಾರೆ.

