NCP, Sena

ಗುವಾಹಟಿ, ಸೂರತ್ನಲ್ಲಿ ಹೋಟೆಲ್ ಬಿಲ್ ಯಾರು ಪಾವತಿಸುತ್ತಿದ್ದಾರೆ; ಐಟಿ ಇಲಾಖೆ, ಇಡಿ ಈ ಬ್ಲ್ಯಾಕ್ ಮನಿ ಮೂಲ ಪತ್ತೆ ಮಾಡಬೇಕು: ಎನ್'ಸಿಪಿ
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವ ನಡುವಲ್ಲೇ ಸೂರತ್ ಹಾಗೂ ಗುವಾಹಟಿಯಲ್ಲಿ ಬಂಡಾಯ ಶಾಸಕರ ಹೋಟೆಲ್ ಬಿಲ್ ಗಳನ್ನು ಯಾರು ಪಾವತಿ ಮಾಡುತ್ತಿದ್ದಾರೆಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಶನಿವಾರ ಪ್ರಶ್ನೆ ಮಾಡಿದೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಇಂದು ಸಂಜೆ 5 ಗಂಟೆಗೆ ಎನ್ ಸಿಪಿ ಸಭೆ
ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿರುವಂತೆಯೇ ಮಹಾ ಆಘಾದಿ ಸರ್ಕಾರದ ಪಾಲುದಾರ ಪಕ್ಷ ಎನ್ ಸಿಪಿ ಇಂದು ಸಂಜೆ 5 ಗಂಟೆಗೆ ಸಭೆ ಆಯೋಜಿಸಿದೆ.

ಉದ್ಧವ್ ಠಾಕ್ರೆ ಮೇಲೆ ಯಾವುದೇ ದೂರುಗಳಿಲ್ಲ; ಎನ್ಸಿಪಿ, ಕಾಂಗ್ರೆಸ್ ಕಾರ್ಯವೈಖರಿಯಿಂದ ಅಸಮಾಧಾನ: ಶಿವಸೇನೆ ಬಂಡಾಯ ಶಾಸಕರು
ಶಿವಸೇನೆ ನಾಯಕ ಏಕನಾಥ್ ಶಿಂಧೆ ನೇತೃತ್ವದ ಭಿನ್ನಮತೀಯರ ಪೈಕಿ ಒಬ್ಬರಾಗಿರುವ ಮಹಾರಾಷ್ಟ್ರದ ಶಿವಸೇನೆ ಸಚಿವರೊಬ್ಬರು, ಶಿವಸೇನಾ ನಾಯಕತ್ವದ ವಿರುದ್ಧ ನಮಗೆ ಯಾವುದೇ ದೂರುಗಳಿಲ್ಲ, ಆದರೆ ಎನ್ಸಿಪಿ ಮತ್ತು ಕಾಂಗ್ರೆಸ್ನ ಕಾರ್ಯವೈಖರಿಯಿಂದ ಅಸಮಾಧಾನವಾಗಿದೆ ಎಂದು ಅವರು ಬುಧವಾರ ಹೇಳಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯಾಗಲು ಶರದ್ ಪವಾರ್ ನಕಾರ: ಗೋಪಾಲಕೃಷ್ಣ ಗಾಂಧಿ, ಅಬ್ದುಲ್ಲಾ ಹೆಸರು ಪ್ರಸ್ತಾಪಿಸಿದ ಮಮತಾ!
ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಪ್ರಸ್ತಾಪವನ್ನು ಮಹಾರಾಷ್ಟ್ರದ ನಾಯಕ ಶರದ್ ಪವಾರ್ ಇಂದು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಾನಿನ್ನೂ ಸಕ್ರಿಯ ರಾಜಕೀಯದಲ್ಲಿ ಇದ್ದೇನೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆದಿದ್ದ ಪ್ರತಿಪಕ್ಷಗಳ ಸಭೆಯಲ್ಲಿ ಹೇಳಿದ್ದಾರೆ.

ರಾಷ್ಟ್ರಪತಿ ಚುನಾವಣೆ ರೇಸ್ ನಲ್ಲಿ ನಾನಿಲ್ಲ: ಶರದ್ ಪವಾರ್ ಅಚ್ಚರಿ ಹೇಳಿಕೆ
ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಎಂದೇ ಹೇಳಲಾಗುತ್ತಿದ್ದ ಎನ್ ಸಿಪಿ ಮುಖಂಡ ಶರದ್ ಪವಾರ್ ಅವರು ತಾವು ರಾಷ್ಟ್ರಪತಿ ಚುನಾವಣಾ ರೇಸ್ ನಲ್ಲಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

'ನವಾಬ್ ಮಲಿಕ್ ನಮ್ಮ ವಿರುದ್ಧ ಸುಳ್ಳು-ಅವಹೇಳನಕಾರಿ ಆರೋಪ ಮಾಡುತ್ತಿದ್ದಾರೆ': ಸಮೀರ್ ವಾಂಖೆಡೆ ತಂದೆ ಪೊಲೀಸರಿಗೆ ದೂರು
ಮಹಾರಾಷ್ಟ್ರ ಸರ್ಕಾರದ ಎನ್ ಸಿಪಿ ಸಚಿವ ನವಾಬ್ ಮಲಿಕ್ ಅವರು ಎನ್ ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಮಾಡುತ್ತಿರುವ ಆರೋಪ ನಿಲ್ಲುತ್ತಿಲ್ಲ. ಈ ಬಗ್ಗೆ ಇದೀಗ ಸಮೀರ್ ವಾಂಖೆಡೆಯವರ ತಂದೆ ಧ್ಯಾನದೇವ್ ವಾಂಖೆಡೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸಮೀರ್ ವಾಂಖೆಡೆ ಸ್ಥೈರ್ಯಗೆಡಿಸುವ ಪ್ರಯತ್ನ: ಎನ್ ಸಿಬಿ ವಿರುದ್ಧ ನವಾಬ್ ಮಲಿಕ್ ಹೇಳಿಕೆ ನೀಡದಂತೆ ತಡೆಯಲು ಕೋರಿ ಪಿಐಎಲ್
ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿಯಾಗಿರುವ ಡ್ರಗ್ ಕೇಸಿನ ವಿಚಾರದಲ್ಲಿ ಎನ್ ಸಿಬಿ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಎನ್ ಸಿಪಿ ನಾಯಕ ನವಾಬ್ ಮಲಿಕ್ ಅವರಿಗೆ ತಡೆಯೊಡ್ಡಬೇಕು ಎಂದು ಮುಂಬೈ ನಿವಾಸಿಯೊಬ್ಬರು ಬಾಂಬೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದಾರೆ.

ಸಮೀರ್ ವಾಂಖೆಡೆ ನಂತರ ವಿಜಿಲೆನ್ಸ್ ಮುಖ್ಯಸ್ಥರ ವಿರುದ್ಧ ಆರೋಪ; ಜ್ಞಾನೇಶ್ವರ ಸಿಂಗ್ ವಿರುದ್ಧ ಹರಿಹಾಯ್ದ ಎನ್ ಸಿಪಿ
ಎನ್ ಸಿಬಿ ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪದ ತನಿಖೆ ನಡೆಸುತ್ತಿರುವ ಜಾಗೃತ ದಳ ಅಧಿಕಾರಿ ಜ್ಞಾನೇಶ್ವರ್ ಸಿಂಗ್ ವಿರುದ್ಧ ಎನ್ ಸಿಪಿ ಇದೀಗ ಹರಿಹಾಯ್ದಿದೆ. ಇಷ್ಟು ದಿನ ಎನ್ ಸಿಪಿ ನಾಯಕ ನವಾಬ್ ಮಲಿಕ್ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿಕೊಂಡು ಬಂದಿದ್ದರು.

ಮುಂಬೈ ಡ್ರಗ್ಸ್ ಕೇಸ್: ಎನ್ ಸಿಬಿ ಯಿಂದ ಬಿಜೆಪಿ ನಾಯಕನ ಸಂಬಂಧಿಯ ಬಿಡುಗಡೆ; ಎನ್ ಸಿ ಪಿ ಆರೋಪ
ನಾರ್ಕೋಟಿಕ್ಸ್ ನಿಯಂತ್ರಣ ಬ್ಯೂರೋ (ಎನ್ ಸಿಬಿ) ಮುಂಬೈ ನ ಕಡಲತೀರದಲ್ಲಿ ಕ್ರೂಸ್ ಶಿಪ್ ಮೇಲೆ ದಾಳಿ ನಡೆಸಿದಾಗ ಬಂಧಿತರ ಪೈಕಿ ಇಬ್ಬರನ್ನು ಬಿಡುಗಡೆ ಮಾಡಿದೆ. ಈ ಪೈಕಿ ಓರ್ವ ಬಿಜೆಪಿ ನಾಯಕನ ಸಂಬಂಧಿ ಎಂದು ಎನ್ ಸಿಪಿ ಆರೋಪಿಸಿದೆ.

