Nawab Malik

'ನವಾಬ್ ಮಲಿಕ್ ನಮ್ಮ ವಿರುದ್ಧ ಸುಳ್ಳು-ಅವಹೇಳನಕಾರಿ ಆರೋಪ ಮಾಡುತ್ತಿದ್ದಾರೆ': ಸಮೀರ್ ವಾಂಖೆಡೆ ತಂದೆ ಪೊಲೀಸರಿಗೆ ದೂರು
ಮಹಾರಾಷ್ಟ್ರ ಸರ್ಕಾರದ ಎನ್ ಸಿಪಿ ಸಚಿವ ನವಾಬ್ ಮಲಿಕ್ ಅವರು ಎನ್ ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಮಾಡುತ್ತಿರುವ ಆರೋಪ ನಿಲ್ಲುತ್ತಿಲ್ಲ. ಈ ಬಗ್ಗೆ ಇದೀಗ ಸಮೀರ್ ವಾಂಖೆಡೆಯವರ ತಂದೆ ಧ್ಯಾನದೇವ್ ವಾಂಖೆಡೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆರ್ಯನ್ ಖಾನ್ ಡ್ರಗ್ ಕೇಸ್; ₹1.25 ಕೋಟಿ ಮಾನನಷ್ಟ ಮೊಕದ್ದಮೆ!
ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಮಹಾರಾಷ್ಟ್ರದಲ್ಲಿ ತೀವ್ರ ಜಟಾಪಟಿಗೆ ಕಾರಣವಾಗಿದೆ. ಸಮೀರ್ ವಾಂಖೆಡೆ ವಿರುದ್ಧ ಜಿದ್ದಿಗೆ ಬಿದ್ದರುವಂತೆ ಆರೋಪಗಳನ್ನು ಮಾಡುತ್ತಿರುವ ನವಾಬ್ ಮಲಿಕ್ ವಿರುದ್ಧ ವಾಂಖೆಡೆ ತಂದೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಅಧಿಕಾರದಲ್ಲಿದ್ದಾಗ ನನ್ನ ಮೇಲೇಕೆ ತನಿಖೆಗೆ ಆದೇಶಿಸಲಿಲ್ಲ?: ಫಡ್ನವೀಸ್'ಗೆ ನವಾಬ್ ಮಲಿಕ್ ತಿರುಗೇಟು
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಅವರು ಮಂಗಳವಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಭೂಗತ ಜಗತ್ತಿನ ಸಂಪರ್ಕವಿರುವ ಬಗ್ಗೆ ತಿಳಿದಿದ್ದರೆ ಅಧಿಕಾರದಲ್ಲಿದ್ದಾಗ ಏಕೆ ಫಡ್ನವೀಸ್ ನನ್ನ ವಿರುದ್ಧ ತನಿಖೆಗೆ ಆದೇಶಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಆರ್ಯನ್ ಖಾನ್ ಡ್ರಗ್ ಕೇಸ್: ದೇವೇಂದ್ರ ಫಡ್ನವೀಸ್, ನವಾಬ್ ಮಲಿಕ್ ಜಟಾಪಟಿ!
ಆರ್ಯನ್ ಖಾನ್ ಡ್ರಗ್ ಪ್ರಕರಣ ಮಹಾರಾಷ್ಟ್ರ ಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಮಹಾರಾಷ್ಟ್ರ ಪ್ರಸ್ತುತ ಮಂತ್ರಿಯಾಗಿರುವ ನವಾಬ್ ಮಲಿಕ್ ಮೇಲೆ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಗುರುತರ ಆರೋಪ ಮಾಡಿದ್ದಾರೆ.

ಸಮೀರ್ ವಾಂಖೆಡೆ ಸ್ಥೈರ್ಯಗೆಡಿಸುವ ಪ್ರಯತ್ನ: ಎನ್ ಸಿಬಿ ವಿರುದ್ಧ ನವಾಬ್ ಮಲಿಕ್ ಹೇಳಿಕೆ ನೀಡದಂತೆ ತಡೆಯಲು ಕೋರಿ ಪಿಐಎಲ್
ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿಯಾಗಿರುವ ಡ್ರಗ್ ಕೇಸಿನ ವಿಚಾರದಲ್ಲಿ ಎನ್ ಸಿಬಿ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಎನ್ ಸಿಪಿ ನಾಯಕ ನವಾಬ್ ಮಲಿಕ್ ಅವರಿಗೆ ತಡೆಯೊಡ್ಡಬೇಕು ಎಂದು ಮುಂಬೈ ನಿವಾಸಿಯೊಬ್ಬರು ಬಾಂಬೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದಾರೆ.

ಸಮೀರ್ ವಾಂಖೆಡೆ ನಂತರ ವಿಜಿಲೆನ್ಸ್ ಮುಖ್ಯಸ್ಥರ ವಿರುದ್ಧ ಆರೋಪ; ಜ್ಞಾನೇಶ್ವರ ಸಿಂಗ್ ವಿರುದ್ಧ ಹರಿಹಾಯ್ದ ಎನ್ ಸಿಪಿ
ಎನ್ ಸಿಬಿ ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪದ ತನಿಖೆ ನಡೆಸುತ್ತಿರುವ ಜಾಗೃತ ದಳ ಅಧಿಕಾರಿ ಜ್ಞಾನೇಶ್ವರ್ ಸಿಂಗ್ ವಿರುದ್ಧ ಎನ್ ಸಿಪಿ ಇದೀಗ ಹರಿಹಾಯ್ದಿದೆ. ಇಷ್ಟು ದಿನ ಎನ್ ಸಿಪಿ ನಾಯಕ ನವಾಬ್ ಮಲಿಕ್ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿಕೊಂಡು ಬಂದಿದ್ದರು.

'ಸಮೀರ್ ವಾಂಖೆಡೆ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ': ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೊಸ ಆರೋಪ
ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದು, ಅಧಿಕಾರಿಯ ದುರುಪಯೋಗ, ತಪ್ಪು ಕೆಲಸದ ಬಗ್ಗೆ ಎನ್ ಸಿಬಿಯಲ್ಲಿರುವವರು ಬರೆದಿರುವ ಪತ್ರದ ಪ್ರತಿಯನ್ನು ಸಂಸ್ಥೆಯ ಮುಖ್ಯಸ್ಥರಿಗೆ ಹಸ್ತಾಂತರಿಸುವುದಾಗಿ ಮಹಾರಾಷ್ಟ್ರ ಸರ್ಕಾರದ ಸಚಿವ ಎನ್ ಸಿಪಿ ನಾಯಕ ನವಾಬ್ ಮಲಿಕ್ ಹೇಳಿದ್ದಾರೆ.

ಕ್ರೂಸ್ ಡ್ರಗ್ಸ್ ಪ್ರಕರಣ: ಬಿಜೆಪಿ ನಾಯಕನ ಸಂಬಂಧಿ, ಇತರ ಇಬ್ಬರ ಬಿಡುಗಡೆ ಕುರಿತು ತನಿಖೆ ನಡೆಸಿ; ಸಚಿವ ನವಾಬ್ ಮಲಿಕ್ ಒತ್ತಾಯ
ಮುಂಬೈನ ಮಾಜಿ ಬಿಜೆಪಿ ಯುವ ಘಟಕದ ಅಧ್ಯಕ್ಷ ಮೋಹಿತ್ ಕುಂಭೋಜ್ ಅವರ ಸಂಬಂಧಿ ರಿಷಬ್ ಸಚ್‌ದೇವ ಮತ್ತು ಇತರ ಇಬ್ಬರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಬಿಡುಗಡೆ ಮಾಡಿದ ಬಗ್ಗೆ ತನಿಖೆ ನಡೆಸಬೇಕು...

ಮಹಾರಾಷ್ಟ್ರದಲ್ಲಿ ಪ್ರವಾಹದಿಂದ 251 ಮಂದಿ ಸಾವು, 13 ಜಿಲ್ಲೆಗಳು ಪ್ರವಾಹ ಪೀಡಿತ: ನವಾಬ್ ಮಲಿಕ್
ನಿರಂತರ ಮಳೆಯ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹದಿಂದಾಗಿ ರಾಜ್ಯದ 13 ಜಿಲ್ಲೆಗಳು ತೀವ್ರವಾಗಿ ಬಾಧಿತವಾಗಿದ್ದು, ಸುಮಾರು 251 ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇನ್ನೂ 100 ಮಂದಿ ನಾಪತ್ತೆಯಾಗಿದ್ದಾರೆ....

